ಯುವಸಮೂಹಕ್ಕೆ ಮತ್ತೊಮ್ಮೆ ಸೇವಾವಕಾಶ ನೀಡಿದ ಸಚಿವ ಸತೀಶ್ ಜಾರಕಿಹೊಳಿ..

ಯುವಸಮೂಹಕ್ಕೆ ಮತ್ತೊಮ್ಮೆ ಸೇವಾವಕಾಶ ನೀಡಿದ ಸಚಿವ ಸತೀಶ್ ಜಾರಕಿಹೊಳಿ..

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷರಾಗಿ ಬಸವರಾಜ ಹುಲ್ಯಾನುರ ನೇಮಕ.

ಬೆಳಗಾವಿ : ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶಣ್ಣಾ ಜಾರಕಿಹೊಳಿ ಅವರ ಆದೇಶದ ಮೇರೆಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಕಾಂಬಳೆ ಅವರು ಬಸವರಾಜ ನಾಯಕ (ಹುಲ್ಯಾನೂರ) ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ..

ಈ ಸಂಬಂಧ ತಮ್ಮ ಖುಷಿಯನ್ನು ಹಂಚಿಕೊಂಡ ಬಸವರಾಜ ನಾಯಕ (ಹುಲ್ಯಾನೂರ) ಅವರು, ನಮ್ಮ ಹೆಮ್ಮೆಯ ನಾಯಕರಾದ ಸತೀಶಣ್ಣ ಜಾರಕಿಹೊಳಿ ಅವರು ನನ್ನ ಮೇಲೆ ನಂಬಿಕೆಯಿಟ್ಟು ನೀಡಿದಂತಹ ಈ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸಿಕೊಂಡು ಹೋಗುತ್ತೇನೆ, ಯಾವತ್ತೂ ನನ್ನ ಮಾರ್ಗದರ್ಶಕರಾದ ಸತೀಶಣ್ಣ ಜಾರಕಿಹೊಳಿ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ, ಅದೇರೀತಿ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಕಾಂಬಳೆ ಅವರಿಗೆ ಕೂಡಾ ಅನಂತ ಅನಂತ ಒಂದನೆಗಳನ್ನು ತಿಳಿಸುತ್ತೇನೆ ಎಂದಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..

(ಶ್ರೀ ಬಸವರಾಜ ನಾಯಿಕ(ಹುಲ್ಯಾನೂರ)
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು..)