ಆಂತರಿಕ ನಿಯೋಜನೆಯಲ್ಲಿ ಕಂದಾಯ ವಿಭಾಗದ ಸಿಬ್ಬಂದಿಗೆ ಆದ್ಯತೆ ನೀಡಿ..
ಕಂದಾಯ ನೌಕರರ ಸೇವಾ ಹಿರಿತನ ಪರಿಗಣಿಸಿ ನಿಯೋಜನೆ ಮಾಡಿ..
ಪಾಲಿಕೆ ಕಂದಾಯ ಸಿಬ್ಬಂದಿಗಳಿಂದ ಉಪ ಆಯುಕ್ತರಿಗೆ (ಕಂದಾಯ) ಮನವಿ..
ಬೆಳಗಾವಿ : ಪಾಲಿಕೆಯ ಕಂದಾಯ ವಿಭಾಗದ ಆಂತರಿಕ ನಿಯೋಜನೆಗಳಲ್ಲಿ ಕಂದಾಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಹಾಗೂ ಅವರ ಸೇವಾ ಹಿರಿತನವನ್ನು ಪರಿಗಣಿಸಿ ಆಂತರಿಕ ವರ್ಗಾವಣೆಗಳನ್ನು ಮಾಡಬೇಕೆಂದು, ಪಾಲಿಕೆ ಕಂದಾಯ ಸಿಬ್ಬಂದಿಗಳು ಉಪಆಯುಕ್ತ (ಕಂದಾಯ) ಡಾ ಸಿದ್ದು ಹುಲ್ಲೋಳ್ಳಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ದಿನಾಂಕ 17/08/2026 ರಂದು ಪಾಲಿಕೆಯ ಕಂದಾಯ ವಿಭಾಗದಲ್ಲಿ ತಮ್ಮ ಬೇಡಿಕೆಯ ಮನವಿ ಪತ್ರ ನೀಡಿದ ನೌಕರರು, ಕಂದಾಯ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಂತರಿಕ ನಿಯೋಜನೆ ಮಾಡುವಾಗ ಕಂದಾಯ ಶಾಖೆಯ ಮೂಲ ಸಿಬ್ಬಂದಿಗಳ ಸೇವಾ ಹಿರಿತನವನ್ನು ಪರಿಗಣಿಸಬೇಕು, ಹಾಲಿ ಕಂದಾಯ ಶಾಖೆಯಲ್ಲಿ ಕಾರ್ಯ ನಿರ್ವಹಿಸುವ ಕಂದಾಯ ಸಿಬ್ಬಂದಿಗಳಿಗೆ ಆದ್ಯತೆ ನೀಡಬೇಕು ಎಂಬ ಕೋರಿಕೆ ಇಟ್ಟಿದ್ದಾರೆ.

ಬೇರೆ ಶಾಖೆಯ ಸಿಬ್ಬಂದಿಗಳು ನಿಯೋಜನೆ ಆದಲ್ಲಿ ಕಂದಾಯ ಶಾಖೆಯ ಸಿಬ್ಬಂದಿಗಳಿಗೆ ಕೆಲ ಒತ್ತಡಗಳು ಆಗಬಹುದು, ಸೇವಾ ಹಿರಿತನ ಪರಿಗಣಿಸಿ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಆದ್ಯತೆ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಸಿಬ್ಬಂದಿಗಳಾದ ಯಲ್ಲೇಶ ಬಚ್ಚಲಪುರಿ, ಸಂತೋಷ್ ಒಸಿ, ಎಸ್ ಎಸ್ ಪಾಟೀಲ, ಮಾರುತಿ ತಳವಾರ, ಆನಂದ ಇಟಗಿ, ಎಲ್ ಬಿ ದ್ಯಾವಣ್ಣವರ, ಬಸವರಾಜ ಕೋಲಕಾರ, ಸಾಗರ ಕಾಂಬ್ಳೆ, ಬಿ ಎಸ್ ತಳಕೇರಿ, ಪವನ ದೇವರವಾಡಿ, ಸುರೇಶ ಆಲೂರ್, ಲಕ್ಷ್ಮಣ ಕಲ್ಪತ್ರಿ, ನಿಂಗಪ್ಪ ಬಿ ಡಿ, ಭರತ ಕೊಲ್ಕಾರ, ಪಿ ಪಿ ಪಟಾನ, ವಿ ಬಿ ಕದಮ ಮತ್ತಿತರರು ಇದ್ದರು..
ವರದಿ ಪ್ರಕಾಶ್ ಬಿ ಕೆ..