L&T, ಮೇಗ್ಗಾ ಗ್ಯಾಸ್, ಏರ್ಟೆಲ್, ಜಿಯೋ ಕಂಪನಿಗಳು ನಗರವನ್ನೆಲ್ಲಾ ಅಗೆದಿವೆ..
ನಗರವಾಸಿಗಳಿಗೆ ಸಮಸ್ಯ ಜೊತೆ ನಗರದ ಸೌಂದರ್ಯ ಹಾಳಾಗಿದೆ.
ಗುತ್ತಿಗೆ ನೀಡಿದ ಪಾಲಿಕೆಯ ಆಸ್ತಿಗಳನ್ನು ಮರಳಿ ಪಡೆಯಬೇಕು..
ನಗರ ಸೇವಕರ ಒತ್ತಾಯ..
ಬೆಳಗಾವಿ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೂರು ತಿಂಗಳ ಅವಧಿಯ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಗುರುವಾರ ನಡೆದಿದೆ, ಸ್ಮಾರ್ಟ್ ಸಿಟಿ ಕಾಮಗಾರಿಗಳು, ನಗರದ ಕಾಮಗಾರಿಗಳಿಗೆ ಕುಡಿಯುವ ನೀರು ಪೂರೈಕೆ ನಿರ್ವಹಣೆ ಕುರಿತು ಎಲ್ ಆ್ಯಂಡ ಟಿ ಸೇವೆ, ನಾಗರಿಕ ಮೂಲಸೌಕರ್ಯ ಕಾಮಗಾರಿ, ಆಸ್ತಿ ತೆರಿಗೆ ಹೆಚ್ಚಳ, ಪಾಲಿಕೆ ಕಟ್ಟಡ, ಭೂ ಒತ್ತುವರಿ ಸೇರಿದಂತೆ ಹಲವು ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬಂದವು..

ಪಾಲಿಕೆಯ ಮಹಾಪೌರರಾದ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ನಗರ ಸೇವಕರು, ಹಾಗೂ ಸ್ಥಳೀಯ ಶಾಸಕರು ನಗರದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಆರೋಗ್ಯಪೂರ್ಣ ಚರ್ಚೆಗಳನ್ನು ಮಾಡಿದ್ದಾರೆ..
ಸಾಮಾನ್ಯ ಸಭೆಯ ಆರಂಭದಲ್ಲಿ ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳ ನಡಾವಳಿಗಳ ಪರಿಶೀಲನೆ ನಡೆಯಿತು,
ಬೆಳಗಾವಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ನಗರಕ್ಕೆ ನೀರು ಪೂರೈಸುವ ಎಲ್ ಆ್ಯಂಡ್ ಟಿ ಏಜೆನ್ಸಿಯ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿದ ನಗರ ಸೇವಕರು ಪಾಲಿಕೆಯ ವಾರ್ಡ್ ಗಳಲ್ಲಿ ಹಲವೆಡೆ ರಸ್ತೆಗಳನ್ನು ಹಾಗೆಯೇ ಬಿಟ್ಟಿರುವರು, ಸೇವೆಯ ಹೆಸರಿನಲ್ಲಿ ಅಪೂರ್ಣ ಕಾಮಗಾರಿ ಮಾಡಿದ್ದರಿಂದ ನಾಗರಿಕರು ಪರದಾಡುವಂತಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು..

ಮೇಘಾ ಗ್ಯಾಸ್ ಸರ್ವಿಸ್ ಹಾಗೂ ಎಲ್ ಅಂಡ್ ಟಿ ಕಾಮಗಾರಿಯಿಂದ ಪಾಲಿಕೆಯ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ, ಇದನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಗರ ಸೇವಕರು ಪಾಲಿಕೆಯ ಆಯುಕ್ತರಿಗೆ ಆಗ್ರಹಿಸಿದರು..
ಪಾಲಿಕೆ ಸದಸ್ಯರ ಮಾತಿಗೆ ಧ್ವನಿಗೂಡಿಸಿದ ಶಾಸಕ ಅಭಯ ಪಾಟೀಲ ಅವರು, ಸೇವೆಯ ಹೆಸರಿನಲ್ಲಿ ರಸ್ತೆ ಅಗೆಯುವ ಹಾಗೂ ಪೈಪ್ಲೈನ್ ಕಾಮಗಾರಿಗಳನ್ನು ಸರಿಯಾಗಿ ಅಳವಡಿಸದೇ ಇರುವಾದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು,
ಜಿಯೋ, ಏರ್ಟೆಲ್ನಂತಹ ಕಂಪನಿಗಳು ತಮಗೆ ಬೇಕಾದ ಕಡೆ ತಂತಿಗಳನ್ನು ಎಳೆದು ಜನರಿಗೆ ತೊಂದರೆ ನೀಡುತ್ತಿವೆ.
ಆದರೆ ಈ ಕಂಪನಿಗಳಿಂದ ಪಾಲಿಕೆಗೆ ಯಾವುದೇ ತೆರಿಗೆ ಬರುತ್ತಿಲ್ಲ, ಹೆಸ್ಕಾಂಗೆ ತೆರಿಗೆ ಕಟ್ಟುತ್ತಿದ್ದಾರೆ ಅದರಲ್ಲಿ ಪಾಲಿಕೆಗೂ ಪಾಲು ಸಿಗಬೇಕು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು..

ಭೂಮಿ, ಕಟ್ಟಡಗಳ ಒತ್ತುವರಿ:
ಬೆಳಗಾವಿ ಪಾಲಿಕೆಯ ವ್ಯಾಪ್ತಿಯ ವಾರ್ಡ್ ಗಳಲ್ಲಿ ಪಾಲಿಕೆಗೆ ಸೇರಿದ ಹಲವು ಜಮೀನು ಹಾಗೂ ಕಟ್ಟಡಗಳು ಒತ್ತುವರಿಯಾಗಿದ್ದು, ಕೆಲವೆಡೆ ಬಾಡಿಗೆ ಪಾವತಿಸಿಲ್ಲ, ಇನ್ನು ಗುತ್ತಿಗೆ ಅವಧಿ ಮುಗಿದಿದ್ದರೂ ಕೂಡಾ, ಅಂತಾ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆದಿಲ್ಲ ಎಂದು ಪಾಲಿಕೆ ನಗರ ಸೇವಕರುಗಳು ದೂರಿದರು. ಪಾಲಿಕೆಯ
ಜಮೀನು, ಕಟ್ಟಡಗಳ ಗುತ್ತಿಗೆ ಅವಧಿ ಮುಗಿದಿದ್ದು, ಬಾಡಿಗೆ ಪಾವತಿಸುತ್ತಿಲ್ಲ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಕಾಂಗ್ರೆಸ್ ಸದಸ್ಯರಾದ ಮುಜಾಮಿಲ್ ಡೋಣಿ, ಅಜೀಂ ಪಟವೇಗಾರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಅವುಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೂಡಾ ಸರಿಯಾಗಿ ಆಗಿಲ್ಲ, ಅದನ್ನು ಆದಷ್ಟು ಬೇಗ ಅಧಿಕಾರಿಗಳು ಬಗೆಹರಿಸಬೇಕು ಎಂದರು..

ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ನಿಯಮ ಬಾಹಿರವಾಗಿ ಆಸ್ತಿ ತೆರಿಗೆ ಹೆಚ್ಚಿಸಿರುವ ಬಗ್ಗೆ ದೂರುಗಳು ಬಂದಿವೆ. ಸರ್ಕಾರದ ಆದೇಶದ ಪ್ರಕಾರ ಶೇಕಡಾ ಮೂರರಷ್ಟು ತೆರಿಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಶೇ.30ರಷ್ಟು ತೆರಿಗೆ ಹೆಚ್ಚಾಗಿದೆಯೆಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ, ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಸಮಸ್ಯ ಬಗೆಹರಿಸಬೇಕು, ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು, ತೆರಿಗೆಯನ್ನು ಯೋಗ್ಯ ಪ್ರಮಾಣದಲ್ಲಿ ಇಲಾಖೆಯ ನಿಬಂಧನೆಯಂತೆ ಪಡೆಯಬೇಕು ಎಂದರು..
ಅದಕ್ಕೆ ಉತ್ತರ ನೀಡಿದ ಕಂದಾಯ ಅಧಿಕಾರಿಗಳು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯವರು ನೀಡಿದ
ಪ್ರಚಲಿತ ಆಸ್ತಿ ಮೌಲ್ಯದ ಅನುಗುಣವಾಗಿ ಈ ವರ್ಷ ಪರಿಷ್ಕೃತ ತೆರಿಗೆಯನ್ನು ನಿಗದಿ ಮಾಡಿದ್ದು, 2005ರಿಂದ ಒಂದೇ ರೀತಿಯ ತೆರಿಗೆ ಪಡೆದಿದ್ದು, ಈ ವರ್ಷ ಮಾತ್ರ, ಆಸ್ತಿ ಮೌಲ್ಯದ ಅನುಗುಣವಾಗಿ ತೆರಿಗೆ ವಿದಿಸಿದ್ದರಿಂದ ಅದು ಹೆಚ್ಚಿನ ರೀತಿಯಲ್ಲಿ ಕಾಣುತ್ತಿದೆ ಎಂದರು..

ಶಾಸಕರಾದ ಅಭಯ ಪಾಟೀಲ, ಆಸಿಫ್ (ರಾಜು) ಸೇಠ್, ನಗರ ಸೇವಕರಾದ ಹನುಮಂತ ಕೊಂಗಾಲಿ, ಮುಜಮೀಲ್ ದೋನಿ, ನಿತಿನ್ ಜಾದವ್, ರವಿ ಧೋತ್ರೆ, ಗಿರೀಶ್ ದೊಂಗಡಿ, ಶ್ರೇಯಸ್ ನಕಾಡಿ, ಸಂತೋಷ ಪೆಡ್ನೇಕರ್, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..