ಜೂನ್ 22ರ ಎಂಇಎಸ್ ನಾಯಕರ ಮೋರ್ಚಾಗೆ ಅನುಮತಿ ನೀಡಬಾರದು..

ಜೂನ್ 22ರ ಎಂಇಎಸ್ ನಾಯಕರ ಮೋರ್ಚಾಗೆ ಅನುಮತಿ ನೀಡಬಾರದು..

ಕರವೇ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ..

ಬೆಳಗಾವಿ : ಜೂನ್ 22 ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ಆಯೋಜಿಸಲಾಗಿರುವ ಕನ್ನಡ ಕಡ್ಡಾಯ ವಿರೋಧಿ ಮಹಾಮೋರ್ಚಾ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡ ನಾಡು, ನುಡಿ ಹಾಗೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿರುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹಾಮೋರ್ಚಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕರಾದ ಸುರೇಶ ಗವನ್ನವರ, ಹೊಳೆಪ್ಪ ಸುಲದಾಳ, ಲಗಮಣ್ಣ ಮಾಳಂಗಿ, ಅಡವೆಪ್ಪ ತಲ್ಲೂರಿ, ಸತೀಶ ಗುಡದವರ, ಮಂಜುನಾಥ ರಾಠೋಡ್, ಲೋಕೇಶ್ ರಾಠೋಡ್, ಅರ್ಜುನ ಕಾಂಬಳೆ, ಇಸ್ಮಾಯಿಲ್ ಮುಲ್ಲಾ, ಅಭಿಷೇಕ್ ಅಗಸಗಿ, ಶ್ರೀಧರ್ ಹೊಳ್ಳೆನವರ, ಗಿರೀಶ್ ಪಾಟೀಲ್, ರಮೇಶ್ ಯರಗಣ್ಣವರ, ಬಸವರಾಜ್ ದಂಡನವರ, ರೂಪಾ ಬಾರಿಗಡ್ಡಿ, ಸಂಗೀತಾ ಕಾಂಬಳೆ ಸೇರಿದಂತೆ ಅನೇಕ ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *