ಪಾಲಿಕೆಗೆ ನೂತನ ವಲಯ ಆಯುಕ್ತರ ನೇಮಕ..
ದಕ್ಷಿಣ ಕಂದಾಯ ವಲಯ ಆಯುಕ್ತರಾಗಿ ಮಹಾಂತೇಶ್ ನಾಯಕ ನೇಮಕ..
ದಕ್ಷಿಣ ಕಂದಾಯ ವಿಭಾಗ ಇನ್ನಾದರೂ ಕಂಟ್ರೋಲಿಗೆ ಬರುತ್ತಾ?
ಬೆಳಗಾವಿ : ಮಹಾನಗರ ಪಾಲಿಕೆಯ ಆದಾಯದ ಮುಖ್ಯ ಮೂಲವಾದ ಕಂದಾಯ ವಿಭಾಗಕ್ಕೆ ದಕ್ಷಿಣ ವಲಯಕ್ಕೆ ಹೊಸ ವಲಯ ಆಯುಕ್ತರಾಗಿ ಮಹಾಂತೇಶ್ ನಾಯಕ ಅವರು ಅಧಿಕಾರ ಸ್ವೀಕಾರ ಮಾಡಿದ್ದು, ಕ್ರಿಯಾಶೀಲತೆ ಹಾಗೂ ಸಮರ್ಥ ಆಡಳಿತ ಕೌಶಲ್ಯ ಹೊಂದಿರುವ ಇವರು ಇಲಾಖೆಯ ನಿಯಮಗಳನ್ನು ಶಿಸ್ತುಬದ್ದಾಗಿ ಪಾಲಿಸಿ, ಜನಪರವಾದ ಆಡಳಿತ ನೀಡುವರೆಂಬ ನಂಬಿಕೆ ಸಾರ್ವಜನಿಕರಲ್ಲಿದೆ.
ಈ ಹಿಂದೆ ಪಾಲಿಕೆಯ ಅಭಿವೃದ್ಧಿ ವಿಭಾಗದಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದು, ವಿಭಾಗ ಹಾಗೂ ಪಾಲಿಕೆಯ ಸಿಬ್ಬಂದಿಗಳ ಬೇಡಿಕೆಯ ಹೋರಾಟಗಳಲ್ಲಿ ತಮ್ಮ ಗುಣಮಟ್ಟದ ಪ್ರಯತ್ನ ಮಾಡಿದ್ದರು, ಇಂತಹ ಒಬ್ಬ ಸಮರ್ಥ ಹಾಗೂ ಶಿಸ್ತಿನ ಅಧಿಕಾರಿ ವಲಯ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಸ್ಥಳೀಯ ಸಿಬ್ಬಂದಿಗಳು ಸಂತಸದಿಂದ ಸನ್ಮಾನದ ಮೂಲಕ ಸ್ವಾಗತ ಮಾಡಿ ಅಭಿನಂದಿಸಿದ್ದಾರೆ.
ದಕ್ಷಿಣ ಕಂದಾಯ ವಿಭಾಗದಲ್ಲಿ ಈಗಾಗಲೇ ಅನೇಕ ನಿಯಮಬಾಹಿರ ಕೃತ್ಯಗಳು ನಡೆದಿದ್ದು, ಈ ಕಂದಾಯ ವಿಭಾಗ ಯಾರ ಕಂಟ್ರೋಲಿಗೂ ಸಿಗದೇ, ಕಣ್ಮುಚ್ಚಿ ಕೆಲಸ ಮಾಡುವ ತಾನವಾದಂತ ಅನುಮಾನಗಳಿವೆ, ಹಿಂದಿನ ಅನಧಿಕೃತ 31ಪಿಐಡಿಗಳು, ಬಾಂಡ್ ಮೇಲೆ ಎ ಖಾತೆ ನೀಡಿದ್ದು, ಅನಧಿಕೃತ ದಾಖಲೆಗಳಿಂದ ಬಿ ಖಾತಾಗಳು, ಹೊರಗಿನ ವ್ಯಕ್ತಿಗಳಿಂದ (ಒಪರೇಟರ್) ಕಚೇರಿಯ ಇಡೀ ಆಡಳಿತ ನಡೆಯುವದು ಇಂತಹ ಅನೇಕ ಪ್ರಸ್ತುತ ಸಮಸ್ಯೆಗಳಿಂದ ಸಾರ್ವಜನಿಕರು ಹಾಗೂ ಇಲಾಖೆ ನೊಂದು ನಲುಗಿ ಹೋಗಿವೆ, ಈ ಹೊಸ ಅಧಿಕಾರಿಯಿಂದಾದರೂ ಕಚೇರಿಯ ವಾತಾವರಣ ಸುಧಾರಣೆ ಕಾಣಲಿ ಎಂಬುದು ಜನರ ಆಶಯ..
ವರದಿ ಪ್ರಕಾಶ್ ಬಿ ಕೆ…