ಬೆಳಗಾವಿ ತಾಲೂಕು ಪಂಚಾಯತಿಗೆ ಲೋಕಾಯುಕ್ತರ ಸಹಜ ಬೇಟಿ ಹಾಗೂ ಪರಿಶೀಲನೆ..
ಬೆಳಗಾವಿ : ರಾಜ್ಯ ಲೋಕಾಯುಕ್ತ ತಂಡದ ಅಧಿಕಾರಿಗಳು ಬೆಳಗಾವಿಯ ವಿಶೇಷ ಸಭೆಯ ನಿಮಿತ್ತ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಇಲಾಖೆಗಳಿಗೆ ಬೇಟಿ ನೀಡಿ, ದಾಖಲಾತಿಗಳನ್ನು ಪರಿಶೀಲನೆ ಮಾಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಆವರಣದ ಬೆಳಗಾವಿ ತಾಲೂಕು ಪಂಚಾಯತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೇಟಿ ನೀಡಿ, ವಿವಿಧ ವಿಭಾಗಗಳಲ್ಲಿ ದಾಖಲಾತಿಗಳ ಪರಿಶೀಲನಾ ಕಾರ್ಯ ನಡೆಸಿದ್ದರು, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯ ಕೊಠಡಿಯ ಪರಿಶೀಲನೆ, ಅಲ್ಲಿರುವ ದಾಖಲೆಗಳ ವೀಕ್ಷಣೆ, ಕಪಾಟು ಡ್ರಾಗಳಲ್ಲಿ ಇರುವ ವಸ್ತುಗಳ ಪರಿಶೀಲನೆಯನ್ನು ಮಾಡಿದ್ದಾರೆ.

ಕಚೇರಿಯ ಲೆಕ್ಕ ಆಡಳಿತ ಹಾಗೂ ವಿವಿಧ ವಿಭಾಗಗಳಲ್ಲಿ ಬೇಟಿ ನೀಡಿ, ವಿಷಯ ನಿರ್ವಾಹಕರ ಬಳಿ ಇದ್ದ ಕಡತಗಳನ್ನು ಪರೀಕ್ಷೆ ಮಾಡಿದ ಲೋಕಾಯುಕ್ತ ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳ ಬಳಿ ಇರುವ ಹಣದ ಲೆಕ್ಕವನ್ನು ದಾಖಲಿಸಿಕೊಂಡು, ಕೆಲ ಸಿಬ್ಬಂದಿಗಳ ಫೋನ್ ಪೇ ವ್ಯವಾಹರದ ಮಾಹಿತಿಯನ್ನು ಪಡೆದುಕೊಂಡಿರುವರು.

ನಂತರ ತಾಲೂಕು ಪಂಚಾಯತಿ ವ್ಯಾಪ್ತಿಗೆ ಒಳಪಡುವ ಮಧ್ಯಾಹ್ನ ಉಪಹಾರ ಯೋಜನಾ ಶಾಖೆಗೆ ಹಾಗೂ ವಿಕಲಚೇತನರ ಸಭಾಭವನಕ್ಕೆ ಬೇಟಿ ನೀಡಿದ ಲೋಕಾ ಸಿಬ್ಬಂದಿಗಳು, ಅಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ, ಹೊರಗುತ್ತಿಗೆ ಹಾಗೂ ಖಾಯಂ ಸಿಬ್ಬಂದಿಗಳ ಪ್ರತ್ಯೇಕ ರೆಸಿಸ್ಟರ್ ನಿರ್ವಹಣೆ ಮಾಡಿ, ಅವರು ಕಚೇರಿಗೆ ಬರುವಾಗ ಎಷ್ಟು ದುಡ್ಡು ತಂದಿರುತ್ತಾರೆ ಹಾಗೂ ಮರಳುವಾಗ ಎಷ್ಟು ದುಡ್ಡು ಇರುತ್ತವೆ ಇಂದು ಕಡ್ಡಾಯವಾಗಿ ನಮೂದಿಸಬೇಕು ಎಂಬ ಸೂಚನೆ ನೀಡಿದ್ದು ಕಂಡುಬಂದಿದೆ..

ಇದೇ ವೇಳೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ ಹಾಗೂ ಸಹಾಯಕ ನಿರ್ದೇಶಕರಾದ ಬಸವರಾಜ ಡಿ ಕಡೆಮನಿ ಅವರು ಕಚೇರಿಗೆ ಬೇಟಿ ನೀಡಿದ ಲೋಕಾಯುಕ್ತ ತಂಡದ ಅಧಿಕಾರಿಯವರಿಗೆ ಕಚೇರಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದ್ದು, ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.