ಬೆಳಗಾವಿ ನಗರದಲ್ಲಿ ಮುಂದುವರೆದ ಮಳೆರಾಯನ ಅಬ್ಬರ..!!!

ಬೆಳಗಾವಿ ನಗರದಲ್ಲಿ ಮುಂದುವರೆದ ಮಳೆರಾಯನ ಅಬ್ಬರ

ಬೆಳಗಾವಿ : ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಗೆ ನಗರದ ವಡಗಾವಿ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ..

ಬೆಳಗಾವಿ ನಗರದ ಸಪ್ಪಾರ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ..

ಕಳೆದ ನಾಲ್ಕು ದಿನಗಳಿಂದ ಜಲಾವೃತವಾಗಿ ನೀರಿನಲ್ಲೇ ಜೀವನ ನಡೆಸುತ್ತಿರುವವರ ಮನೆಯ ಸಾಮಗ್ರಿಗಳು, ಬೆಲೆಬಾಳುವ ವಸ್ತುಗಳು, ಜೀವನಕ್ಕೆ ಬೇಕಾದ ಸಕಲ ಪರಿಕರಗಳು ನೀರಿನಲ್ಲೇ ಮುಳುಗಿ, ಸಂಕಷ್ಟದ ಪರಿಸ್ಥಿತಿ ಒದಗಿಬಂದಿದೆ..

ಇಷ್ಟಾದರೂ ಇಲ್ಲಿ ಯಾರೂ ಬಂದು ನೋಡುವರಿಲ್ಲ, ಕೇಳುವವರಿಲ್ಲ, ಜನಪ್ರತಿನಿಧಿಗಳು ಬಂದು ಸಮಸ್ಯ ಕೇಳುತ್ತಿಲ್ಲ, ಅದೇರೀತಿ ಸಂಭಂದಪಟ್ಟ ಅಧಿಕಾರಿಗಳೂ ಕೂಡಾ ಇತ್ತ ಗಮನ ಹರಿಸುತ್ತಿಲ್ಲ, ಸ್ಥಳಕ್ಕೆ ಬೇಟಿ ನೀಡಿ ಸಮಸ್ಯ ಆಲಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಾಗೂ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ವರದಿ ಪ್ರಕಾಶ ಕುರಗುಂದ..