ಕೇಂದ್ರ ಸರ್ಕಾರದಿಂದ ಜನಪರವಾದ ಬಜೆಟ್ ಮಂಡನೆ..

ಕೇಂದ್ರ ಸರ್ಕಾರದಿಂದ jಜನಪರವಾದ ಬಜೆಟ್ ಮಂಡನೆ..

ದೀರ್ಘ ಕಾಲದ ರಾಷ್ಟ್ರನಿರ್ಮಾಣದ ಗುರಿ ಹೊಂದಿರುವ ಬಜೆಟ್..

ಡಾ ಸೋನಾಲಿ ಸನೋಬತ್..

ಬೆಳಗಾವಿ : ರವಿವಾರ ದಿನಾಂಕ 01/02/2026 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2026 ದೇಶದ ಪ್ರಗತಿಯ ದೂರದೃಷ್ಟಿಯ, ಅಭಿವೃದ್ಧಿ ಕೇಂದ್ರೀತ ಭವಿಷ್ಯ ನಿರ್ದೇಶಿತವಾಗಿದೆ ಎಂದು ಬಿಜೆಪಿಯ ಮಹಿಳಾ ಪ್ರಮುಖರಾದ ಡಾ ಸೋನಾಲಿ ಸರ್ನೋಬತ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮೂಲಸೌಕರ್ಯ ಕ್ಷೇತ್ರದಲ್ಲಿ ದಾಖಲೆಯ ಹೂಡಿಕೆ, ಉತ್ಪಾದನಾ ವಲಯಕ್ಕೆ ಉತ್ತೇಜನ ಮತ್ತು ಆರ್ಥಿಕ ಶಿಸ್ತು ಇವೆಲ್ಲವೂ ವಿಕಸಿತ ಭಾರತ ನಿರ್ಮಾಣದ ಮೋದಿ ಸರ್ಕಾರದ ದೃಢ ಸಂಕಲ್ಪವನ್ನು ತೋರಿಸುತ್ತವೆ ಎಂದಿದ್ದಾರೆ.

ಇದು ತಾತ್ಕಾಲಿಕ ಲಾಭಕ್ಕಾಗಿ ಮಾಡಿರುವ ಬಜೆಟ್ ಅಲ್ಲಾ, ದೀರ್ಘಕಾಲೀನ ರಾಷ್ಟ್ರ ನಿರ್ಮಾಣಕ್ಕಾಗಿ ರೂಪಿಸಿದ ಮಹತ್ವಾಕಾಂಕ್ಷೆಯ ಬಜೆಟ್, ದೇಶಕ್ಕೆ ಮಾದರಿಯಾಗುವ ಇಂತಹ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆಗೆ ಹಾಗೂ ಇದರ ಹಿಂದಿನ ರೂವಾರಿಯಾದ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ..