ಎಷ್ಟೇ ಎತ್ತರದ ಅಧಿಕಾರಿಯಾದರೂ ಕಾನೂನಿಗಿಂತ ದೊಡ್ಡವರಲ್ಲ..
ಸಿ ಎಂ ಸಿದ್ದರಾಮಯ್ಯ..
ಬೆಳಗಾವಿ : ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋಗೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಯಾರೇ ಎಷ್ಟೇ ದೊಡ್ಡ ಅಧಿಕಾರಿ ಆಗಿದ್ದರೂ ತಪ್ಪು ಮಾಡಿದ್ದರೆ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.
ನನಗೆ ಬೆಳಿಗ್ಗೆನೇ ವಿಷಯ ಗೊತ್ತಾಯಿತು, ವಿಚಾರ ಮಾಡಿಸುತ್ತೇವೆ, ಅಂತವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೇವೆ, ಎಷ್ಟೇ ಎತ್ತರದ ಅಧಿಕಾರಿಯಾದರೂ ಕಾನೂನಿಗಿಂತ ದೊಡ್ಡವರಲ್ಲ, ಆ ವಿಷಯದಲ್ಲಿ ವಿಚಾರಣೆ ಮಾಡಿ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ..