ಕನ್ನಡಪರ ಸಂಘಟನೆಗಳ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಶಾಸಕ ಅಭಯ ಪಾಟೀಲ್..
ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ
ಪರವಾದ ಗೊತ್ತುವಳಿ ಅಂಗೀಕರಿಸುವ ಸಂಬಂಧ ಈಗಾಗಲೇ
ರಾಜ್ಯ ಸರಕಾರದ ಅಭಿಪ್ರಾಯ ಕೋರಿ ಪತ್ರ ಬರೆಯಲಾಗಿದ್ದು ಸರಕಾರದ ಉತ್ತರ ಬಂದ ಕೂಡಲೇ
ಮಹಾಪೌರರು ಮತ್ತು ಉಪಮಾಹಾಪೌರರ ಜೊತೆ
ಚರ್ಚಿಸಿ ಗೊತ್ತುವಳಿಯ ಬಗ್ಗೆ ನಿರ್ಧಾರ ಕೈಕೊಳ್ಳಲಾಗುವದೆಂದು ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲ ಅವರು ಹೇಳಿದ್ದಾರೆ..
ಸೋಮವಾರ ದಿನ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಬಾಳಪ್ಪಾ ಗುಡಗೇನಟ್ಟಿ ಹಾಗೂ ಜಿಲ್ಲೆಯ
ಕನ್ನಡಪರ ಸಂಘಟನೆಗಳ ಮುಖಂಡರು ಸೇರಿ ಪಾಲಿಕೆಯಲ್ಲಿ ಕನ್ನಡಪರ ಗೊತ್ತುವಳಿ ಅಂಗೀಕರಿಸಲು ಮನವಿ ನೀಡಿದ್ದು ಶಾಸಕರು ಅದಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ..

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮನ್ನು ಭೇಟಿಯಾದ ಕನ್ನಡ ಸಂಘಟನೆಗಳಿಗೆ ಈ ಭರವಸೆ ನೀಡಿದ ಅವರು, ತಮಗೂ ಕನ್ನಡ ನಾಡು, ನುಡಿಯ
ಬಗ್ಗೆ ಅಭಿಮಾನವಿದ್ದು ಗೊತ್ತುವಳಿ ಅಂಗೀಕಾರದ ಸಂಬಂಧ ಇದೇ ಮೊದಲ ಬಾರಿಗೆ ಕನ್ನಡ ಮುಖಂಡರು
ಭೆಟ್ಟಿಯಾಗುತ್ತಿದ್ದೀರೆಂದು ಹೇಳಿದರು.
ಗೊತ್ತುವಳಿ ಅಂಗೀಕಾರದ ಕುರಿತು ತಾವು ಸಹ ಕೆಲವು ಕಾನೂನು ಪರಿಣಿತರೊಂದಿಗೆ ಚರ್ಚೆ ನಡೆಸಿರುವುದಾಗಿ
ಅಭಯ ಪಾಟೀಲ ಅವರು ನಿಯೋಗಕ್ಕೆ ತಿಳಿಸಿದರು.
ಗೊತ್ತುವಳಿಯನ್ನು ಪಾಲಿಕೆಯಲ್ಲಿ ಅಂಗೀಕರಿಸುವುದಾಗಿ ಮಹಾಪೌರರು ಮತ್ತು ಉಪಮಾಹಾಪೌರರು ಕಳೆದ ಮೂರು ತಿಂಗಳಿಂದ ಭರವಸೆ ನೀಡುತ್ತಲೇ ಬಂದಿದ್ದರು.ಆದರೆ ಯಾವದೇ ನಿರ್ಧಾರ
ಕೈಗೊಂಡಿಲ್ಲ.ಆದ್ದರಿಂದ ಮಧ್ಯ ಪ್ರವೇಶಿಸಬೇಕೆಂದು
ನಿಯೋಗ ಸಲ್ಲಿಸಿದ ಮನವಿಯಲ್ಲಿ ಶಾಸಕರನ್ನು ಒತ್ತಾಯಿಸಲಾಗಿದೆ.
ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕಿತ್ತೂರು ಕರ್ನಾಟಕ ಸೇನೆಯ
ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಸಿಗಿಹಳ್ಳಿ, ಕನ್ನಡ ಮುಖಂಡರಾದ ಮಲ್ಲಪ್ಪ ಗುಡಗೇನಟ್ಟಿ, ಸಿದ್ದಲಿಂಗಪ್ಪ ಸುಣಕುಪ್ಪಿ, ರಾಜು ಕೋಲಾ,
ಸಾಗರ ಬೋರಗಲ್ಲ, ಸಂತೋಷ ತಳ್ಳಿಮನಿ, ಶಿವಾಜಿ ಗುರವ,
ಆನಂದ ಬಿಲಾವರ, ರಾಹುಲ್ ಭೋಸ್ಲೆ, ಗಜಾನನ ಪಿಸ, ಸಣ್ಣತಮ್ಮ ಮೂಕನವರ ಇರ್ಫಾನ್ ಅತ್ತಾರ
ಮುಂತಾದವರು ನಿಯೋಗದಲ್ಲಿದ್ದರು..