ಅಶೋಕ ನಗರದ ಕಂದಾಯ ಶಾಖೆಯಲ್ಲಿ ಜನದಟ್ಟನೆ ಗೊಂದಲ..
ಒಬ್ಬ ಆರ್ ಐ ಕೆಲಸ ಮಾಡುವಷ್ಟು ಸ್ಥಳದಲ್ಲಿ ಮೂರು ಆರ್ ಐ ಗಳು..
ಉತ್ತರ ಕಂದಾಯ ಶಾಖೆಗೆ ಮತ್ತೊಂದು ಕಚೇರಿಯ ಅಗತ್ಯತೆ..
ಪರಿಸ್ಥಿತಿ ತಿಳಿಗೊಳಿಸಿದ ನಗರ ಸೇವಕ ಹಾಗೂ ವಲಯ ಆಯುಕ್ತರು..
ಬೆಳಗಾವಿ : ಕಳೆದ ಹದಿನೈದು ದಿನಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡುಗಳ ಬದಲಾವಣೆ ಆಗುತ್ತಿರುವ ಅಂದರೆ, ಕಂದಾಯ ವಾರ್ಡಗಳು ರದ್ದಾಗಿ, ಕೇವಲ ಚುನಾವಣಾ ವಾರ್ಡಗಳು ಅಷ್ಟೇ ಉಳಿಸುವಂತಹ ಪ್ರಕ್ರಿಯ ನಡೆಯುತ್ತಿದ್ದರಿಂದ ಹಾಗೂ ತಾಂತ್ರಿಕ ಬದಲಾವಣೆ ನಡೆಯುತ್ತಿದ್ದ ಕಾರಣ ಕಂದಾಯ ವಿಭಾಗಕ್ಕೆ ಸಂಬಂದಿಸಿದ ಸಾರ್ವಜನಿಕರ ಕಾರ್ಯಗಳು ಆಗುತ್ತಿರಲಿಲ್ಲ.
ಆದರೆ ಸೋಮವಾರದಿಂದ ಆಸ್ತಿ ತೆರಿಗೆ ತುಂಬುವದು, ಇ ಆಸ್ತಿ, ಪಿಐಡಿ ಹಾಗೂ ಖಾತಾ ಬದಲಾವಣೆ ಕಾರ್ಯಗಳು ಪ್ರಾರಂಭವಾಗಿದ್ದು, ಅಶೋಕ ನಗರದ ಉತ್ತರ ಕಂದಾಯ ಶಾಖೆಯಲ್ಲಿ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದು, ಕಚೇರಿಯಲ್ಲಿ ಕನಿಷ್ಠ ನಡೆದಾಡಲು ಸಹ ಆಗುತ್ತಿರಲಿಲ್ಲ, ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಗಳು ಇದ್ದರೂ ಕೂಡಾ, ಓಪರೇಟರಗಳ, ಕಂದಾಯ ನೀರಿಕ್ಷಕರ, ಕಂದಾಯ ಅಧಿಕಾರಿಗಳ, ಕೊನೆಗೆ ವಲಯ ಆಯುಕ್ತರ ಬಳಿ ಸಾರ್ವಜನಿಕರು ಮುಗಿಬಿದ್ದು ನಮ್ಮ ಕೆಲಸ ಮಾಡಿ, ನಮ್ಮ ಕೆಲಸ ಮಾಡಿ ಎಂದು ಮುಗಿಬಿಳುವ ಸನ್ನಿವೇಶ ಸಾಮಾನ್ಯವಾಗಿತ್ತು.

ಅತಿಯಾದ ಜನ ದಟ್ಟನೆಯಿಂದ ಸಾರ್ವಜನಿಕರಲ್ಲೇ ಕೆಲ ಗದ್ದಲ ಹಾಗೂ ಗೊಂದಲಗಳು ಉಂಟಾಗಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು, ಆಗ ಸ್ಥಳದಲ್ಲೇ ಇದ್ದ ನಗರ ಸೇವಕ ರವಿ ದೋತ್ರೆ ಹಾಗೂ ಉತ್ತರದ ವಲಯ ಆಯುಕ್ತ ಅನಿಲ ಬೋರಗಾವಿ ಅವರು ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಹೇಲಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು, ವಯಸ್ಸಾದವರ ಹಾಗೂ ಮಹಿಳೆಯರ ಕೆಲಸಗಳನ್ನು ಮೊದಲಿಗೆ ಮಾಡಿ, ಸಾರ್ವಜನಿಕರನ್ನು ಬಹಳ ಹೊತ್ತು ನಿಲ್ಲಿಸಬೇಡಿ, ಸಮಸ್ಯೆ ಏನಾದರೂ ಇದ್ದರೆ ಅವರಿಗೆ ಸರಿಯಾಗಿ ತಿಳಿಸಿ, ನಿಮ್ಮ ನಿಮ್ಮ ಫೋನಗಳನ್ನು ಬಂದ ಮಾಡಿ ಬೇಗ ಬೇಗ ಕೆಲಸ ಮಾಡಿರಿ ಎಂದು ನಗರ ಸೇವಕ ರವಿ ದೋತ್ರೆ ಹೇಳಿದರು.
ಈ ಜನದಟ್ಟನೆಗೆ ಮುಖ್ಯ ಕಾರಣ ಎಂದರೆ ಕಿರಿದಾದ ಕಚೇರಿ, ಹಿರಿದಾದ ಕೆಲಸದ ಗಾತ್ರ, ಅಂದರೆ ಕೇವಲ ಒಬ್ಬ ಕಂದಾಯ ನೀರಿಕ್ಷಕ ಹಾಗೂ ಅವನ ಕರ ವಸೂಲಿಗಾರರು ಕುಳಿತು ಕೆಲಸ ಮಾಡುವಷ್ಟು ಸ್ಥಳ ಇರುವ ಈ ಕಚೇರಿಯಲ್ಲಿ, ಮೂರು ಕಂದಾಯ ನೀರಿಕ್ಷಕರು, ಅವರ ಕರ ವಸೂಲಿಗರರು, ಕಂದಾಯ ಅಧಿಕಾರಿಗಳು ಹಾಗೂ ವಲಯ ಆಯುಕ್ತರು ಹೇಗೆ ಕೆಲಸ ಮಾಡುತ್ತಾರೆ? ಮೂರು ಕಚೇರಿಗಳು ಇರಬೇಕಾದ ಸ್ಥಳದಲ್ಲಿ ಒಂದೇ ಕಚೇರಿ ಇದ್ದರೆ ಅಲ್ಲಿ ಜನದಟ್ಟನೆ, ಗೊಂದಲ ಆಗೇ ಆಗುತ್ತದೆ, ಬೇರೆ ಕಡೆ ಅಂದರೆ ದಕ್ಷಿಣದ ಶಾಖೆಯಲ್ಲಿ ಒಬ್ಬ ಕಂದಾಯ ನಿರೀಕ್ಷಕರಿಗೆ ಒಂದೊಂದು ವಿಶಾಲವಾದ ಕೆಚೇರಿಗಳಿವೆ.
ಪಾಲಿಕೆಯ ಕಂದಾಯ ಉಪ ಆಯುಕ್ತರು, ಆಡಳಿತ ಉಪ ಆಯುಕ್ತರು ಹಾಗೂ ಆಯುಕ್ತರು ಇದರ ಬಗ್ಗೆ ತಕ್ಷಣ ಕ್ರಮವಹಿಸಿ, 17 ಬ್ರಹತ್ ವಾರ್ಡುಗಳು ಕೆಲಸ ಮಾಡುವ ಈ ಸಿಬ್ಬಂದಿಗಳಿಗೆ ಸಮೀಪದ ಬೇರೆ ಕಚೇರಿಯ ವ್ಯವಸ್ಥೆ ಮಾಡಿಸಿ, ಸಾರ್ವಜನಿಕರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಕಳಕಳಿಯ ಬೇಡಿಕೆಯಾಗಿದೆ.
ವರದಿ ಪ್ರಕಾಶ್ ಬಿ ಕೆ…