ಜಾಂಬೋಟಿ, ಕುಂಭಾರ್ಡಾದಲ್ಲಿ ಹೊಸ ಪ್ರಾಆಕೇ ಸ್ಥಾಪನೆಗೆ ಆರೋಗ್ಯ ಸಚಿವ ಯುಟಿ ಖಾದರ್ ಗೆ ಮನವಿ..

ಜಾಂಬೋಟಿ, ಕುಂಭಾರ್ಡಾದಲ್ಲಿ ಹೊಸ ಪ್ರಾಆಕೇ ಸ್ಥಾಪನೆಗೆ ಆರೋಗ್ಯ ಸಚಿವ ಯುಟಿ ಖಾದರ್ ಗೆ ಮನವಿ..

ಶಾಸಕ ವಿಠಲ್ ಹಲಗೇಕರ್.

ಬೆಳಗಾವಿ : ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಜಾಂಬೋಟಿ ಹಾಗೂ ಕುಂಭಾರ್ಡಾ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್ಸಿ) ಸ್ಥಾಪಿಸುವಂತೆ ಖಾನಾಪುರ ಶಾಸಕ ವಿಠಲ್ ಸೋಮಣ್ಣಾ ಹಲಗೇಕರ ಅವರು ಸಚಿವ ಯುಟಿ ಖಾದರ್ ಅವರ ನೇತ್ರತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಖಾನಾಪುರ ವಿಧಾನಸಭಾ ಕ್ಷೇತ್ರವು ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿದ್ದು, ದಟ್ಟ ಅರಣ್ಯ ಪ್ರದೇಶ ಹಾಗೂ ಗ್ರಾಮೀಣ ಭಾಗಗಳನ್ನು ಒಳಗೊಂಡಿದೆ. ಈ ಕಾರಣದಿಂದ ಗ್ರಾಮೀಣ ಜನರಿಗೆ ಸಕಾಲದಲ್ಲಿ ತುರ್ತು ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ–ಚೋರ್ಲಾ–ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಂಬೋಟಿ ಗ್ರಾಮವು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಪ್ರಮುಖ ಕೇಂದ್ರವಾಗಿದ್ದು, ಧಾರವಾಡ–ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಂಭಾರ್ಡಾ ಗ್ರಾಮವೂ ವಾಹನ ಸಂಚಾರ ಹಾಗೂ ಗ್ರಾಮೀಣ ಸಂಪರ್ಕದ ಪ್ರಮುಖ ಕೇಂದ್ರವಾಗಿದೆ.

ಈ ಎರಡೂ ಹೆದ್ದಾರಿಗಳಲ್ಲಿ ದಿನನಿತ್ಯ ಹೆಚ್ಚಿನ ವಾಹನ ಸಂಚಾರ ನಡೆಯುವುದರಿಂದ ಅಪಘಾತಗಳ ಸಂಭವವೂ ಹೆಚ್ಚಾಗಿದೆ ಎಂದು ಖಾನಾಪೂರ ಶಾಸಕ ವಿಠಲ್ ಹಲಗೇಕರ್ ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿಕೊಂಡರು.
ಅಪಘಾತಗಳು ಸಂಭವಿಸಿದಾಗ, ಗರ್ಭಿಣಿಯರು, ವೃದ್ಧರು ಹಾಗೂ ಮಕ್ಕಳಿಗೆ ತುರ್ತು ಚಿಕಿತ್ಸೆ ಅಗತ್ಯವಾದ ಸಂದರ್ಭದಲ್ಲಿ ದೂರದ ಆರೋಗ್ಯ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವುದರಿಂದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಇದರಿಂದ ಅನೇಕ ಸಂದರ್ಭಗಳಲ್ಲಿ ಜೀವಹಾನಿಯೂ ಸಂಭವಿಸುತ್ತಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಜಾಂಬೋಟಿ ಮತ್ತು ಕುಂಭಾರ್ಡಾ ಗ್ರಾಮಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಜಾಂಬೋಟಿ ಹಾಗೂ ಕುಂಭಾರ್ಡಾ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿ, ಗ್ರಾಮೀಣ ಜನರಿಗೆ ಸುಲಭ ಹಾಗೂ ತ್ವರಿತ ಆರೋಗ್ಯ ಸೇವೆ ಕಲ್ಪಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಶಾಸಕ ವಿಠಲ್ ಸೋಮಣ್ಣಾ ಹಲಗೇಕರ ಅವರು ಮನವಿ ಮಾಡಿಕೊಂಡರು.