ಬೆಳಗಾವಿ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ರಾಜ್ಯೋತ್ಸವ ಸಂಭ್ರಮ..

ಬೆಳಗಾವಿ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ರಾಜ್ಯೋತ್ಸವ ಸಂಭ್ರಮ..

ರಾಜ್ಯದ ಎಲ್ಲಾ ಕ್ಷೇತ್ರ ಹಾಗೂ ಕಚೇರಿಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಲಿ..

ಯಶವಂತಕುಮಾರ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಬೆಳಗಾವಿ..

ಬೆಳಗಾವಿ : 70 ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಅತೀ ಅದ್ದೂರಿಯಿಂದ ಆಚರಣೆ ಮಾಡುತ್ತಿದ್ದು, ಬೆಳಗಾವಿಯ ವಿವಿಧ ಸರ್ಕಾರಿ ಕಚೇರಿಗಳಲ್ಲಿಯೂ ಕನ್ನಡದ ಹಬ್ಬವನ್ನು ಅತೀ ಸಂತಸದಿಂದ ಆಚರಣೆ ಮಾಡಿದ್ದಾರೆ.

ಅದರಂತೆ ನಗರದ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಎಲ್ಲಾ ಸಿಬ್ಬಂದಿಗಳು ಹಾಜರಾಗಿ, ತಳಿರು ತೋರಣ, ವಿದ್ಯುತ್ ದ್ವೀಪದಿಂದ ಅಲಂಕಾರವಾಗಿ, ಕನ್ನಡ ನಾಡು ನುಡಿಯ ಗೀತೆಗಳ ಗಾಯನದಲ್ಲಿ ಕನ್ನಡಮಯವಾದ ಕಚೇರಿಯ ವಾತಾವರಣದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಚೇರಿಯ ಎಲ್ಲಾ ಸಿಬ್ಬಂದಿಗಳು ಸೇರಿ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ..

ಈ ವೇಳೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಅವರು ಮಾತನಾಡಿ, ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯ ತಿಳಿಸಿ, ರಾಜ್ಯಾದ್ಯಂತ ಅತೀ ಸಡಗರದಿಂದ ಆಚರಿಸುವ ಈ ಹಬ್ಬ ಎಲ್ಲರಲ್ಲಿಯೂ ಭಾಷೆಯ ಅಭಿಮಾನ ಬೆಳೆಸಬೇಕು, ಆ ಭಾಷಾ ಅಭಿಮಾನ ಹಾಗೂ ಸಂಸ್ಕೃತಿಯನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಮುಂದುವರೆಸಬೇಕು ಎಂದಿದ್ದಾರೆ.

ಈ ರಾಜ್ಯೋತ್ಸವದ ಮೂಲಕ ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ, ಎಲ್ಲಾ ಕಚೇರಿಯಲ್ಲಿಯೂ ಕೂಡಾ ಕನ್ನಡ ಭಾಷೆಯಲ್ಲಿ ಆಡಳಿತ ನೀಡುವದಕ್ಕೆ ಸಹಕಾರಿ ಆಗಬೇಕು ಆ ಮೂಲಕ ನಮ್ಮ ಕನ್ನಡ ಭಾಷೆ ಎಲ್ಲಾ ಕಡೆಗೆ ಇನ್ನೂ ಬೆಳೆಯಬೇಕು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ಬಸವಂತ ಕಡೆಮನಿ, ಸಹಾಯಕ ಲೆಕ್ಕಾಧಿಕಾರಿ ಬಿ ಎಂ ಪಾಟೀಲ, ತಾಲೂಕು ಯೋಜನಾ ಅಧಿಕಾರಿ ಎನ್ ಎಸ್ ಹೂಗಾರ, ಅಭಿವೃದ್ಧಿ ಅಧಿಕಾರಿಗಳಾದ ಹರ್ಷವರ್ಧನ, ಶ್ರೀಧರ ಸರದಾರ ಹಾಗೂ ಕಚೇರಿಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..