ಕನ್ನಡ ಕಡ್ಡಾಯ ವಿಷಯವಾಗಿ ದಿಟ್ಟ ಹೆಜ್ಜೆ ಇಟ್ಟ ಗಡಿನಾಡು ಕನ್ನಡಿಗರ ಸೇನೆ..

ಕನ್ನಡ ಕಡ್ಡಾಯ ವಿಷಯವಾಗಿ ದಿಟ್ಟ ಹೆಜ್ಜೆ ಇಟ್ಟ ಗಡಿನಾಡು ಕನ್ನಡಿಗರ ಸೇನೆ..

ಗಡಿ ಗ್ರಾಮಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸಲು ಪನತೊಟ್ಟ ಸೇನೆ..

ಬೆಳಗಾವಿ : ರಾಜ್ಯದ ಒಳಗೆ, ನಗರ ಪ್ರದೇಶಗಳಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಎಷ್ಟು ಮುಖ್ಯವೋ ಅಷ್ಟೇ ರಾಜ್ಯದ ಗಡಿ ಗ್ರಾಮಗಳಲ್ಲಿ ಕನ್ನಡವನ್ನು ಜಾಗೃತಗೊಳಿಸುವದು, ಬೆಳೆಸುವದು ತುಂಬಾ ಮುಖ್ಯವಾಗಿದೆ ಎಂಬ ಉದ್ದೇಶ ಇಟ್ಟುಕೊಂಡು ಗಡಿನಾಡು ಕನ್ನಡಿಗರ ಸೇನೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ..

ಸೋಮವಾರ ದಿನಾಂಕ 05/01/2025ರಂದು ನಗರದ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ, ಗಡಿನಾಡು ಕನ್ನಡಿಗರ ಸೇನೆಯ ಪಧಾಧಿಕಾರಿಗಳು, ತಮ್ಮ ವ್ಯಾಪ್ತಿಗೆ ಒಳಪಡುವ ಗಡಿ ಭಾಗದ ಗ್ರಾಮ ಪಂಚಾಯತಿಗಳಲ್ಲಿಯ ಅಂಗಡಿ, ಮುಗ್ಗಟ್ಟು, ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕ ಅಳವಡಿಕೆಯಲ್ಲಿ ಶೇಕಡಾ 60ರಷ್ಟು ಕನ್ನಡ ಇರಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಮನವಿ ನೀಡಿದರು..

ಈಗಾಗಲೇ ಗಡಿ ಗ್ರಾಮಗಳ ಕೆಲ ಅಂಗಡಿ, ಮುಗ್ಗಟ್ಟು, ವ್ಯಾಪಾರ, ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣನೆ ಮಾಡಲಾಗುತ್ತಿದ್ದು, ಅದನ್ನು ಹೋಗಲಾಡಿಸಿ ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಲು ಸೂಚನೆ ನೀಡಬೇಕು, ಆ ಮೂಲಕ ಗಡಿ ಭಾಗಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕು, ಕನ್ನಡದ ಜನಜಾಗೃತಿ ಆಗಬೇಕು ಎಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಮನವಿಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹನಾಧಿಕಾರಿಗಳಾದ ಯಶವಂತಕುಮಾರ ಅವರು, ಇದು ಒಳ್ಳೆಯ ವಿಚಾರ ಹೊಂದಿರುವ ಮನವಿಯಾಗಿದ್ದು ನಾಳೆಯೇ ಎಲ್ಲಾ ಗ್ರಾಮ ಪಂಚಾಯತಿಗಳಿಗೂ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯದ ವಿಷಯವಾಗಿ ಸೂಚನೆ ನೀಡುತ್ತೇವೆ, ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬರುವಂತೆ ಮಾಡುತ್ತೇವೆ ಎಂದು ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

ಈ ವೇಳೆ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ, ಪಧಾಧಿಕಾರಿಗಳಾದ ಎಸ್ ಎಸ್ ಮೂಖನವರ, ಆನಂದ ಬಿಲಾವರ, ಸಂತೋಷ್ ಮಾಸೆನಟ್ಟಿ ಹಾಗೂ ಆನಂದ ತಳವಾರ ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಿ ಕೆ..