ಬಾಪಟಗಲ್ಲಿ ಕಾರ ಪಾರ್ಕಿಂಗ ಶುಲ್ಕದಲ್ಲಿ ಪಾಲಿಕೆಗೆ ಲಕ್ಷಗಟ್ಟಲೇ ನಷ್ಟ..
15 ತಿಂಗಳಾದರೂ ಟೆಂಡರ್ ಯಾಕೆ ಕರೆದಿಲ್ಲ??
ನಗರ ಸೇವಕ ಪೆಡನೇಕರ್ ಪ್ರಶ್ನೆಗೆ ತಬ್ಬಿಬ್ಬದಾ ಪಾಲಿಕೆ ಅಧಿಕಾರಿಗಳು..
ಬೆಳಗಾವಿ : ನಗರದ ಬಾಪಟ ಗಲ್ಲಿಯ ಹಾಗೂ ಕ್ಲಬ್ ರಸ್ತೆಯ ಕಾರ ಪಾರ್ಕಿಂಗ ಶುಲ್ಕ ಸಂಗ್ರಹಕ್ಕಾಗಿ ಪಾಲಿಕೆ ಅಧಿಕಾರಿಗಳು ತೀವ್ರ ನಿಸ್ಕಾಳಜಿ ತೋರಿದ್ದು, ಇದರಿಂದ ಪಾಲಿಕೆಗೆ ಸುಮಾರು ಐವತ್ತು ಲಕ್ಷದಷ್ಟು ತೆರಿಗೆ ನಷ್ಟ ಆಗಿದ್ದು, ಬೇಜವಾಬ್ದಾರಿ ತೋರಿದ ಸಂಬಂಧಪಟ್ಟ ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ನಗರ ಸೇವಕ ಸಂತೋಷ ಪೆಡನೆಕರ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ದಿನಾಂಕ 09/01/2026 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಗೃಹದಲ್ಲಿ ಜರುಗಿದ ಪಾಲಿಕೆಯ ತೆರಿಗೆ, ಹಣಕಾಸು ಹಾಗೂ ಅಫೀಲುಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರಾಗಿ ಭಾಗಿಯಾಗಿ ಮಾತನಾಡಿದ ಅವರು, ಪಾಲಿಕೆಯ ಆಡಳಿತದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಪಾಲಿಕೆಗೆ ಹತ್ತಾರು ಲಕ್ಷಗಳಷ್ಟು ತೇರಿಗೆ ಹಣ ನಷ್ಟ ಆಗುತ್ತಿದೆ, ಹೀಗಿದ್ದರೂ ತಾವು ಸರಿಯಾದ ಉತ್ತರ ನೀಡದೇ ಸುಮ್ಮನಿರುವುದು ಏಕೆ? ಎಂದು ಕಿಡಿ ಕಾರಿದ್ದಾರೆ.

ನಗರದ ಕೇಂದ್ರ ಸ್ಥಾನದಲ್ಲಿ ಇರುವ ಬಾಪಟ್ ಗಲ್ಲಿಯ ಕಾರ ಪಾರ್ಕಿಂಗ ಶುಲ್ಕ ಸಂಗ್ರಹಕ್ಕಾಗಿ ಸುಮಾರು 15 ತಿಂಗಳಿನಿಂದ ತಾವು ಟೆಂಡರ್ ಕರೆದಿಲ್ಲ, ಈ 15 ತಿಂಗಳಿಂದ ಅಲ್ಲಿ ಯಾರು ಪಾರ್ಕಿಂಕ್ ಶುಲ್ಕ ಸಂಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ತಮಗಿಲ್ಲ ಎಂದರೆ ಇದನ್ನು ಯಾರು ನಂಬುವದಿಲ್ಲ, ನೀವು ಈಗ ಏನು ಕೆಲಸ ಮಾಡುತ್ತಿದ್ದೀರಿ? ಮೊದಲು ಮುರಾರಿ ಎಂಬ ವಿಷಯ ನಿರ್ವಾಹಕ ಇದ್ದು ನಂತರ ಐದು ತಿಂಗಳಿಂದ ತಾವು ಇದ್ದೀರಿ, ಎರಡು ವರ್ಷದಿಂದ ವರ್ಕ್ ಆರ್ಡರ್ ಕೊಟ್ಟಿಲ್ಲ, ಆದರೂ ಅಲ್ಲಿ ಶುಲ್ಕ ಸಂಗ್ರಹ ಆಗುತ್ತದೆ ಎಂದರೆ ಹೇಗೆ ಎಂದು ಹರಿಹಾಯ್ದರು.

ಸರಿಯಾಗಿ ಕೆಲಸ ಮಾಡಿದ್ದರ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ, ಕ್ಯಾಂಟಿಲಿವರ್ ಬಗ್ಗೆ ಕೇಳಿದ ಪ್ರಶ್ನೆಗಳಿಗೂ ತಮ್ಮ ಬಳಿ ಉತ್ತರವಿಲ್ಲ, ದೊಡ್ಡ ದೊಡ್ಡ ಬ್ಯಾನರಗಳನ್ನು ನಗರದಲ್ಲಿ ನಿಯಮಮಿರಿ ಹಾಕಿದ್ದು, ಪಾಲಿಕೆ ನಿಯಮ ಮೀರಿದವರಿಗೆ ನೋಟಿಸ್ ನೀಡುವ ಬದಲು, ಆ ವ್ಯವಸ್ಯೆ ಇಲ್ಲಾ ಈ ವ್ಯವಸ್ಥೆ ಇಲ್ಲಾ, ಸ್ಪೆಸಿಯಾಲಿಸ್ಟ್ ಇಲ್ಲಾ ಎಂದು ನೆಪ ಹೇಳುವ ತಾವು, ನಗರ ಸೇವಕರು ಗಣಪತಿ ದೀಪಾವಳಿ ಶುಭಾಶಯ ತಿಳಿಸುವ ಬ್ಯಾನರ್ ಹಾಕಿದಾಗ ಎಲ್ಲಾ ಸಲಕರಣೆಗಳ ಸಮೇತ ರಾತೋ ರಾತ್ರಿ ಬಂದು ಕಿತ್ತೊಗೆಯುತ್ತೀರಿ, ಇದು ಹೇಗೆ ಸಾಧ್ಯ ಎಂದು ತರಾಟೆಗೆ ತಗೆದುಕೊಂಡರು.
ಅಧಿಕಾರಿಗಳ ಬೇಜಾವಾಬ್ದಾರಿಯ ಕೆಲ ವಿಷಯಗಳು ಪರಿಷತ್ತ ಸಭೆಯಲ್ಲಿ ಚರ್ಚೆ ಆಗಿ, ನಗರಾಭಿವೃದ್ಧಿ ಇಲಾಖೆವರೆಗೆ ಹೋಗಿವೆ, ಆದರೂ ಇವರಿಗೆ ಹೆದರಿಕೆ ಇಲ್ಲಾ, ಕರ್ತವ್ಯದ ಬಗ್ಗೆ ತಮಗೆ ಕಾಳಜಿಯೇ ಇಲ್ಲವಾ ಎಂದು ಪ್ರಶ್ನೆ ಮಾಡಿದರು..

ಇನ್ನು ಕಂದಾಯ ವಿಭಾಗದ ಕರ ವಸೂಲಿಗಾರ ಹಾಗೂ ಕಂದಾಯ ನೀರಿಕ್ಷಕರು ಬರಿ ಚುನಾವಣೆ ಕೆಲಸ ಎಂದು ಕಚೇರಿಯ ಹೊರಗೆ ಇರುತ್ತಾರೆ, ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಯಾಕೆ ತಾವು ಹೆಚ್ಚುವರಿ ಚುನಾವಣಾ ಕಾರ್ಯ ನೀಡುವಿರಿ? ಹೀಗಾದರೆ ಸಾರ್ವಜನಿಕರ ಕಾರ್ಯ ಹೇಗೆ ಆಗಬೇಕು? ಪಾಲಿಕೆಯ ತೆರಿಗೆ ಸಂಗ್ರಹ ಕಾರ್ಯ ಹೇಗೆ ಆಗಬೇಕು? ಪಾಲಿಕೆಯ ಕಂದಾಯ ಕಚೇರಿಗಳು ಖಾಲಿ ಖಾಲಿ ಇದ್ದರೆ ಹೇಗೆ? ಬಿಎಲ್ಓಗಳು ಮಾಡುವ ಕಾರ್ಯವನ್ನು ನಮ್ಮ ಪಾಲಿಕೆಯ ಕಂದಾಯ ಸಿಬ್ಬಂದಿಗಳ ಕೈಲಿ ಏಕೆ ಮಾಡಿಸುತ್ತಿದ್ದೀರಾ? ಎಂದು ಕೇಳಿದಾಗ, ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇನ್ಮುಂದೆ ಸಮಯ ವಿಂಗಡಣೆ ಮಾಡಿ, ಕಚೇರಿಯ ಕೆಲಸವನ್ನು ಕೂಡಾ ಮಾಡಲು ಸುಚಿಸುತ್ತೇವೆ ಎಂದರು.

ಪಾಲಿಕೆಯ ಈ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ರೇಖಾ ಮೋಹನ್ ಹೂಗಾರ, ಪಾಲಿಕೆಯ ಆಡಳಿತ ಪಕ್ಷದ ನಾಯಕ ಹನಮಂತ ಕೊಂಗಾಲಿ, ಸದಸ್ಯರಾದ ಸಂತೋಷ ಪೆಡನೆಕರ, ಸಾರಿಕಾ ಪಾಟೀಲ, ಜಯಂತ ಜಾಧವ, ಅಪ್ರೂಛ ಮುಲ್ಲಾ, ಹಾಗೂ ರಮೇಶ ಮೈಲುಗೋಳ ಹಾಗೂ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು..
ವರದಿ ಪ್ರಕಾಶ್ ಬಿ ಕೆ..