ಕೆಡಿಪಿ ಸಭೆಯಲ್ಲಿ ಕಂಗೊಳಿಸಿದ ಸಂಜೀವಿನಿ ಜೀವನೋಪಾಯ ಯೋಜನೆಯ ಕರಕುಶಲ ಮಳಿಗೆ…
ಬೆಳಗಾವಿ : ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಬೆಳಗಾವಿ ಅಡಿಯಲ್ಲಿರುವ ಸಂಜೀವಿನಿ DAY-NRLM ಯೋಜನೆಯಡಿ, ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾ.ಪಂಚಾಯತಿಯ ಚಿಕಾಲಗುಡ ಗ್ರಾಮದ ಶ್ರೀ ಶ್ರಮಜೀವಿ ಸಂಜೀವಿನಿ ವನ – ಧನ ವಿಕಾಸ ಕೇಂದ್ರದಿಂದ ಜನಾಕರ್ಷಕವಾದ ಕರಕುಶಲ ಮಳಿಗೆ ಪ್ರಾರಂಭವಾಗಿತ್ತು..
ವಿಕಾಸ ಕೇಂದ್ರದ ಮಹಿಳಾ ಸದಸ್ಯರು ತಯಾರಿಸಿದ ಬಾಳೆ ನಾರಿನಿಂದ ತಯಾರಿಸಿದ ವಿವಿಧ ಸುಮಾರು 30 ಕ್ಕೂ ಹೆಚ್ಚು ವಸ್ತುಗಳು ಹಾಗೂ ಹ್ಯಾಂಡ್ ಮೆಡ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತಿಯ ತ್ರೈಮಾಸಿಕ ಸಭೆಯ ಅಂಗವಾಗಿ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧ ದಲ್ಲಿ ಆಯೋಜಿಸಿದ ಪ್ರದರ್ಶನವನ್ನು ಮೇಳವನ್ನು ಮಾನ್ಯ ಸಚಿವರು ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ಯೋಜನಾ ನಿರ್ದೇಶಕರು ಹಾಗೂ ಶಾಸಕರು ವೀಕ್ಷಿಸಿ ಸ್ವ ಸಹಾಯ ಗುಂಪುಗಳ ವಸ್ತುಗಳ ಕುರಿತು ಶ್ಲಾಘಿಸಿದರು.
ಈ ವೇಳೆ ಸಚಿವರು ಹಾಗೂ ಇತರ ಅಧಿಕಾರಿಗಳೊಂದಿಗೆ ಮಳಿಗೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು 4000 ಸಾವೀರ ರೂ ಗಳ ಮೌಲ್ಯದ ಕೌದಿ (Quilt) ಖರೀದಿಸಿ ಸಂಘಕ್ಕೆ ಪ್ರೋತ್ಸಾಹಿಸಿದರು.
ಇದೇ ಸಂದರ್ಭದಲ್ಲಿ ಮಾನ್ಯ ಉಸ್ತುವಾರಿ ಸಚಿವರು ಸತೀಶ್ ಜಾರಕಿಹೊಳಿ ಮಾತನಾಡಿ ಜಿಲ್ಲೆಯಲ್ಲಿ ಸ್ವ ಸಹಾಯ ಗುಂಪುಗಳಿಂದ ಉತ್ಪಾದಿಸುವ ವಸ್ತುಗಳಿಗೆ ನಿರಂತರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಗೆ ಸೂಚನೆ ನೀಡಿದರು..
ವರದಿ ಪ್ರಕಾಶ ಕುರಗುಂದ..