ಎಸ್ಐಆರ್ : ಬಿಎಲ್ಎ ಗಳ ದೂರು ಸಲಹೆಗಳಿಗೆ ಶೀಘ್ರ ಸ್ಪಂದನೆ..

ಎಸ್ಐಆರ್ : ಬಿಎಲ್ಎ ಗಳ ದೂರು ಸಲಹೆಗಳಿಗೆ ಶೀಘ್ರ ಸ್ಪಂದನೆ..

ಪಾಲಿಕೆ ಆಯುಕ್ತ ಕಾರ್ತಿಕ್ ಎಂ..

ಬೆಳಗಾವಿ : ಎಸ್ಐಆರ್ ಕುರಿತು ರಾಷ್ಟೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರು(ಬಿಎಲ್ಎ)
ಗಳ ಹಾಗೂ ಜನಪ್ರತಿನಿಧಿಗಳ ದೂರು, ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಸ್ಪಂದಿಸಲಾಗುವುದೆಂದು ಮಹಾನಗರ ಪಾಲಿಕೆ ಆಯುಕ್ತ, ಮುಖ್ಯ ಮತದಾರರ ನೋಂದಣಾಧಿಕಾರಿ, ಕಾರ್ತಿಕ್ ಎಂ. ಹೇಳಿದರು.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ
ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಬಿಎಲ್ಎಗಳಿಗೆ ಎಸ್ಐಆರ್ ಕುರಿತು ಆಯೋಜಿಸಲಾಗಿದ್ದ ಜಾಗ್ರತಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಮನೆ ಮನೆಗೆ ತೆರಳಿ ಶೇ.ನೂರರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಭರ್ತಿ ಮಾಡಿ ಹಿಂದಿರುಗಿಸುವುದು
ವಿಳಂಬವಾಗುತ್ತಿದೆ. ಇದಕ್ಕೆ ವೇಗ ನೀಡಲು ಬಿಎಲ್ಎಗಳು ಕೈ ಜೋಡಿಸಬೇಕು. ಮತಗಟ್ಟೆ ಸ್ಥಳಾಂತರ ಮತ್ತು ವಿಭಜಿಸುವ ಕುರಿತು ಆ 8 ರೊಳಗಾಗಿ ಮನವಿ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಈಗಾಗಲೆ ಉತ್ತರ ಕ್ಷೇತ್ರದಲ್ಲಿ 1.53.031, ದಕ್ಷಿಣ ಕ್ಷೇತ್ರದಲ್ಲಿ 1.65.854 ನಮೂನೆಗಳ ಗಣಕೀಕರಣವಾಗಿದೆ. ಸಿಬ್ಬಂದಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ಸಹಕಾರದಿಂದ
ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮೇಯರ್ ಪ್ರೀತಿ ಕಾಮಕರ,
ಉಪಮೇಯರ್ ಹಣಮಂತ ಕೊಂಗಾಲಿ, ನಗರ ಸೇವಕರು, ಬಿಎಲ್ಎಗಳು ಉಪಸ್ತಿತರಿದ್ದರು.

ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ , ದಕ್ಷಿಣ ಭಾಗದ ಮತದಾರರ ನೋಂದಣಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ಹಾಗೂ ಆಡಳಿತ ವಿಭಾಗದ ಉಪ ಆಯುಕ್ತ ಉತ್ತರ ಭಾಗದ ಮತದಾರರ ಸ.ನೋಂದಣಾಧಿಕಾರಿ ಉದಯಕುಮಾರ ಟಿ. ಅವರು
ಬಿಎಲ್ಎ ಗಳ ಪ್ರಶ್ನೆಗಳಿಗೆ ಉತ್ತರಿಸಿ ಗೊಂದಲಗಳನ್ನು ನಿವಾರಿಸಿದರು.

Leave a Reply

Your email address will not be published. Required fields are marked *