ಕಲಬುರ್ಗಿ ಪಾಲಿಕೆ ನಿಯೋಗ ಬೆಳಗಾವಿ ಪಾಲಿಕೆಗೆ ಭೇಟಿ..

ಕಲಬುರ್ಗಿ ಪಾಲಿಕೆ ನಿಯೋಗ ಬೆಳಗಾವಿ ಪಾಲಿಕೆಗೆ ಭೇಟಿ..

ಬೆಳಗಾವಿ : ಕಲಬುರ್ಗಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಕರ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ನಿಯೋಗ
ಬೆಳಗಾವಿ ಮಹಾನಗರ ಪಾಲಿಕೆಗೆ ಶುಕ್ರವಾರ ಭೇಟಿ ನೀಡಿತು.

ನಿಯೋಗದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ಕಮಕನೂರ, ಸಮಿತಿ ಸದಸ್ಯರಾದ ರೇಣುಕಾ ಹೋಳ್ಕರ್, ಗಂಗಮ್ಮ ಬಿರಾದಾರ, ಲೆಕ್ಕ ಪತ್ರ ವಿಭಾಗದ ಅಧೀಕ್ಷಕ
ರವೀಂದ್ರ ಇತರರು ಇದ್ದರು.
ಪಾಲಿಕೆಯಿಂದ ಆದರದ ಸ್ವಾಗತ ಕೋರಲಾಯಿತು.

ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹಣಮಂತ ಕೊಂಗಾಲಿ, ಆಯುಕ್ತರಾದ ಕಾರ್ತಿಕ್ ಎಂ, ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ವಿಭಾಗದ ಉಪ ಆಯುಕ್ತ ಉದಯ ಕುಮಾರ ಟಿ. ಬಿ. ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಇತರೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು. ವಿಶೇಷವಾಗಿ ಕರ ಸಂಗ್ರಹ ಹಾಗೂ ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಕರ ಸಂಗ್ರಹ ಹಾಗೂ ಇತರೆ ವಿಷಯಗಳ ಮಾಹಿತಿಗಳನ್ನು ಪಡೆದುಕೊಳ್ಳಲು ಆಗಮಿಸಿದ್ದ ಅವರು, ಈ ಸಂದರ್ಭದಲ್ಲಿ ಪಾಲಿಕೆಯ ವಿವಿಧ ವಿಭಾಗಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ರಮೇಶ ಕಮಕನೂರ ಅವರು, ಪಾಲಿಕೆಯ ಆದಾಯವನ್ನು ಹೆಚ್ಚಿಸುವಲ್ಲಿ ಕಂದಾಯ ವಿಭಾಗ ಮಹತ್ವದ ಪಾತ್ರ ವಹಿಸುತ್ತದೆ ಈ ಹಿನ್ನೆಲೆಯಲ್ಲಿ ನಮಗೆ ಇಲ್ಲಿಂದ ಸಾಕಷ್ಟು ಮಾಹಿತಿ ದೊರಕಿದೆ ಹಾಗೂ ವಿವಿಧ ವಿಭಾಗಗಳ ಆಡಳಿತ ವ್ಯವಸ್ಥೆ ಮತ್ತು ನಗರ ಸ್ವಚ್ಛತೆಗಾಗಿ ಇಲ್ಲಿಯ ಸುಧಾರಣೆಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ನಂತರ ಅವರು ಸ್ಮಾರ್ಟ್ ಸಿಟಿ ಕಚೇರಿ, ತುರುಮರಿಯ ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿದರು.

Leave a Reply

Your email address will not be published. Required fields are marked *