ಬೆಳಿಗ್ಗೆನೇ ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು..!!!

ಬೆಳಿಗ್ಗೆನೇ ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು..!!!

ಬೆಳಗಾವಿ : ಶನಿವಾರ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವಂತೆ ವಾಹನ ನಿಲುಗಡೆ ಮಾಡಿದ ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾಲೀಕರಿಗೆ ಬೆಳಗಾವಿಯ ಸಂಚಾರಿ ಪೊಲೀಸರು ದಂಡ ವಿಧಿಸಿ, ಬುದ್ದಿ ಹೇಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ..

ನಾಲ್ಕನೆಯ ಶನಿವಾರ ರಜೆ ಇರುವ ಕಾರಣ, ಮುಂಜಾನೆಯೇ ಜನರು ನಗರದಲ್ಲಿ ಆಗಮಿಸಿ, ತಮ್ಮ ವಾಹನಗಳನ್ನು ಸಂಚಾರ ನಿಯಮ ಮೀರಿದ, ಚಿತ್ರಾ ಚಿತ್ರಮಂದಿರದ ರಸ್ತೆಯಲ್ಲಿ ನಿಲುಗಡೆ ಮಾಡಿ, ತಮ್ಮ ಚಟುವಟಿಕೆ ಹಾಗೂ ಕೆಲಸ ಕಾರ್ಯದಲ್ಲಿ ವ್ಯಸ್ಥರಾಗಿದ್ದರು..

ಹಲವಾರು ಕಾರುಗಳು ನಿಲ್ದಾಣವಲ್ಲದ ಸ್ಥಳದಲ್ಲಿ ಇದ್ದು, ಸಂಚಾರಕ್ಕೆ ಅಡತಡೆ ಆದಾಗ, ವಾಹನಗಳ ಮಾಲೀಕರು ಮಾತ್ರ ಸ್ಥಳದಲ್ಲಿ ಇರದೇ ಗೊಂದಲಕ್ಕೆ ಕಾರಣವಾಗಿದ್ದು, ನಂತರ ಸಂಚಾರಿ ಪೊಲೀಸರು ಬೇಕಾಬಿಟ್ಟಿಯಾಗಿ ಪಾರ್ಕ್ ಆಗಿರುವ ವಾಹನಕ್ಕೆ ಬೀಗ ಜಡಿದು, ಮಾಲೀಕರು ಬಂದ ನಂತರ ತಿಳಿ ಹೇಳಿ, ನಿಯಮ ಉಲ್ಲಂಘನೆಗೆ ದಂಡ ವಿಧಿಸಿದರು..

ಕಳೆದ ಕೆಲವು ದಿನಗಳಿಂದ ಬೆಳಗಾವಿ ನಗರದ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಚಿತ್ರ ಥೇಟರ್ ರಸ್ತೆ, ಸಮಾದೇವಿ ಗಲ್ಲಿ, ಇನ್ನೂ ಅನೇಕ ಜನನಿಬಿಡ ಪ್ರದೇಶಗಳಲ್ಲಿ ಪೋಲಿಸರು ನಿರಂತರವಾಗಿ ಸಂಚರಿಸುತ್ತಿದ್ದು, ಅನಧಿಕೃತವಾಗಿ ನಿಲುಗಡೆಯಾದ ವಾಹನಗಳು, ರಸ್ತೆ ಆವರಿಸಿದ ಅಂಗಡಿಗಳು, ಆಟೋರಿಕ್ಷಾ, ಕೈಗಾಡಿ, ಬೀದಿಬದಿ ವ್ಯಾಪಾರಿಗಳು ಇವರನ್ನೆಲ್ಲ ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ..

ಈ ಮೂಲಕ ನಗರದಲ್ಲಿ ಸಾರ್ವಜನಿಕರು ಸಂಚರಿಸಲಿಕ್ಕೆ, ವ್ಯವಹರಿಸಲಿಕ್ಕೆ, ಸಂಚಾರದ ಕಿರಿಕಿರಿ ಉಂಟಾಗದಂತೆ, ಶಿಸ್ತು ಹಾಗೂ ಸುವ್ಯವಸ್ಥೆಯ ವಾತಾವರಣಕ್ಕೆ ಕಾರಣರಾಗಿದ್ದು, ಸಂಚಾರಿ ಹಾಗೂ ನಾಗರಿಕ ಪೊಲೀಸ್ ಸಿಬ್ಬಂದಿಯ ಈ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ..

ವರದಿ ಪ್ರಕಾಶ ಕುರಗುಂದ..