ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ನಮ್ಮ ಬಣದ್ದೇ ಗೆಲುವು..
ಕೇವಲ ಒಂದು ಸೋಲಿನಿಂದ ಜಗತ್ತು ಮುಳುಗುವದಿಲ್ಲ..
ಜಿಲ್ಲೆಯ ಬಹುತೇಕ ರೈತರ ಬೆಂಬಲ ನಮಗಿದ್ದು, ಗೆಲುವು ನಮ್ಮದೇ..
ಶಾಸಕ ಬಾಲಚಂದ್ರ ಜಾರಕಿಹೊಳಿ..
ಬೆಳಗಾವಿ : ಇದೆ ತಿಂಗಳು 19ರಂದು ನಡೆಯುವಂತ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಹುಕ್ಕೇರಿ ತಾಲೂಕಿನಿಂದ ರಾಜೇಂದ್ರ ಪಾಟೀಲ ಅವರನ್ನು ನಮ್ಮ ಅಭ್ಯರ್ಥಿಯೆಂದು ಆಯ್ಕೆ ಮಾಡಿದ್ದೇವೆ ಕಾರಣ ಹುಕ್ಕೇರಿ ಮತದಾರರು ತಮ್ಮ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಿ ಗೆಲ್ಲಿಸಿ ಕೊಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಮಂಗಳವಾರ ದಿನಾಂಕ 07/10/2025ರಂದು ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಹುಕ್ಕೇರಿ ತಾಲೂಲಿನ 41 ಪಿಕೆಪಿಎಸ್ ಮತದಾರರ ಜೊತೆ ಸಭೆ ನಡೆಸಿ ಮಾತನಾಡಿದ ಶಾಸಕರು, ಹುಕ್ಕೇರಿಯಿಂದ ರಾಜೇಂದ್ರ ಪಾಟೀಲ ಅವರನ್ನು ನಮ್ಮ ಅಭ್ಯರ್ಥಿಯೆಂದು ಘೋಷಿಸಿದ್ದು, ಎಲ್ಲರೂ ಅವರಿಗೆ ಬೆಂಬಲಿಸಿ, ಗೆಲ್ಲಿಸಬೇಕೆಂದು ಕೇಳಿಕೊಂಡಿದ್ದಾರೆ..
ಜಿಲ್ಲೆಯ ಬಹುತೇಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಈ ಚುನಾವಣೆಯಲ್ಲಿ ನಮ್ಮ ಬಣಕ್ಕೆ ಬೆಂಬಲ ನೀಡುತ್ತಿದ್ದು, ನಾವು ಸುಮಾರು 12 ಸ್ಥಾನಗಳನ್ನು ಗೆಲ್ಲುತ್ತೇವೆ ಆ ಮೂಲಕ ಡಿಸಿಸಿ ಬ್ಯಾಂಕ ಅಧಿಕಾರದ ಗದ್ದುಗೆ ಏರುತ್ತೇವೆ ಎಂದಿದ್ದಾರೆ, ಹುಕ್ಕೇರಿ ಯಮಕನಮರಡಿ ಕ್ಷೇತ್ರಗಳಲ್ಲಿ ರೈತರ ಹಿತೈದೃಷ್ಟಿಯಿಂದ ಇನ್ನು ಅನೇಕ ಸಹಕಾರಿ ಸಂಘ ಸ್ಥಾಪಿಸುವ ಯೋಚನೆ ಇದ್ದು, ರೈತರು ಆರ್ಥಿಕವಾಗಿ ಸಬಲರಾಗುವ ಅನೇಕ ಕಾರ್ಯಗಳನ್ನು ಬರುವ ದಿನಗಳಲ್ಲಿ ಕೈಗೊಳ್ಳುತ್ತೇವೆ ಎಂದರು..
ಕೇವಲ ಒಂದು ಸೋಲಿನಿಂದ ಜಗತ್ತು ಮುಳುಗುವದಿಲ್ಲ, ಕಳೆದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಬಗ್ಗೆ ಯಾರು ತಲೆಕೆಡಸಿಕೊಳ್ಳಬೇಡಿ, ಧೈರ್ಯ ಕಳೆದುಕೊಳ್ಳಬೇಡಿ, ರೈತರು ನಮ್ಮ ಜೊತೆಗೆ ಇದ್ದಾರೆ, ಅವರ ಆಶಿರ್ವಾದದಿಂದ ಬರುವ 19ರಂದು ನಮ್ಮ ಅಭ್ಯರ್ಥಿಗಳನ್ನು ಗೆಲ್ಲುಸಿಕೊಂಡು ಬರುವ ಜವಾಬ್ದಾರಿ ನಮ್ಮದು, ಯಾರು, ಏನೇ ಮಾತಾಡಿದರೂ ಕೊನೆಗೆ ಗೆಲುವು ನಮ್ಮದೇ, ಅಧಿಕಾರವೂ ನಮ್ಮದೇ ಎಂದು ಮತದಾರರಲ್ಲಿ ಆತ್ಮವಿಸ್ವಾದವನ್ನು ತುಂಬುವ ಮಾತುಗಳನ್ನು ಆಡಿದ್ದಾರೆ.
ಈ ಸಭೆಯಲ್ಲಿ ಯುವನಾಯಕ ರಾಹುಲ ಜಾರಕಿಹೊಳಿ, ರಾಜೇಂದ್ರ ಪಾಟೀಲ, ಹುಕ್ಕೇರಿಯ ಪ್ರಮುಖರಾದ ಅಪ್ಪಾಸಾಹೇಬ ಶಿರಕೋಳ, ಪ್ರಭುಗೌಡ ಪಾಟೀಲ, ಶಂಕರ ಹೆಗಡೆ, ಶಶಿರಾಜ್ ಪಾಟೀಲ್, ಬಡವರಾಜ್ ಮಟಗಾರ, ರಿಷಬ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.