ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ವಿಶೇಷ ಸಭೆ..

ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ವಿಶೇಷ ಸಭೆ..

ಇ ಆಸ್ತಿ ನೋಂದಣಿ ಗೊಂದಲವನ್ನು ಬೇಗ ಪರಿಹರಿಸಿ, ತೆರಿಗೆ ಸಂಗ್ರಹ ಹೆಚ್ಚಿಸುವ ಕಾರ್ಯವಾಗಲಿ.

ನಗರದಲ್ಲಿ ಸಾಕಷ್ಟು ಹಳೆಯ ಮನೆಗಳಿದ್ದು ಅವುಗಳಿಗೆ ಪಿಐಡಿ ನೀಡಿ ಆದಾಯ ಸಂಗ್ರಹಿಸಿ..

ಮಂಗೇಶ್ ಪವಾರ, ಮಹಾಪೌರಾರು ಬೆಳಗಾವಿ ಮಹಾನಗರ ಪಾಲಿಕೆ..

ಬೆಳಗಾವಿ : ಪಾಲಿಕೆಯ ವ್ಯಾಪ್ತಿಯಲ್ಲಿ ಇ ಆಸ್ತಿ ನೋಂದಣಿಯಲ್ಲಿ ಪದೇ ಪದೇ ಹಲವಾರು ಗೊಂದಲಗಳು ಆಗುತ್ತಿದ್ದು, ಅಧಿಕಾರಿಗಳು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಜನರಿಗೆ ಸರಳವಾಗಿ ಇ ಆಸ್ತಿ ನೋಂದಣಿ ಆಗುವಂತಹ ವ್ಯವಸ್ಥೆಯನ್ನು ಮಾಡಬೇಕು, ಜೊತೆಗೆ ತೆರಿಗೆ ಸಂಗ್ರಹದಲ್ಲಿ ಹಿನ್ನೆಡೆ ಆಗಬಾರದು, ಕಂದಾಯ ವಿಭಾಗದ ಸುಬ್ಬದಿಗಳು ಶಿಸ್ತಿನಿಂದ ಕೆಲಸ ಮಾಡಿ ಪಾಲಿಕೆಯ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು ಎಂದು ಮಹಾಪೌರರಾದ ಮಂಗೇಶ್ ಪವಾರ ಅವರು ಹೇಳಿದ್ದಾರೆ.

ಮಂಗಳವಾರ ದಿನಾಂಕ 20/01/2026 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಜರುಗಿದ ಕಂದಾಯ ಶಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ಪಾಲಿಕೆಯ ತೆರಿಗೆ ಸಂಗ್ರಹ ಕಡಿಮೆ ಆಗುತ್ತಿದೆ, ಇ ಆಸ್ತಿ ನೋಂದಣಿಯನ್ನು ಸರಳಗೊಳಿಸಿ, ನಗರದಲ್ಲಿ ಅನೇಕ ಕಡೆಗೆ ಹಳೆಯ ಮನೆಗಳಿವೆ, ಸರಿಯಾದ ದಾಖಲೆಗಳು ಇಲ್ಲದ ಕಾರಣ ಅವರು ಹತ್ತಾರು ವರ್ಷಗಳಿಂದ ಪಾಲಿಕೆಗೆ ತೆರಿಗೆ ನೀಡುತ್ತಿಲ್ಲ, ಅಂತಹ ಆಸ್ತಿಗಳಿಗೆ ಹೊಸ ಪಿಐಡಿ ನೀಡುವ ಕಾರ್ಯ ಆಗಲಿ, ಖಾಲಿ ನಿವೇಶನಗಳಿಗೂ ಸರಿಯಾದ ತೆರಿಗೆಯನ್ನು ನಿರ್ಧರಿಸಿ, ಆ ಮೂಲಕ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ಕಾರ್ಯವನ್ನು ಕಂದಾಯ ಶಾಖೆಯ ಸಿಬ್ಬಂದಿಗಳು ಮಾಡಬೇಕೆಂದು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ಸಿದ್ದಪ್ಪ ಹುಲ್ಲೋಳ್ಳಿ ಅವರ ನೇತೃತ್ವದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು, ಇ ಆಸ್ತಿ ನೋಂದಣಿಯಲ್ಲಿ ಇತ್ತೀಚಿಗೆ ಸೋಪ್ಟವೇರ್ ಬದಲಾವಣೆ ಮಾಡಿದ್ದರಿಂದ ಕೆಲ ದಿನಗಳಿಂದ ಇ ಆಸ್ತಿ ನೋಂದಣಿ ಸ್ಥಗಿತವಾಗಿತ್ತು, ಈಗ ಪ್ರಾರಂಭವಾಗಿದ್ದು ನಾಗರಿಕರು ನೇರವಾಗಿ ಇ ಅಸ್ತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಅದರಲ್ಲಿಯೂ ಕೂಡಾ ಕೆಲ ಗೊಂದಲಗಳಿದ್ದು, ಅವುಗಳನ್ನು ಸರಿಪಡಿಸುತ್ತೇವೆ, ಸ್ವಲ್ಪ ದಿನ ಕಳೆದಂತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಇನ್ನು ತೆರಿಗೆ ಸಂಗ್ರಹದಲ್ಲಿ ಈ ವರ್ಷ ಶೇಕಡಾ 60 ರಷ್ಟು ಸಂಗ್ರಹ ಆಗಿದ್ದು, ಬರುವ ಮಾರ್ಚವರೆಗೆ ಕಲಾವಕಾಶ ಇದ್ದು, ಶೇಕಡಾ ನೂರರಷ್ಟು ಸಂಗ್ರಹದ ಗುರಿ ಮುಟ್ಟುತ್ತೇವೆ ಎಂದ ಕಂದಾಯ ವಿಭಾಗದ ಅಧಿಕಾರಿಗಳು, ಹೊಸ ಪಿಐಡಿಗಳನ್ನು ನೀಡುವ, ಖಾಲಿ ನಿವೇಶನಗಳ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಕಾರ್ಯಪ್ರವರ್ತರಾಗುತ್ತೇವೆ ಎಂದರು. ಅತೀ ಕಟ್ಟಿನಿಟ್ಟಿನಿಂದ ಮನೆಮನೆಗೆ ತೆರಳಿ ಕರ ವಸೂಲಿ ಮಾಡಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇವೆ ಎಂಬ ಭರವಸೆ ನೀಡಿದರು..

ನಂತರ ನಗರ ಸೇವಕರು ತಮ್ಮ ತಮ್ಮ ವಾರ್ಡಗಳ ಸಮಸ್ಯೆಗಳನ್ನು ಹೇಳಿದ್ದು, ನಗರ ಸೇವಕರಾದ ರವಿ ದೋತ್ರೆ ಅವರು ಮಾತನಾಡಿ, ವಾರ್ಡಗಳಲ್ಲಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಎಷ್ಟು ತೆರಿಗೆ ಸಂಗ್ರಹ ಆಗುತ್ತದೆ, ತುಂಬಿದ್ದು ಎಷ್ಟಿವೆ, ಬಾಕಿ ಎಸ್ಟಿವೆ, ವಾಣಿಜ್ಯ ಎಷ್ಟಿವೆ, ಇನ್ನು ಎಷ್ಟೋ ಜನ ತೆರಿಗೆನೇ ತುಂಬೋಲ್ಲ, ನಮಗೆ ಅವರ ಲೆಕ್ಕಪತ್ರ ಬೇಡಾ, ಕಂದಾಯ ಬೇಕು, ಅಭಿವೃದ್ಧಿಗೆ ಹಣ ಬೇಕು, ಅದನ್ನು ಮಾಡಿಸಿ ಎಂದರು..

ನಮ್ಮ ವಾರ್ಡಿನಲ್ಲಿ ಸುಮಾರು ಹತ್ತತ್ತು ವರ್ಷ ತೆರಿಗೆ ತುಂಬಿಲ್ಲ ಅದು ವಾಣಿಜ್ಯ ಕಟ್ಟಡಗಳಿಗೆ, ಇವರು ಅಲ್ಲಿ ಹೋಗುವದಿಲ್ಲ ಕೂಡಾ, ಇವರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ಈಗ ತಾವು ಹೊಸ ಅಧಿಕಾರಿಗಳು ಬಂದಿದ್ದೀರಾ, ಇವರನ್ನು ವಾರ್ಡಿನಲ್ಲಿ ಸುತ್ತಾಡಲು ಹೇಳಿ, ತುಂಬದವರ ಮೇಲೆ ಒತ್ತಡ ಹಾಕಿ, ನೋಟಿಸ್ ನೀಡಿ, ಇದ್ಯಾವುದನ್ನು ಇವರು ಮಾಡುವದಿಲ್ಲ, ಎಂಜಾಯ್ ಮಾಡ್ತಾ ತಿರುಗಾಡುತ್ತಾರೆ ಎಂದು ಕಿಡಿ ಕಾರಿದರು. ಪಾಲಿಕೆಯ ಲಿಸ್ ಆಸ್ತಿಗಳ ತೆರಿಗೆ ಕೂಡಾ ಬರುತ್ತಿಲ್ಲ, ಆದರಿಂದ ದೊಡ್ಡ ಮೊತ್ತದ ಆದಾಯವೇ ಪಾಲಿಕೆಗೆ ನಷ್ಟವಾಗಿದೆ, ಇದರ ಬಗ್ಗೆ ಯಾವ ಸಿಬ್ಬಂದಿ ಹಾಗೂ ಅಧಿಕಾರಿಯೂ ತಮಗೆ ಮಾಹಿತಿ ನೀಡಿಲ್ಲ, ನಗರ ತುಂಬ ಬೆಳವಣಿಗೆ ಆಗಿದ್ದು ಇವರು ಮನಸ್ಸು ಮಾಡಿದರೆ, ನೂರು ಕೋಟಿಯಷ್ಟು ತೇರಿಗೆ ಸಂಗ್ರಹ ಮಾಡಬಹುದು, ಆದರೆ ಇವರಿಗೆ ಜವಾಬ್ದಾರಿನೇ ಇಲ್ಲಾ ಎಂದು ದೂರಿದರು.

ನಗರ ಸೇವಕ ಗಿರೀಶ್ ದೊಂಗಡಿ ಮಾತನಾಡಿ, ಈ ಸರ್ವರ ಸಮಸ್ಯೆ ನಗರ ಸೇವಕರಿಗೆ ಮಾತ್ರ ಇದೆಯೋ ಹೇಗೆ, ಅಧಿಕಾರಿ ಹೇಳುತ್ತಾರೆ ಸರ್ವರ್ ಪ್ರಾರಂಭ ಆಗಿದೆ ಎಂದು, ಸಿಬ್ಬಂದಿ ಹೇಳುವರು ಸನಸ್ಯೆ ಇದೇ ಎಂದು, ಜನರಿಗೆ ನಾವೇನು ಹೇಳೋದು ಎಂದು ಪ್ರಶ್ನೆ ಮಾಡಿದರು. ನಗರ ಸೇವಕ ಸಂತೋಷ ಪೇಡನೆಕರ್ ಕೂಡಾ ಇದೇ ವಿಷಯವಾಗಿ ಮಾತನಾಡಿ ಮೊದಲು ಸಿಬ್ಬಂದಿಗಳು ಸರಿಯಾಗಿ ಸರ್ವರ ಬಗ್ಗೆ ತಿಳಿದುಕೊಳ್ಳಿ ನಂತರ ನಮಗೆ ಜನತೆಗೆ ಮಾಹಿತಿ ನೀಡಿ, ನಿಮಗೆ ಕಷ್ಟ ಆಗುತ್ತಿದ್ದರೆ ವರ್ಗಾವಣೆ ಪಡೆದು ಬೇರೆಕಡೆಗೆ ತೆರಳಿ ಎಂದರು, ಮೊದಲು ಗಾಡಿ ತಗೊಂಡು ವಾರ್ಡಿನಲ್ಲಿ ಹೋಗಿ ಕರ ವಸೂಲಿ ಮಾಡುತ್ತಿದ್ದರು ಈಗ ಯಾಕೆ ಮಾಡುವದಿಲ್ಲ ಎಂದು ಪ್ರಶ್ನೆ ಮಾಡಿದರು..

ಪಾಲಿಕೆಯ ಆಡಳಿತ ಪಕ್ಷದ ನಾಯಕ ಹನಮಂತ ಕೊಂಗಾಲಿ ಮಾತನಾಡಿ, ಎಲ್ಲದಕ್ಕೂ ಸಿಬ್ಬಂದಿಗಳನ್ನು ದೂರುತ್ತಿದ್ದೇವೆ, ಆದರೆ ಸರ್ಕಾರ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿತ್ತು, ಇದರಲ್ಲಿ ಅನೇಕ ತಾಂತ್ರಿಕ ದೋಷಗಳಿವೆ, ಪಿಐಡಿ ಬಗ್ಗೆ ಜನರಲ್ಲಿ ಜಾಗ್ರತೆ ಆಗಬೇಕು, 80% ಪಿಐಡಿ ಇ ಆಸ್ತಿ ಆಗಬೇಕು, ಸಿಬ್ಬಂದಿಗಳಿಗೂ ಅನೇಕ ಬೇರೆ ಬೇರೆ ಕೆಲಸ ನೀಡುತ್ತಾರೆ, ಅದರಲ್ಲಿ ಸರ್ವರ್ ಸಮಸ್ಯೆ, ತಿದ್ದುಪಡಿ ಹೀಗೆಲ್ಲ ಆಗುತ್ತಿದೆ, ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಸರಿಪಡಿಸಬೇಕು, ಸಭೆಗಳಲ್ಲಿ ತಾವು ಈ ವಿಷಯ ಉನ್ನತಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಇನ್ನು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ನಗರ ಸೇವಕರ ಎಲ್ಲಾ ಸಲಹೆ ಸೂಚನೆಗಳನ್ನು ತಗೆದುಕೊಂಡು ಬರುವ ದಿನಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ, ಉತ್ತಮವಾದ ಕಾರ್ಯ ಮಾಡುತ್ತಾ ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗುತ್ತೇವೆ ಎಂಬ ಭಾವನೆಯನ್ನು ವ್ಯಕ್ತಡಿಸಿದರು.

ಈ ಸಭೆಯಲ್ಲಿ ಮಹಾಪೌರರು, ಉಪ ಮಹಾಪೌರರು, ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು, ನಗರ ಸೇವಕರು, ಪಾಲಿಕೆಯ ಆಯುಕ್ತರು, ಉಪ ಆಯುಕ್ತರು ಕಂದಾಯ, ವಲಯ ಆಯುಕ್ತರು ಹಾಗೂ ಕಂದಾಯ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕೆ..