ಕಾಂಗ್ರೆಸ್ ಸರ್ಕಾರದ ಈ ಎರಡು ವರ್ಷದಲ್ಲಿ ಶೂನ್ಯ ಸಾಧನೆ..

ಕಾಂಗ್ರೆಸ್ ಸರ್ಕಾರದ ಈ ಎರಡು ವರ್ಷದಲ್ಲಿ ಶೂನ್ಯ ಸಾಧನೆ..

ರಾಜ್ಯ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಸರ್ಕಾರವಾಗಿದೆ.

ಇದು ಕಾಂಗ್ರೆಸ್ಸಿಗರ ಸ್ವಂತ ಆಸ್ತಿ ಸಂಪಾದನೆಯ ಸಮಾವೇಶ..

ಬೆಳಗಾವಿ ಜಿಲ್ಲಾ ಬಿಜೆಪಿಯಿಂದ ವ್ಯಂಗ್ಯ..

ಬೆಳಗಾವಿ : ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ತಳ್ಳಿದೆ, ಇದು ಆಡಳಿತ ನಡೆಸುವ ಸರ್ಕಾರವಲ್ಲ ಕೇವಲ ವಸೂಲಿ ಸರ್ಕಾರ, ಎಲ್ಲೆಲ್ಲೂ ಭ್ರಷ್ಟಾಚಾರ, ಆರ್ಥಿಕ ದಿವಾಳಿ, ಅಭಿವೃದ್ಧಿ ಶೂನ್ಯ, ಕುಸಿದ ಕಾನೂನು ಸುವ್ಯವಸ್ಥೆಗಳು ಜನಾದೇಶಕ್ಕೆ ಮಾಡಿದ ದ್ರೋಹ ಹಾಗೂ ರಾಜ್ಯಕ್ಕೆ ಮಾಡಿದ ಅಪಚಾರವಾಗಿವೆ ಎಂದು, ಕಾಂಗ್ರೆಸ್ಸಿನ ಎರಡು ವರ್ಷಗಳ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ್ ಅವರು ಕಿಡಿ ಕಾರಿದ್ದಾರೆ.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರ ಕಾಂಗ್ರೆಸ್ಸಿನ ಎಟಿಎಂ ಆಗಿ ಕೆಲಸ ಮಾಡುತ್ತಿದೆ, ಎಲ್ಲಾ ವಲಯಗಳಲ್ಲಿ ಬೆಲೆಗಳು ಏರಿಕೆಯಾಗಿವೆ, ಕಾಂಗ್ರೆಸ್ ಸರ್ಕಾರ ಸ್ಪಷ್ಟವಾಗಿ 60% ಕಮಿಷನ್ ಸರ್ಕಾರವಾಗಿದೆ, ಮೂಡಾ, ವಾಲ್ಮೀಕಿ, ಸ್ಮಾರ್ಟ್ ಮೀಟರ್, ಭೂ ಹಗರಣ, ಕಾರ್ಮಿಕ ಮಕ್ಕಳ ಪೌಷ್ಟಿಕ ಆಹಾರ ಹಗರಣ ಹೀಗೆ ಹತ್ತು ಹಲವಾರು ಹಗರಣಗಳ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ಸರ್ಕಾರ ಈಗ ಸಾಧನಾ ಸಮಾವೇಶ ಮಾಡುವದು ಅಪಹಾಸ್ಯಕ್ಕೆ ಈಡಾಗಿದೆ ಎಂದಿದ್ದಾರೆ.

ಇನ್ನು ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಇದು ಸಾಧನಾ ಸಮಾವೇಶ ಅಲ್ಲಾ, ಕಾಂಗ್ರೆಸ್ಸಿನ ಸ್ವಂತ ಆಸ್ತಿ ಸಂಪಾದನೆ ಸಮಾವೇಶ ಎಂದು ವ್ಯಂಗ್ಯ ವಾಡಿದ್ದಾರೆ, ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದರಲ್ಲೂ ವಿಧಾನ ಸಭೆಯಲ್ಲಿ ಹನಿ ಟ್ರಾಪನಂತಹ ವಿಷಯ ಚರ್ಚೆಯಾಗಿದ್ದು ದೇಶದಲ್ಲಿಯೇ ಮೊದಲನೆಯದ್ದು ಇದು ನಾಚಿಕೆಗೇಡಿನ ಸಂಗತಿ.

ಒಳ್ಳೆ ಕೆಲಸ ಮಾಡಿ, ಅಭಿವೃದ್ಧಿ ಕಾರ್ಯ ಮಾಡಿ, ತಾವು ಸಾಧನಾ ಸಮಾವೇಶ ಮಾಡಿ, ರಾಜ್ಯದ
ಜನರಿಗೆ ಈಗ ಕಾಂಗ್ರೆಸ್ ಬಗ್ಗೆ ತಿಳೀತಾ ಇದೆ, ಇದೊಂದು ಎಟಿಎಂ ಸರ್ಕಾರ ಆಗಿದೆ, ಆಪರೇಷನ್ ಸಿಂಧೂರ ವಿಷಯದಲ್ಲಿ ದೇಶದ ಭದ್ರತೆಗೆ ದಕ್ಕೆ ತರುವ ಹೇಳಿಕೆ ನೀಡುವದು ಎಷ್ಟು ಸರಿ? ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಭಾವನೆ ಇವರಿಗೆ ಯಾಕೆ ಇಲ್ಲ ಎಂದರು.

ಬೆಳಗಾವಿಯಲ್ಲಿ ತಹಶೀಲ್ದಾರ ಕಚೇರಿಯ ಸಿಬ್ಬಂದಿಯ ಆತ್ಮಹತ್ಯೆಯ ತನಿಖೆ ಏನಾಯಿತು? ಮೊನ್ನೆ ಧರ್ಮಗ್ರಂಥ ನಾಶದ ಪ್ರಕರಣದ ಬಗ್ಗೆ ಏನು ಕ್ರಮ ಆಗಿದೆ? ಇವೆಲ್ಲ ಪ್ರಕರಣಗಳ ತನಿಖೆಯಲ್ಲಿ ವಿಳಂಬ ಯಾಕೆ? ಕಾನೂನು ಸುವ್ಯವಸ್ಥೆ ನಿಜವಾಗಿಯೂ ಸರಿಯಾಗಿ ನಡೀತಿದೆಯಾ? ಎಂದು ಸರ್ಕಾರದ ನಡೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಸ ಪಾಟೀಲ, ಸಂಜಯ ಪಾಟೀಲ್, ಗೀತಾ ಸುತಾರ, ಮಲ್ಲಿಕಾರ್ಜುನ ಮಾದಮ್ಮನವರ, ನಗರ ಸೇವಕರಾದ ಹಣಮಂತ ಕೊoಗಾಲಿ, ರಾಜಶೇಖರ ದೋಣಿ, ಗ್ರಾಮೀಣ ಮಾಧ್ಯಮ ಸಂಚಾಲಕ ಸಚಿನ ಕಡಿ, ಬಾಳೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..