ಕೇಂದ್ರ ಸರ್ಕಾರದಿಂದ ಜನಪರವಾದ ಬಜೆಟ್ ಮಂಡನೆ..
ವಿಕಸಿತ ಭಾರತದ ಆಕಾಂಕ್ಷೆಗಳನ್ನು ಈಡೇರಿಸುವ ಬಜೆಟ್..
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್..
ಬೆಳಗಾವಿ : ಒಂಬತ್ತನೇ ಬಾರಿಗೆ ದಾಖಲೆಯ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಇಂದು ಮಂಡಿಸಲಾದ ಬಜೆಟ್ ಜನಪರ ಹಾಗೂ ನಮ್ಮ ಕರ್ತವ್ಯವನ್ನು ಎತ್ತಿಹಿಡಿಯುವ ವಿಕಸಿತ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ್ ತಿಳಿಸಿದ್ದಾರೆ.
ರವಿವಾರ ದಿನಾಂಕ 01/02/2026 ರಂದು ಸುದ್ಧಿಗಾರರಿಗೆ ಮಾಹಿತಿ ನೀಡಿದ ಅವರು, ಇಂದಿನ ಬಜೆಟ್ ಭವಿಷ್ಯ ಆಧಾರಿತ ಬಜೆಟ್ ಆಗಿದ್ದು ಅಭಿವೃದ್ಧಿ, ಬೆಳವಣಿಗೆ, ಉತ್ಪಾದನೆ ಮತ್ತು ಸೇವಾ ವಲಯವನ್ನು ಬಲಪಡಿಸುವ ಸಮತೋಲಿತ ಬಜೆಟ್ ಆಗಿದೆ. ರೈತರ ಆದಾಯವನ್ನು ಹೆಚ್ಚಿಸುವತ್ತ, ಯುವಕರಿಗೆ ಅವಕಾಶಗಳು ಮತ್ತು ಮಹಿಳಾ ಸಬಲೀಕರಣದ ದೃಷ್ಟಿಕೋನವಾಗಿದೆ.

ಉದ್ಯೋಗ ಮತ್ತು ಕೃಷಿ ವಲಯಕ್ಕೆ ಆದ್ಯತೆ, ಖಾದಿ ಗ್ರಾಮೋದ್ಯೋಗಕ್ಕೆ ಒತ್ತು, ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲದ ನೆರವು, ಬಂಡವಾಳ ಹೂಡಿಕೆಗೆ ಅನಿವಾಸಿ ಭಾರತೀಯರಿಗೂ ಅವಕಾಶ, ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಗಳ ನಿರ್ಮಾಣ, 3 ಏಮ್ಸ್ ಆಸ್ಪತ್ರೆಗಳ ನಿರ್ಮಾಣ, 5 ವೈದ್ಯಕೀಯ ಕೇಂದ್ರಗಳ ಸ್ಥಾಪನೆ, ಮಹಾತ್ಮ ಗಾಂಧಿ ಸ್ವರಾಜ್ ಯೋಜನೆ, ಮೇಗಾ ಜವಳಿ ಪಾರ್ಕ್ ಘೋಷಣೆ, ಮೂಲಸೌಕರ್ಯ ಅಭಿವೃದ್ಧಿಗೆ ಈ ಬಜೆಟ್ ಹೆಚ್ಚಿನ ಗಮನವನ್ನು ಹರಿಸಿದೆ.

ಒಟ್ಟಿನಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ ಹಾಗೂ ಸಮಾಜದ ವಿವಿಧ ರಂಗಗಳ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಉತ್ತಮ ಬಜೆಟ್ ಆಗಿದ್ದು ಇದರಿಂದ ದೇಶ ಮತ್ತಷ್ಟು ಪ್ರಗತಿಯತ್ತ ಸಾಗುತ್ತದೆ ಎಂದು ಹೇಳಿದ್ದಾರೆ.