ಎಂಇಎಸ್ ಮಹಾಮೋರ್ಚಾ ಅನುಮತಿಗೆ ನಿರಾಕರಣೆ..
ಕನ್ನಡ ವಿಷಯದಲ್ಲಿ ದಿಟ್ಟತನ ಮೆರೆದ ನಗರ ಪೊಲೀಸ್ ಆಯುಕ್ತರು..
ಕನ್ನಡಪರ ಸಂಘಟನೆಗಳಿಂದ ಪೊಲೀಸ್ ಆಯುಕ್ತರಿಗೆ ಸ್ವಾಭಿಮಾನದ ಸನ್ಮಾನ..
ಬೆಳಗಾವಿ : ಇದೇ ಜೂನ್ 22 ರಂದು ಕರ್ನಾಟಕ ಸರಕಾರದ ವಿರುದ್ಧ ಭವ್ಯ ಮೋರ್ಚಾ ಹೊರಡಿಸಲು ಯೋಜಿಸಿದ್ದ ಎಂಇಎಸ್ ಸಂಘಟನೆಗೆ ಅನುಮತಿ ನಿರಾಕರಿಸಿ ಆದೇಶ
ಹೊರಡಿಸಿರುವ ಬೆಳಗಾವಿ ಪೊಲೀಸ ಆಯುಕ್ತ ಭೂಷನ ಬೊರಸೆ ಅವರನ್ನು ಕನ್ನಡ ಸಂಘಟನೆಗಳು
ಶನಿವಾರ ಸಂಜೆ ಅಭಿನಂದಿಸಿ ಶಾಲು ಹೊದಿಸಿ ಸನ್ಮಾನಿಸಿಲಾಗಿದೆ.

ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ
ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ( ಶಿವರಾಮೇಗೌಡ) ಜಿಲ್ಲಾಧ್ಯಕ್ಷ ವಾಜಿದ ಹಿರೆಕೋಡಿ, ಕರ್ನಾಟಕ
ರಕ್ಷಣಾ ವೇದಿಕೆ ಯುವಸೇನೆಯ ಅಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಕಿತ್ತೂರು ಕರ್ಣಾಟಕ ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಸಿಗಿಹಳ್ಳಿ, ಕರ್ನಾಟಕ ಜನಪರ ವೇದಿಕೆಯ ಉಪಾಧ್ಯಕ್ಷ ಸಿದ್ದಲಿಂಗಪ್ಪ ಸುಣಕುಪ್ಪಿ, ಸಂತೋಷ ತಳ್ಳಿಮನಿ, ಸನತಮ್ಮ ಮೂಕನವರ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.