ಮಣಿಪುರ ಹಿಂಸಾಚಾರ ಮತ್ತು ಅತಾಚರಗಳನ್ನು ಹತ್ತಿಕ್ಕದೇ ಇರುವದು ದೇಶದ ದುರಂತ…

ಮಣಿಪುರ ಹಿಂಸಾಚಾರ ಮತ್ತು ಅತಾಚರಗಳನ್ನು ಹತ್ತಿಕ್ಕದೇ ಇರುವದು ದೇಶದ ದುರಂತ…

ಸಿದಗೌಡ ಮೋದಗಿ ಅಸಮಾಧಾನ…

ಬೆಳಗಾವಿ : ಮಂಗಳವಾರ ನಗರದ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಎದ್ದೇಳು ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿದಗೌಡ ಮೋದಗಿ ಅವರು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದರು..

ಮಣಿಪುರ ರಾಜ್ಯದ ಕಾಂಗ್ ಪೋಕ್ಷಿ ಜಿಲ್ಲೆಯಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಮಹಿಳೆಯರ ಸಾಮೂಹಿಕ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಎದ್ದೇಳು ಕರ್ನಾಟಕ ಬೆಳಗಾವಿ ಜಿಲ್ಲೆಯ ಸದಸ್ಯರು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಿದರು..

ಮಣಿಪುರದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದು, ದೇಶದ ಪ್ರಧಾನಿ ಮತ್ತು ಗೃಹ ಸಚಿವರು ಅಲ್ಲಿ ಹೋಗಿ ಶಾಂತತೆ ಕಾಪಾಡದಿರುವುದು ದುರಂತವೇ ಸರಿ ಎಂದರು..

ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿಯವರು ನಮ್ಮ ದೇಶದಲ್ಲಿ (ಮಣಿಪುರ) ನಡೆಯುತ್ತಿರುವ ಮಹಿಳಾ ಬೆತ್ತಲೆ ಮೆರವಣಿಗೆ, ದೌರ್ಜನ್ಯ, ಅತ್ಯಾಚಾರ, ಹಿಂಸಾಚಾರಗಳನ್ನು ನೋಡಿಕೊಂಡು, ಅವುಗಳನ್ನು ನಿಯಂತ್ರಿಸದೇ ವಿಫಲವಾಗಿರುವುದು ದೇಶದ ದುರಂತ ಎಂದು ತಮ್ಮ ಅಸಮಾಧಾನ ಹೊರಹಾಕಿದರು..

ಆದಷ್ಟೂ ಬೇಗ ಪರಿಸ್ಥಿತಿಯನ್ನು ನಿಯಂತ್ರಿಸಿ, ದೌರ್ಜನ್ಯ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಿ, ಬಡ ಬುಡಕಟ್ಟು ಜನಾಂಗದ ಮಹಿಳೆಯರಿಗೆ ನ್ಯಾಯ ನೀಡುವಂತ ಕಾರ್ಯವನ್ನು ಸರ್ಕಾರ ಮಾಡಲಿ ಎಂದು ಮನವಿ ಮಾಡಿದರು..

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಈ ವೇಳೆ, ಸಾಮಾಜಿಕ ಹೋರಾಟಗಾರ ಸುಜಿತ್ ಮೂಲಗೋಡ, ರಾಜು ಗಾಣಗಿ, ನಾಗರಾಜ್, ಜಿ ವಿ ಕುಲಕರ್ಣಿ, ಇನ್ನೂ ಅನೇಕರು ಭಾಗಿಯಾಗಿದ್ದರು…

ವರದಿ ಪ್ರಕಾಶ ಕುರಗುಂದ..