ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲು ಹೋದ ಪಾಲಿಕೆ ಅಭಿಯಂತರ ಮೇಲೆ ಹಲ್ಲೆ..
ಜೆಸಿಬಿ ಗ್ಲಾಸ್ ಒಡೆದಿರುವ ಘಟನೆ..
ಹಲ್ಲೆ ನಡೆಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ ಪಾಲಿಕೆ ಸಿಬ್ಬಂದಿ..
ಬೆಳಗಾವಿ : ಶಹಾಪೂರದ ನಾಥ್ ಪೈ ವೃತ್ತ ಹಾಗೂ ನಗರದ ನಾನಾ ಕಡೆಗಳಲ್ಲಿ ಫುಟ್‌ಪಾತ್ ಹಾಗೂ ರಸ್ತೆ ಅತಿಕ್ರಮಣದ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ಬೆಳಗಾವಿ ಮಹಾನಗರ ಪಾಲಿಕೆಯಿಂದ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದೆ.

ಶುಕ್ರವಾರ ಶಹಾಪೂರದ ನಾತಪೈ ಸರ್ಕಲ್‌ನಲ್ಲಿ ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಲು ಪಾಲಿಕೆ ಅಕಾರಿಗಳು ಮುಂದಾಗಿದ್ದರು. ಈ ವೇಳೆ ಅಂಗಡಿಗಳ ಮಾಲೀಕರು ಹಾಗೂ ಸ್ಥಳೀಯರು ಸೇರಿಕೊಂಡು ಪಾಲಿಕೆ ಎಂಜಿನಿಯರ್ ಹಾಗೂ ತೆರವು ಕಾರ್ಯಾಚರಣೆಯ ತಂಡದೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಕೆಲವರು ಅಕಾರಿಗಳೊಂದಿಗೆ ತಳ್ಳಾಟ ನಡೆಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಜತೆಗೆ ತೆರವು ಕಾರ್ಯಾಚರಣೆಗೆ ತರಲಾಗಿದ್ದ ಜೆಸಿಬಿ ಮೇಲೆ ಹತ್ತಿದ್ದ ಕೆಲವರು ಅದರ ಗ್ಲಾಸ್‌ನ್ನು ಹಾನಿಗೊಳಿಸಿದ್ದಾರೆಂದು ಪಾಲಿಕೆ ಅಕಾರಿಗಳು ಆರೋಪಿಸಿದ್ದಾರೆ.

ಈ ಕುರಿತು ಶಹಾಪೂರ ಠಾಣೆಗೆ ದೂರು ನೀಡಲು ಮುಂದಾಗಿದ್ದ ಪಾಲಿಕೆ ಅಕಾರಿಗಳು ಠಾಣೆಯ ಎದುರು ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತರು ಮತ್ತು ನಗರಸೇವಕರು ಪಾಲಿಕೆ ಸಿಬ್ಬಂದಿಯ ಸಮಸ್ಯೆ ಆಲಿಸಿದರು. ಜತೆಗೆ ತಪ್ಪಿತಸ್ಥರ ವಿರುದ್ಧ ತಕ್ಷಣ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು. ಘಟನೆಯಲ್ಲಿ 40ರಿಂದ 50ಕ್ಕೂ ಹೆಚ್ಚು ಜನರು ಪಾಲಿಕೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಹೀಗಾಗಿ ಎಲ್ಲರ ವಿರುದ್ಧ ಕ್ರಮಕೈಗೊಳ್ಳುವಂತೆ ಶಹಾಪೂರ ಠಾಣೆಗೆ ದೂರು ಸಲ್ಲಿಸಿದ್ದೇವೆ ಎಂದು ಪಾಲಿಕೆ ಅಕಾರಿಯೊಬ್ಬರು ತಿಳಿಸಿದರು.