ಹಿರಿಯ ನಾಗರಿಕರು ಡಿಜಿಟಲ್ ಅರೆಸ್ಟ್‌ ಸೇರಿದಂತೆ ಸೈಬರ್ ಮೋಸಗಳಿಂದ ಜಾಗೃತರಾಗಿರಬೇಕು..

ಹಿರಿಯ ನಾಗರಿಕರು ಡಿಜಿಟಲ್ ಅರೆಸ್ಟ್‌ ಸೇರಿದಂತೆ ಸೈಬರ್ ಮೋಸಗಳಿಂದ ಜಾಗೃತರಾಗಿರಬೇಕು..

ಉದಯಕುಮಾರ ತಳವಾರ, ಉಪ ಆಯುಕ್ತರು (ಆಡಳಿತ) ಮನಪಾಬೆ..

ಬೆಳಗಾವಿ : ಇತ್ತೀಚಿನ ದಿನಗಳಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಮೋಸಗಾರರು ಪೊಲೀಸ್, ಸಿಬಿಐ, ಕಸ್ಟಮ್ಸ್ ಅಥವಾ ಇತರ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಾರೆ. ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ಅಪರಾಧದಲ್ಲಿ ಬಳಸಲಾಗಿದೆ ಎಂದು ಸುಳ್ಳು ಹೇಳಿ ತಾವು ಜೀವನ ಪೂರ್ತಿ ದುಡಿದು ಕಷ್ಟದಿಂದ ಕೂಡಿಟ್ಟ ಅತೀ ಅಮೂಲ್ಯ ಹಣವನ್ನು ದೋಚುತ್ತಾರೆ, ಇಂತಹ ವಂಚನೆಯಿಂದ ತಾವು ಜಾಗೃತರಾಗಿರಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ ತಳವಾರ ಅವರು ಹೇಳಿದ್ದಾರೆ..

ಸೋಮವಾರ ದಿನಾಂಕ 15/06/2026ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ, ಜಿಲ್ಲಾಡಳಿತಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ವಕೀಲರ ಸಂಘ, ವಿಕಲಚೇತನರ ಹಾಗೂ ಹಿರಿಯ ನಾಯಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ಸ್ಟೇಟ್ ಸೀನಿಯರ್ ಸಿಟಿಜೆನ್ ಅಸೊಸಿಯೇಶನ ಹಾಗೂ ಶ್ರೀ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಹಿರಿಯ ನಾಗರೀಕರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಉದಯಕುಮಾರ ತಳವಾರ ಅವರು ಹಿರಿಯರ ಬಗ್ಗೆ ಕಾಳಜಿಯ ನುಡಿಗಳನ್ನು ಆಡಿದ್ದಾರೆ..

ಇಂದು ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನ ಇರುವದರಿಂದ ಆ ಹಿರಿಯ ಜೀವಗಳಿಗೆ ಯಾವುದೇ ರೀತಿಯ ತಿಂದರೆ ಕಳವಳ ಆಗದಂತೆ ನೋಡಿಕೊಳ್ಳುವದು ನಮ್ಮೆಲ್ಲರ ಕರ್ತವ್ಯವಾಗಿದೆ, ಅವರ ಜೀವನ ಪೂರ್ತಿ ದುಡಿದು ಕೂಡಿಟ್ಟ ಸಂಪತ್ತು ಹಣ ಆಸ್ತಿಗಳು ಅನ್ಯಾಯವಾಗಿ ಬೇರೆಯವರ ಪಾಲಾಗಬಾರದು, ಜೀವನದಲ್ಲಿ ಸಾಕಷ್ಟು ಏರು ಪೆರು ಕಂಡು, ಸಾಕಷ್ಟು ಶ್ರಮ ಪಟ್ಟು, ತಮ್ಮ ಕುಟುಂಬವನ್ನು ಇಡೀ ಸಮಾಜ ಗುರ್ತಿಸುವ ನಿಟ್ಟಿನಲ್ಲಿ ತಾವು ಬದುಕಿರುತ್ತಿರಿ. ನಮ್ಮ ಒಟ್ಟಾರೆ ಸೇವೆಯನ್ನು ನಮ್ಮ ಕುಟುಂಬದ ಏಳಿಗೆಗಾಗಿ ಮುಡಿಪು ಇಟ್ಟಿರುತ್ತೇವೆ.

ಅಂತಹ ಅಮೂಲ್ಯವಾದ ಸಂಪತ್ತನ್ನು ಯಾವುದೇ ಕಾರಣಕ್ಕೂ ನಾವು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು, ನಮ್ಮ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಕೂಡಾ ಇಂತಹ ಮೋಸದ ಜಾಲವನ್ನು ಸೆದೆಬಡಿಯಲು ಸಮರ್ಥವಾಗಿ ಕೆಲಸ ಮಾಡುತ್ತದೆ, ವೇದಿಕೆ ಮೇಳ ಈಗಾಗಲೇ ನಾವು ನ್ಯಾಯಾದೀಶರ ಜೊತೆ ಈ ವಿಷಯವಾಗಿ ಮಾತನಾಡಿದ್ದೇನೆ, ಆದರೂ ಕೂಡಾ ನಾವು ಈ ಡಿಜಿಟಲ್ ಅರೆಸ್ಟ್ ಎಂಬ ವಿಷಯದಲ್ಲಿ ಅತೀ ಜಾಗೃತರಾಗಿರಬೇಕು ಎಂದಿದ್ದಾರೆ.

ಅರವತ್ತು ಆದ ನಂತರವೂ ಕೂಡಾ ಇನ್ನೂ ಕೆಲವರಿಗೆ ತಮ್ಮ ಕುಟುಂಬದ ಸಮಸ್ಯೆಗಳು ಜವಾಬ್ದಾರಿಗಳು ಇರುತ್ತವೆ, ಈಗಿನ ದಿನಮಾನಗಳಲ್ಲಿ ಎಲ್ಲರೂ ಆರ್ಥಿಕವಾಗಿ ಸಬಲರಾಗಿರುವದಿಂದ ಎಲ್ಲರಿಗೂ ಸ್ವಲ್ಪ ನೆಮ್ಮದಿ ಜೀವನ ಸಿಗುತ್ತಾ ಇದೆ, ಇವತ್ತು ಇಲ್ಲಿ ಯಾರೂ ಹಿರಿಯ ನಾಗರಿಕರಂತೆ ಕಾಣದೆ ಯುವಕರಂತೆ ಕಾಣುತ್ತಿರುವದು ಸಂತಸ, ಇನ್ನೂ ತಮ್ಮ ಆರೋಗ್ಯದ ಕಡೆಗೆ ತಾವು ಗಮನ ನೀಡಬೇಕು ತಮ್ಮೆಲ್ಲರ ಜೀವನ ಆನಂದದಿಂದ ಕೂಡಿರಬೇಕು ಎಂದರು..

ಈ ಕಾರ್ಯಕ್ರಮದಲ್ಲಿ ಕೆ ಎನ್ ಶಿವಕುಮಾರ, ಹಿರಿಯ ಸಿವಿಲ್ ನ್ಯಾಯಾದೀಶರು, ಎಂ ವಿ ಹಿರೇಮಠ ರಾಷ್ಟ್ರೀಯ ಉಪಾಧ್ಯಕ್ಷರು ವಕೀಲರ ಸಂಘ, ಸಿದ್ನಾಳ ಜಿಲ್ಲಾ ಅಧ್ಯಕ್ಷರು ನಿವೃತ್ತ ನೌಕರರ ಸಂಘ, ಎ ವಾಯ್ ಬೆಂಡಿಗೇರಿ, ಅಧ್ಯಕ್ಷರು, ಕರ್ನಾಟಕ ಹಿರಿಯ ನಾಗರಿಕರ ಸಂಘ ಬೆಳಗಾವಿ, ನಾಮದೇವ ಬಿಲಕರ, ಸುಶೀಲಾ ರಜಪೂತ, ನಿರಲಗಿಮಠ, ಸವದಿ ಮತ್ತಿತರರು ಇದ್ದರು..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *