ಪ್ರಕಾಶ ಹೆಗ್ಗನಾಯಕ ಲಯನ್ಸ ಕ್ಲಬ್ ಮಿಡಟೌನ್ ಬೆಳಗಾವಿಯ ನೂತನ ಅಧ್ಯಕ್ಷರು..
ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಯ ಕಾರ್ಯಕ್ಕೆ ಹೆಚ್ಚು ಒಲವು..
ಪ್ರಕಾಶ ಹೆಗ್ಗನಾಯಕ, ಅಧ್ಯಕ್ಷರು ಲಯನ್ಸ್ ಕ್ಲಬ್ ಮಿಡಟೌನ್ ಬೆಳಗಾವಿ.
ಬೆಳಗಾವಿ : ನಮ್ಮ ಲಯನ್ಸ್ ಕ್ಲಬ್ ಮಿಡಟೌನ್ ಪ್ರಾರಂಭವಾಗಿ ಇಂದಿಗೆ 33 ವರ್ಷಗಳು ಕಳೆದಿದ್ದು, ಈಗಾಗಲೇ ಅವಶ್ಯಕವಿರುವ ಎಷ್ಟೋ ಜನರಿಗೆ ಸೇವಾ ಸೌಲಭ್ಯ ನೀಡಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಯ ಸಲುವಾಗಿ ಹತ್ತು ಹಲವಾರು ಕಾರ್ಯಗಳನ್ನು ಮಾಡುವ ಯೋಜನೆ ಇದೆ ಎಂದು ಪ್ರಕಾಶ ಹೆಗ್ಗನಾಯಕ ಹೇಳಿದ್ದಾರೆ.

ರವಿವಾರ ನಗರದ ಖಾಸಗಿ ಸ್ಥಳದಲ್ಲಿ ಆಯೋಜನೆಗೊಂಡ ಲಯನ್ಸ್ ಕ್ಲಬ್ ಮಿಡಟೌನ್ ಬೆಳಗಾವಿ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ, ಅಧ್ಯಕ್ಷ ಸ್ಥಾನ ಹೊಂದಿ ಮಾತನಾಡಿದ ಪ್ರಕಾಶ ಹೆಗ್ಗನಾಯಕ ಅವರು, ನಮ್ಮ ಕ್ಲಬ್ಬಿನಿಂದ ಕಳೆದ ಮೂವತ್ತು ವರ್ಷಗಳಿಂದ ಅನೇಕ ಸಾಮಾಜಿಕ ಕಾಳಜಿಯ ಕಾರ್ಯಗಳು ನಡೆದಿದ್ದು, ಈಗ ನಾನು ಅಧ್ಯಕ್ಷನಾಗಿರುವದರಿಂದ, ನಮ್ಮ ತಂಡದವರೊಂದಿಗೆ ಸೇರಿ ಇನ್ನು ಗುಣಮಟ್ಟದ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತೇವೆ ಎಂದಿದ್ದಾರೆ.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಲಬಿನ ಪದಾಧಿಕಾರಿಗಳು, ತಮ್ಮ ಕ್ಲಬ್ಬಿನ ಗುರಿ ಉದ್ದೇಶಗಳ ಬಗ್ಗೆ ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಅರ್ಥಪೂರ್ಣವಾಗಿ ತಮ್ನ ವಿಚಾರಗಳನ್ನು ಹಂಚಿಕೊಂಡಿದ್ದು, ಅವರ ಮಾತುಗಳಲ್ಲಿ ಸಾಮಾಜಿಕ ಕಾಳಜಿಯ ಸೇವಾಭಾವ ಎದ್ದು ಕಾಣುತ್ತಿತ್ತು.

ಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ಪದಗ್ರಹನ ನೀಡುವ ಅಧಿಕಾರಿಯಾಗಿ ಆಗಮಿಸಿದ ಭಾರತಿ ವಡವಿ ಅವರು, ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ, ಸಮಿತಿ ಮುಖ್ಯಸ್ಥರು, ಜನಸಂಪರ್ಕ ಅಧಿಕಾರಿ ಹಾಗೂ ಇತರ ಸದಸ್ಯರಿಗೆ ಅವರ ಜವಾಬ್ದಾರಿಗಳನ್ನು ತಿಳಿಸಿ, ಅದರಂತೆ ಅವರು ಕ್ಲಬ್ಬಿನ ಕಾರ್ಯಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕೇಕ್ ಕಟ್ ಮಾಡುವ ಮೂಲಕ ಕ್ಲಬ್ಬಿನ 33ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಣೆ ಮಾಡಲಾಯಿತು, ಎಲ್ಲರೂ ಸೇರಿ ನೂತನ ಅಧ್ಯಕ್ಷರನ್ನು ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದನೆಗಳನ್ನು ಅರ್ಪಿಸಿ, ಶುಭ ಹಾರೈಸಿದರು.

ನೂತನವಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ದಿನದಂದೇ ಕ್ಲಬ್ಬಿನಿಂದ ಎರಡು ಉತ್ತಮ ಕಾರ್ಯ ಕೈಗೊಂಡ ಅಧ್ಯಕ್ಷರು, ಹುಲ್ಯಾನೂರ ಸರ್ಕಾರಿ ಶಾಲಾ ಮಕ್ಕಳಿಗೆ ಅರವತ್ತು ಛತ್ರಿಗಳನ್ನು ನೀಡಿದರು, ಅದೇರೀತಿ ಸಮೃದ್ಧಿ ಸಂಸ್ಥೆಯ ಅಂಧ ಮಕ್ಕಳಿಗೆ ನಡೆಯುವ ಸಾಧನವಾದ ವಾಕಿಂಗ್ ಸ್ಟಿಕಗಳನ್ನು ವಿತರಣೆ ಮಾಡಿದ್ದು, ವಾಕಿಂಗ್ ಸ್ಟಿಕ್ ಪಡೆದ ಅಂಧ ವಿದ್ಯಾರ್ಥಿಗಳಿಗೆ ಸ್ಟಿಕನ ಮಹತ್ವ ಹಾಗೂ ಅದು ತಮಗೆ ಎಷ್ಟು ಅನುಕೂಲ ಆಗುತ್ತದೆ ಎಂದು ಹೇಳಿ, ಲಯನ್ಸ್ ಕ್ಲಬ್ಬಿನ ಕೊಡುಗೆಯನ್ನು ಕೊಂಡಾಡಿದರು.

ಈ ಕಾರ್ಯಕ್ರಮದಲ್ಲಿ ಹಿಂದಿನ ಈಗಿನ ಹಾಗೂ ಹೊಸದಾಗಿ ಸೇರ್ಪಟ್ಟ ಸದಸ್ಯರು ಹಾಗೂ ಪದಾಧಿಕಾರಿಗಳು, ಸ್ನೇಹಿತರು, ಶುಭ ಚಿಂತಕರು ಹಾಗೂ ಅವರ ಕುಟುಂಬ ಸದಸ್ಯರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು..

ವರದಿ ಪ್ರಕಾಶ ಬಿ ಕೆ..