ಬೆಳಗಾವಿ ಪೊಲೀಸ್ ಪೇದೆಯ ಸಾಹಸಕ್ಕೆ ಸಹಸ್ರಾರು ಶಹಬ್ಬಾಸ್ ನೀಡಿದ ಕರುನಾಡು..!!!

ಬೆಳಗಾವಿ ಪೊಲೀಸ್ ಪೇದೆಯ ಸಾಹಸಕ್ಕೆ ಸಹಸ್ರಾರು ಶಹಬ್ಬಾಸ್ ನೀಡಿದ ಕರುನಾಡು..!!!

ಬೆಳಗಾವಿ : ನಮ್ಮ ಕರ್ನಾಟಕ ಪೊಲೀಸ್ ಇಲಾಖೆಯೇ ಹಾಗೆ, ಮೈ ಮೇಲೆ ಖಾಕಿ ಹಾಕಿದರೆ ಸಾಕು, ವೀರಶೂರರ ಆತ್ಮವಿಶ್ವಾಸದ ಸಂಚಲನವೇ ಇರುತ್ತದೆ, ಯಾರಿಗೆ ಆಗಲಿ ಆಪತ್ತು, ಸಮಸ್ಯ, ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ಆಗುವ ಸನ್ನಿವೇಶ ಕಂಡುಬಂದಲ್ಲಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹೋರಾಡಿ ಜಯಿಸುವ ಸಂತತಿ ಎಂದರೆ ತಪ್ಪಾಗಲಾರದು..

ಹಿಂದೆ ಹಲವಾರು ಸಂದಿಗ್ಧ ಪರಿಸ್ಥಿತಿಗಳಲ್ಲಿ ನಮ್ಮ ರಾಜ್ಯ ಪೊಲೀಸರು ಅತ್ಯಂತ ಚಾಣಾಕ್ಷ ಮತ್ತು ಸಾಮರ್ಥ್ಯದಿಂದ ಹೋರಾಡಿ ಸಮಸ್ಯಗಳಿಗೆ ಇತಿ ಹಾಡಿದ್ದಾರೆ, ಅದೇ ರೀತಿಯ ಘಟನೆ ಇಂದು ರಾಜ್ಯದ ಎರಡನೇ ರಾಜಧಾನಿಯಾದ ಬೆಳಗಾವಿಯಲ್ಲಿ ನಡೆದಿದ್ದು, ಪೊಲೀಸರ ಸಾಹಸಕ್ಕೆ ಮತ್ತೊಂದು ನಿದರ್ಶನವಾಗಿದೆ..

ಇಂದು ಸಂಜೆ ಸುಮಾರು 4.45ಕ್ಕೆ ಬೆಳಗಾವಿ ಕೋಟೆ ಕೆರೆಯಲ್ಲಿ (ಕಿಲ್ಲಾ ಕೆರೆ) ಒಬ್ಬ ಮಹಿಳೆ, ಕಾಲುಜಾರಿ ನೀರಿನಲ್ಲಿ ಬಿದ್ದು, ಈಜು ಬಾರದೇ ಮುಳುಗುವ ಪರಿಸ್ಥಿತಿಯಲ್ಲಿ ಇದ್ದಳು, ಸುತ್ತಮುತ್ತ ಜನರಿದ್ದರೂ ಯಾರೂ ನೀರಿಗೆ ಇಳಿದು ಕಾಪಾಡುವ ಧೈರ್ಯ ಮಾಡಿರಲಿಲ್ಲ..

ಮಹಿಳೆ ನೀರಲ್ಲಿ ಮುಳುಗುತ್ತಿದ್ದ ವಿಷಯ ತಿಳಿದು ಅಲ್ಲೇ ಹತ್ತಿರದಲ್ಲೇ ಸಂಚಾರದ ಕರ್ತವ್ಯ ಮಾಡುತ್ತಿದ್ದ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ ಪೇದೆ ಆದಂತ ಕಾಶಿನಾಥ್ ಈರಗಾರ ಅವರು ಯಾವುದೇ ಯೋಚನೆ ಮಾಡದೇ ತಮ್ಮ ಜೀವನವನ್ನು ಪಣಕ್ಕಿಟ್ಟು, ಮಹಿಳೆಯನ್ನು ರಕ್ಷಿಸಿ ಇಡೀ ಪೊಲೀಸ್ ಇಲಾಖೆಗೆ ಹೆಮ್ಮೆಯನ್ನು ತರುವಂತಹ ಕೆಲಸ ಮಾಡಿದ್ದಾರೆ..

ಕಾಶಿನಾಥ ಈರಗಾರ ಅವರ ಈ ಸಾಹಸಕ್ಕೆ ಇಲಾಖೆಯ ಮೇಲಾಧಿಕಾರಿಗಳು, ಗಣ್ಯರು, ಸಾರ್ವಜನಿಕರು, ಸಮಾಜದ ಸರ್ವ ಕ್ಷೇತ್ರದ ಜನರು ಮೆಚ್ಚುಗೆ ಸೂಚಿಸಿ, ಶುಭಾಶಯ ತಿಳಿಸಿದ್ದಾರೆ, ಇದು ಇಡೀ ಪೊಲೀಸ್ ಇಲಾಖೆಯ ಹೆಮ್ಮೆ ಪಡುವ ವಿಷಯವಾಗಿದ್ದು, ಎಲ್ಲಾ ಸಿಬ್ಬಂದಿಗಳಿಗೆ ವೃತ್ತಿಪರತೆಯ ಸ್ಪೂರ್ತಿ ಆದಂತಿದೆ…

ವರದಿ ಪ್ರಕಾಶ ಕುರಗುಂದ…