ಪಾಲಿಕೆ ಕಂದಾಯ ಸಿಬ್ಬಂದಿಗಳಿಗೆ ಹೆಚ್ಚುವರಿ ಚುನಾವಣಾ ಕಾರ್ಯ..

ಪಾಲಿಕೆ ಕಂದಾಯ ಸಿಬ್ಬಂದಿಗಳಿಗೆ ಹೆಚ್ಚುವರಿ ಚುನಾವಣಾ ಕಾರ್ಯ..

ಮತಗಟ್ಟೆ ಮಟ್ಟದ ಮೇಲ್ವಿಚಾರಕರ ಪ್ರಭಾರದಿಂದ ಕೈಬಿಡುವಂತೆ ಮನವಿ..

ಬೆಳಗಾವಿ : ಮತಗಟ್ಟೆ ಮಟ್ಟದ ಅಧಿಕಾರಿಗಳ ಹಾಗೂ ಮೇಲ್ವಿಚಾರಕ ಪ್ರಭಾರ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆಗ್ರಹಿಸಿ ಪಾಲಿಕೆಯ ಕಂದಾಯ ಶಾಖೆ ಸಿಬ್ಬಂದಿ ಶುಕ್ರವಾರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಡಾ ಸಿದ್ದು ಹುಲ್ಲೋಳ್ಳಿ ಅವರಿಗೆ ಮನವಿ ನೀಡಿದ್ದಾರೆ.

ಈಗಾಗಲೇ ಕಂದಾಯ ಶಾಖೆ ಕರ್ತವ್ಯಗಳಾದ ಆಸ್ತಿ ತೆರಿಗೆ ವಸೂಲಿ, ಜನಗಣತಿ, ಬ್ಯಾನರ್ ತೆರವು ಮುಂತಾದ ಕಾರ್ಯಗಳನ್ನು ನಿಭಾಯಿಸುತ್ತಿದ್ದು, ಇದೀಗ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕ ಕರ್ತವ್ಯವನ್ನೂ ನಮಗೆ ನೀಡಿದರೆ ಬಹಳಷ್ಟು ಕಾರ್ಯಭಾರ ಉಂಟಾಗಿ ಮಾನಸಿಕವಾಗಿ ದೈಹಿಕವಾಗಿ ತೊಂದರೆಯಾಗುತ್ತದೆ. ಆದ್ದರಿಂದ ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಉಪ ಆಯುಕ್ತ ಸಿದ್ದು ಹುಲ್ಲೋಳ್ಳಿ ಅವರು, ನನಗೂ ತಮ್ಮ ಸಮಸ್ಯೆ ಅರ್ಥ ಆಗುತ್ತದೆ, ನಮ್ಮಲ್ಲಿಯೂ ಕೂಡಾ ವಾರ್ಡಗಳು ಬದಲಾಗಿ ಈಗ ಕೆಲಸದ ಹೊರೆ ಹೆಚ್ಚಾಗಿದೆ, ಮೇಲಾಧಿಕಾರಿಗಳ ಜೊತೆ ಚರ್ಚಿಸಿ ತಮ್ಮ ಸಮಸ್ಯೆಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂಬ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಪಾಲಿಕೆಯ ಮಹಾ ಪೌರರಾದ ಪ್ರೀತಿ ಕಾಮಕರ ಹಾಗೂ ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಖಾ ಹೂಗಾರ ಅವರಿಗೂ ಸಿಬ್ಬಂದಿಗಳು ಮನವಿ ಅರ್ಪಿಸಿದರು.

ಈ ವೇಳೆ ಯಲ್ಲೇಶ ಬಚ್ಚಲಪುರಿ, ಸಾಗರ ಕಾಂಬಳೆ, ಸಂತೋಷ ಓಸಿ, ಸಂಜು ಪಾಟೀಲ, ದೊಡ್ಡಮನಿ, ಪ್ರಕಾಶ ಪಾಟೀಲ, ಬಸವರಾಜ ಕೋಲಕಾರ, ಸುಶಾಂತ, ಪ್ರಮೋದ, ಪುರುಷೋತ್ತಮ, ತ್ರಿವೇಣಿ ಅಷ್ಟೇಕರ, ಸುರೇಶ ಕಾಂಬ್ಳೆ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *