ಬೆಳಗಾವಿಯ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ 2023..
ಸಾವಿತ್ರಿಬಾಯಿ ಫುಲೆ ಅವರ ಶೈಕ್ಷಣಿಕ ಕೊಡುಗೆಯನ್ನು ಯಾರೂ ಮರೆಯಬಾರದು..!!!
ಶಿಕ್ಷಣದ ಜೊತೆ ಇತಿಹಾಸವನ್ನು ನಾವೂ ಕಲಿಯಬೇಕು, ವಿಧ್ಯಾರ್ಥಿಗಳಿಗೂ ಕಲಿಸಬೇಕು..!!!
ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ..
ಬೆಳಗಾವಿ : ಮಂಗಳವಾರ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ಬೆಳಗಾವಿ ಉಪನಿರ್ದೇಶಕರ ಕಾರ್ಯಾಲಯ, ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ..
ಈ ಅದ್ದೂರಿ ಕಾರ್ಯಕ್ರಮದಲ್ಲಿ ಮೊದಲಿಗೆ ಬಸವರಾಜ್ ನಾಲತವಾಡಿ ಅವರು ಸ್ವಾಗತ ಕೋರಿದರು, ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸತೀಶ ಜಾರಕಿಹೋಳಿ ಅವರನ್ನು ಮಾತನಾಡಲು ಕರೆದಾಗ, ಇವತ್ತಿನ ದಿನ ಶಿಕ್ಷಕರ ದಿನಾಚರಣೆ ಎಲ್ಲರ ಬಾಳಿನಲ್ಲಿ ಬೆಳಕು ನೀಡುವ ಶಿಕ್ಷಕರ ಮಾತು ಮುಖ್ಯ ಎಂದು ತಮ್ಮ ಸರಳತೆಯನ್ನು ಮೆರೆದ ಸಚಿವರಿಗೆ ಸಭಾಭವನದಿಂದ ಚಪ್ಪಾಳೆಯ ಸುರಿಮಳೆಯಾಯಿತು..

ಇನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ವ್ಯವಸ್ಥೆಗೆ ಸರ್ವಪಲ್ಲಿ ರಾಧಾಕೃಷ್ಣ ಅವರ ಕೊಡುಗೆಯನ್ನು ವಿವರವಾಗಿ ವಿವರಿಸಿದರು, ಶಿಕ್ಷಕರು ಯಾವ ರೀತಿಯಾಗಿ ಸಮಾಜಕ್ಕೆ ಹಾಗೂ ವಿಧ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂಬ ಹಲವು ಅಂಶಗಳ ಬಗ್ಗೆ ಮಾತನಾಡಿದರು..
ಸಚಿವರ ಅಪೇಕ್ಷೆಯ ಮೇರೆಗೆ ಹಲವು ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ತಮಗೆ ಮಾತನಾಡಲು ಅವಕಾಶ ಕಲ್ಪಿಸಿದ, ಬುದ್ಧ, ಬಸವ, ಅಂಬೇಡ್ಕರ ತತ್ವಗಳನ್ನು ಅಳವಡಿಸಿಕೊಂಡ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಜೀವನದುದ್ದಕ್ಕೂ ಮಾನವೀಯತೆಯ ಮೌಲ್ಯದಲ್ಲಿ ಬದುಕಿ ಮಾದರಿಯಾಗಿದ್ದಾರೆ ಎಂದು ಅವರಿಗೆ ಧನ್ಯವಾದ ಅರ್ಪಿಸಿದರು, ಕನ್ನಡ, ಮರಾಠಿ, ಹಿಂದಿ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಶಿಕ್ಷಕರು ಹಂಚಿಕೊಂಡರು..

ಇನ್ನು ಉದ್ಘಾಟಪರ ಮಾತುಗಳನ್ನು ಆಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಶಿಕ್ಷಕರಿಗೆ ದಿನಾಚರಣೆಯ ಶುಭಾಶಯ ತಿಳಿಸಿ, ಶಿಕ್ಷಕರ ಪರಿಸ್ಥಿತಿಗಳು ಇನ್ನು ಬಹಳ ಸುಧಾರಣೆ ಆಗಬೇಕು, ಜೊತೆಗೆ ಶಿಕ್ಷಣ ವ್ಯವಸ್ಥೆಯೂ ಕೂಡಾ ಇನ್ನು ಸುಧಾರಣೆ ಆಗಬೇಕು..
ಸರ್ಕಾರಿ ಶಾಲೆಗಳು ಮುಚ್ಚಬಾರದು, ಇದರಿಂದ ಬಡ ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ, ಸಂಖ್ಯೆ ಆಧಾರದಲ್ಲಿ ಶಾಲೆ ತೆರೆಯಬಾರದು, ಎಷ್ಟೇ ಮಕ್ಕಳಿದ್ದರೂ ಅಲ್ಲಿ ಶಾಲೆ ಮತ್ತು ಶಿಕ್ಷಕ ಇರಲೇಬೇಕು ಎಂದರು..
ನಮ್ಮ ಸರ್ಕಾರಿ ಶಾಲೆಯಲ್ಲಿ ಕಲಿತ ಎಸ್ಟು ಮಕ್ಕಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಕ್ಷೇತ್ರದಲ್ಲಿ ಇದ್ದರೆ ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡಬೇಕು ಎಂದರು..

ಪರಿಸರ, ಶಿಕ್ಷಣ, ಆರೋಗ್ಯ, ಕ್ರೀಡೆ ಇವುಗಳಲ್ಲಿ ದೇಶ ಪ್ರಗತಿ ಸಾಧಿಸಬೇಕು, ಶಿಕ್ಷಕರ ಕೊರತೆ ತುಂಬಾ ಇದೆ, ಗುಣಮಟ್ಟ ಶಿಕ್ಷಣ ನೀಡಬೇಕಾದರೆ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಮೂಲಸೌಕರ್ಯ ಇರಲೇಬೇಕು, ಅದಕ್ಕಾಗಿ ನೀವು ನಮಗೆ ಒತ್ತಡ ಹಾಕಬೇಕು, ಇಲಾಖೆಯ ಮಂತ್ರಿಗಳು ಇರುತ್ತಾರೆ, ನಾವು ಇರುತ್ತೇವೆ, ಅದಕ್ಕಾಗಿ ನಿಮಗೆ ಮಾತಾಡಲು ಅವಕಾಶ ನೀಡಿದೆವು, ಆದರೆ ನೀವು ಯಾವ ಹೊಸ ವಿಚಾರವನ್ನು ಹೇಳಲಿಲ್ಲ, ನಿಮ್ಮ ಹಾಗೂ ಶಿಕ್ಷಣದ ಸಮಸ್ಯ ಏನೇ ಇದ್ದರೂ ಹೇಳಿ, ಅದರ ಪರಿಹಾರ ಸರ್ಕಾರದಿಂದ ಆಗುತ್ತದೆ ಎಂದರು..
ಸಿದ್ದರಾಮಯ್ಯ ಅವರ ಸರ್ಕಾರ ಶಿಕ್ಷಣ, ಶೋಷಿತರ, ಹಿಂದುಳಿದವರ ಬಗ್ಗೆ ಕಾಳಜಿ ಹೊಂದು, ಅನೇಕ ಅಭಿವೃದ್ಧಿಪರ ಕೆಲಸ ಮಾಡುತ್ತದೆ ಎಂದ ಅವರು, ಶಿಕ್ಷಣದ ಹೊಸ ಹೊಸ ಯೋಜನೆಗೆ ಅನುದಾನ ಪಡೆದುಕೊಳ್ಳಿ ಎಂದರು, ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣದ ಕೊಡುಗೆಯನ್ನು ನೀವು ಯಾವತ್ತೂ ಮರೆಯಬಾರದು, ಇತಿಹಾಸದ ಅರಿವು ತಮಗೆ ಇರಬೇಕು, ನಾವು ಯಾರಿಂದ ಈ ಶಿಕ್ಷಣದ ಸೌಲಭ್ಯ ಪಡೆದಿದ್ದೇವೆ, ಬುದ್ಧ ಬಸವ ಅಂಬೇಡ್ಕರ ಅವರ ಕೊಡುಗೆ ನೆನೆಯಿರಿ, ಶಿಕ್ಷಣದ ಜೊತೆ ನಿಜ ಇತಿಹಾಸ ಮಕ್ಕಳಿಗೆ ಕಳಿಸಿ ತಾವು ತಿಳಿಯಿರಿ ಎಂದರು..

ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ ಸತೀಶ ಜಾರಕಿಹೋಳಿ ಅವರು ಮಾಸ್ಟರ್ ಮೈಂಡ್ ಅಂತಾ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದರು..
ಇನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಶೆಟ್ ಅವರು ಮಾತನಾಡಿ, ಎಲ್ಲರ ಜೀವನವನ್ನು ರೂಪಿಸುವ ಒಬ್ಬರೇ ದೈವ ಎಂದರೆ ಅವರು ಶಿಕ್ಷಕರು, ಕಳೆದ ಎರಡು ತಿಂಗಳಲ್ಲಿ 80 ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ, ಆದರೆ ಶೇಕಡಾ 50 ರಷ್ಟು ಸರಿ ಇಲ್ಲಾ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಎಲ್ಲಾ ಸರ್ಕಾರಿ ಶಾಲೆಗಳು ಖಾಸಗಿ ಶಾಲೆ ರೀತಿ ಇರಬೇಕು ಎಂಬ ಸೂಚನೆ ನೀಡಿದ್ದು, ಶಾಲಾ ಸುಧಾರಣೆ ತ್ವರಿತ ಗತಿಯಲ್ಲಿ ಸಾಗುತ್ತದೆ ಎಂದಿದ್ದಾರೆ..

ಇನ್ನು ಈ ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಲ್ಲಿ ಸಾಧನೆಗೈದ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಸಚಿವ ಸತೀಶ ಜಾರಕಿಹೋಳಿ ಅವರು ಭಾಗಿಯಾದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತೊಬ್ಬ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ರಾಜು ಶೆಟ್, ಎಂಎಲ್ಸಿ ಚಾನ್ನಾರಾಜ್ ಹಟ್ಟಿಹೊಳಿ, ಜಿಲ್ಲಾ ಪಂಚಾಯತಿ ಸಿಇಒ, ಮಹಾನಗರ ಪಾಲಿಕೆ ಆಯುಕ್ತರು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು, ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಗುಂದ..