ನಗರಾಭಿವೃದ್ಧಿ ಸಚಿವ ಭೈರತಿ ಸುರೇಶರನ್ನು ಬೇಟಿಯಾದ ಶಾಸಕ ಆಶಿಫ್ (ರಾಜ ಸೇಠ್..
ನಗರದ ಅಭಿವೃದ್ಧಿಯ ಕೆಲ ಕಾರ್ಯಗಳಿಗೆ ಸಚಿವರಿಂದ ಅನುಮೋದನೆ ಪಡೆದುಕೊಂಡ ಶಾಸಕ ಆಶಿಫ್ (ರಾಜು) ಸೇಠ್..
ಬೆಳಗಾವಿ : ಬೆಳಗಾವಿ ನಗರದ ಅಭಿವೃದ್ದಿ ದೃಷ್ಟಿಯಿಂದ ಕೆಲ ಕಾರ್ಯಗಳ ಅನುಮೋದನೆಗಳು ಅತೀ ಅವಶ್ಯಕವಾಗಿದ್ದು, ಅವುಗಳಿಗೆ ತಾವು ಸಹಿ ಮಾಡುವ ಮೂಲಕ ನಗರದ ಅಭಿವೃದ್ಧಿಗೆ ಅನೂಕೂಲ ಮಾಡಿಕೊಡಬೇಕು ಎಂದು, ಬೆಳಗಾವಿ ಉತ್ತರದ ಶಾಸಕ ಆಶಿಫ್ (ರಾಜು) ಸೇಠ್ ಅವರು ನಗರಾಭಿವೃದ್ಧಿ ಸಚಿವರ ಮನವೊಲಿಸಿ ಕೆಲ ಕಾಮಗಾರಿ ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ.

ಬುಧವಾರ ದಿನಾಂಕ 03/12/2025 ರಂದು ನಗರದ ಖಾಸಗಿ ಹೋಟೆಲಿನಲ್ಲಿ ಬೇರೆ ಕಾರ್ಯದ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರನ್ನು ಬೇಟಿ ಮಾಡಿದ ಶಾಸಕ ಆಶಿಫ್ (ರಾಜು) ಸೇಠ್ ಅವರು, ಬೆಳಗಾವಿ ನಗರದ ಅಭಿವೃದ್ಧಿಯ ಕುರಿತಾಗಿರುವ ಕೆಲ ಕಾಮಗಾರಿ ಪತ್ರಗಳಿಗೆ ಸಚಿವರ ಸಹಿ ಪಡೆದುಕೊಂಡಿದ್ದು, ಇದೇ ವೇಳೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಕುರಿತಾಗಿ ಹಲವು ವಿಚಾರಗಳನ್ನು ಸಚಿವರೊಂದಿಗೆ ಚರ್ಚಿಸಿದ್ದಾರೆ..
ವರದಿ ಪ್ರಕಾಶ್ ಬಿ ಕುರಗುಂದ..