ಪಾಲಿಕೆಯಲ್ಲಿ ಕನ್ನಡ ಪರವಾದ ಗೊತ್ತುವಳಿ ಅಂಗೀಕರಿಸಲು ಯಾವುದೇ ತೊಡಕು ಇಲ್ಲಾ..

ಪಾಲಿಕೆಯಲ್ಲಿ ಕನ್ನಡ ಪರವಾದ ಗೊತ್ತುವಳಿ ಅಂಗೀಕರಿಸಲು ಯಾವುದೇ ತೊಡಕು ಇಲ್ಲಾ..

ಮೋಹನ ಕಾತರಕಿ, ಹಿರಿಯ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯ..

ಬೆಳಗಾವಿ : ಮಹಾದಾಯಿ, ಕೃಷ್ಣೆ, ಕಾವೇರಿ ಜಲವಿವಾದ, ಗಡಿ
ವಿವಾದ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ
ವಿವಾದ ಕುರಿತು ಸರ್ವೋನ್ನತ ನ್ಯಾಯಾಲಯದ
ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರು ಬುಧವಾರ ಮುಂಜಾನೆ ಬೆಳಗಾವಿ ಸರ್ಕಿಟ್
ಹೌಸ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ
ಒಂದೂವರೆ ಗಂಟೆ ಮಾತನಾಡಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ
ಸಮಿತಿ ಹಾಗೂ ಇತರ ಸಮಾನ ಮನಸ್ಕ ಕನ್ನಡ
ಸಂಘಟನೆಗಳು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಧ್ಯಮ ಮಿತ್ರರು ಸಹ ಭಾಗವಹಿಸಿ ಅನೇಕ
ಪ್ರಶ್ನೆಗಳನ್ನು ಕಾತರಕಿ ಅವರನ್ನು ಕೇಳಿ ಉತ್ತರ ಪಡೆದರು.

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಯಾವದೇ ತೊಡಕು ಇಲ್ಲ,
ನಿರ್ಣಯ ಅಂಗೀಕರಿಸಿದರೆ ಸಬ್ ಜ್ಯೂಡಿಸ್ ಆಗುವದಿಲ್ಲ ಎಂದು ಸ್ಪಷ್ಟಪಡಿಸಿದ ಕಾತರಕಿ ಅವರು, ಸರ್ವೋನ್ನತ ನ್ಯಾಯಾಲಯದಲ್ಲಿರುವ ಗಡಿವಿವಾದ ಪ್ರಕರಣದ
ಮೆರಿಟ್ ಬಗ್ಗೆ ಮಾತನಾಡುವ ಪ್ರಶ್ನೆಯೇ ಇಲ್ಲ. ಬೆಳಗಾವಿ ನಮ್ಮದು ಎಂಬುದಕ್ಕೆ ಯಾವ ಅಡಚಣೆಯೂ ಇಲ್ಲ ಎಂದು ಹೇಳಿದರು.

ಮಹಾದಾಯಿ, ಕೃಷ್ಣೆ ಜಲವಿವಾದಗಳ ಬಗ್ಗೆ ರಾಜ್ಯ ಸರಕಾರ ಹೆಚ್ಚೆಚ್ಚು ಗಮನ ಹರಿಸಿ ನಮ್ಮ ಪಾಲಿನ ನೀರಿನ ಬಳಕೆಗೆ ಸಾಕಷ್ಟು ಹಣವನ್ನು ಮೀಸಲಿರಿಸಬೇಕು.
ಈ ಸಂಬಂಧ ಜನರ, ಕನ್ನಡ ಪರ ಸಂಘಟನೆಗಳು ಸತತವಾಗಿ ಸರಕಾರದ ಮೇಲೆ ಒತ್ತಡ ತರುತ್ತಲೇ ಇರಬೇಕು ಎಂದು ಕಾತರಕಿ ಹೇಳಿದರು.

ಆರಂಭದಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ
ಕಾತರಕಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕನ್ನಡ ಹೋರಾಟಗಾರರಾದ ವಾಜಿದ ಹಿರೆಕೋಡಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳುಕರ, ಬಾಳಪ್ಪ ಗುಡಗೇನಟ್ಟಿ, ಸಂಕುಪ್ಪಿ, ಶಂಕರ ಬಾಗೇವಾಡಿ, ಇರ್ಫಾನ್, ಮಲ್ಲಪ್ಪ ಅಕ್ಷರದ, ಶಿವಪ್ಪ ಶಮರಂತ, ಸಾಗರ ಬೋರಗಲ್ಲ, ಎಂ.ಜಿ.ಮಕಾನದಾರ
ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *