ಅಗಸಗೆ ಗ್ರಾಪಂ ಅಧ್ಯಕ್ಷರಾಗಿ ಅಮೃತ, ಉಪಾಧ್ಯಕ್ಷರಾಗಿ ಶೋಭಾ ಅವಿರೋಧ ಆಯ್ಕೆ..
ಕಾಂಗ್ರೆಸ್ ಜಯಭೇರಿ, ಬಿಜೆಪಿ ದೊಳಿಪಟ..
ಕೈಗೆ ಶಕ್ತಿ ನೀಡಿದ, ಶಾಸಕರ ಆಪ್ತಸಹಾಯಕರ ಕಾರ್ಯವೈಖರಿ..
ಬೆಳಗಾವಿ: ತಾಲೂಕಿನ ಅಗಸಗೆ ಗ್ರಾಪಂನ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಬುಧವಾರ ಗ್ರಾಪಂ ಕಾರ್ಯಾಲಯದಲ್ಲಿ ನಡೆಯಿತು. ಅಧ್ಯಕ್ಷರಾಗಿ ಅಮೃತ ಮುದ್ದೆನ್ನವರ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಕುರೆನ್ನವರ ಅವಿರೋಧವಾಗಿ ಆಯ್ಕೆಯಾದರು.
ಈ ಕುರಿತು ನಿನ್ನೆಯಷ್ಟೇ ಸೇಫ್ ಗ್ರೂಪ್ ನಲ್ಲಿ ಅಮೃತ ಹಾಗೂ ಶೋಭಾ ಅವರೇ ಅಧ್ಯಕ್ಷ ಉಪಾಧ್ಯಕ್ಷ ಆಗುವುದು ಖಚಿತ ಎಂದು ವರದಿ ಮಾಡಲಾಗಿತ್ತು.
13 ಸದಸ್ಯರನ್ನು ಹೊಂದಿರುವ ಅಗಸಗೆ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ 7 ಜನ ಬಿಜೆಪಿ ಸದಸ್ಯರು, 6 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯ ಮೂವರು ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರತ್ಯಕ್ಷ ಬೆಂಬಲ ನೀಡಿದ್ದರ ಫಲವಾಗಿ, ಕಾಂಗ್ರೆಸ್ 9 ಸದಸ್ಯ ಬಲ ಹೊಂದುವುದರೊಂದಿಗೆ ಅಮೃತ ಮುದ್ದೆಣ್ಣವರ ಹಾಗೂ ಶೋಭಾ ಕುರೆಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
👉ಬಿಜೆಪಿಗೆ ಭಾರೀ ಮುಖ ಭಂಗ….
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದ ಬಿಜೆಪಿ ಸ್ಥಳೀಯ ನಾಯಕರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬಿಜೆಪಿಯ ಮೂವರು ಸದಸ್ಯರಾದ ಚೆನ್ನಮ್ಮ ತಿರಮಾಳೆ, ರಾಜು ಬಾಳೇಕುಂದ್ರಿ ಹಾಗೂ ಹರಿಬೋಲ ಬೆಂಬಲ ಸೂಚಿಸಿರುವುದರಿಂದ ಸ್ಥಳೀಯ ಬಿಜೆಪಿ ನಾಯಕರಿಗೆ ಭಾರೀ ಮುಖ ಭಂಗವಾದಂತಾಗಿದೆ…

👉 ಫಲಿಸಿದ ಶಾಸಕರ ಆಪ್ತ ಸಹಾಯಕರ ಕಾರ್ಯತಂತ್ರ…..
ಕಳೆದ ವಿಧಾನಸಭೆ ಚುನಾವಣೆ ಸಮಯದಿಂದಲೆ ಬಿಜೆಪಿ ಬೆಂಬಲಿತ ಈ ಮೂರು ಸದಸ್ಯರು, ಶಾಸಕರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ ಅವರ ಸಂಪರ್ಕದಲ್ಲಿ ಇದ್ದರು, ಶಾಸಕರ ಆಪ್ತಸಹಾಯಕರ ಕಾರ್ಯತಂತ್ರದ ಪ್ರತಿಫಲವಾಗಿ ಇಂದು ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಭಹಿರಂಗವಾಗಿ ಬೆಂಬಲ ಸೂಚಿಸುವುದರಿಂದ ಶಾಸಕರ ಆಪ್ತ ಸಹಾಯಕರ ತಂತ್ರ ಫಲಿಸಿ , ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ವರದಿ, ಸಂತೋಷ್ ಮೇತ್ರಿಯೊಂದಿಗೆ ಪ್ರಕಾಶ ಕುರಗುಂದ..