ಬೆಳಗಾವಿ ಬಿಜೆಪಿ ಉತ್ತರ ಮಂಡಲದಿಂದ ಸಂಭ್ರಮದ ತಿರಂಗಾ ರ್ಯಾಲಿ..

ಬೆಳಗಾವಿ ಬಿಜೆಪಿ ಉತ್ತರ ಮಂಡಲದಿಂದ ಸಂಭ್ರಮದ ತಿರಂಗಾ ರ್ಯಾಲಿ..

ದೇಶಾಭಿಮಾನದ ಸಂಭ್ರಮದಲ್ಲಿ ಭಾಗಿಯಾಗುವದು ನಮ್ನೆಲ್ಲರ ಕರ್ತವ್ಯ..

ಡಾಕ್ಟರ್ ರವಿ ಪಾಟೀಲ..

ಬೆಳಗಾವಿ : ಗುರುವಾರ ಸಂಜೆ ಭಾರತೀಯ ಜನತಾ ಪಕ್ಷ ಬೆಳಗಾವಿ ಮಹಾನಗರ ಹಾಗೂ ಉತ್ತರ ಮಂಡಲದ ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಭವ್ಯ ತಿರಂಗಾ ರ್ಯಾಲಿ ದೇಶಭಕ್ತಿಯ ಸಂಭ್ರಮದೊಂದಿಗೆ ಯಶಸ್ವಿಯಾಗಿ ನೆರವೇರಿತು.

ಧರ್ಮವೀರ ಸಂಭಾಜಿ ವೃತ್ತದಿಂದ ಕಾವೇರಿ ಕೋಲ್ಡ್ ಡ್ರಿಂಕ್ ವರೆಗೆ ಸಾಗಿದ ರ್ಯಾಲಿಯಲ್ಲಿ ನೂರಾರು ದೇಶಭಕ್ತರು ತ್ರಿವರ್ಣ ಧ್ವಜವನ್ನು ಹಿಡಿದು ಉತ್ಸಾಹದಿಂದ ಹೆಜ್ಜೆ ಹಾಕಿದರು. “ಭಾರತ್ ಮಾತಾ ಕಿ ಜೈ” ಹಾಗೂ “ವಂದೇ ಮಾತರಂ” ಘೋಷಣೆಗಳು ಇಡೀ ಪರಿಸರದಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದವು.

ಈ ಸಂದರ್ಭದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಬೆಳಗಾವಿ ಬಿಜೆಪಿ ಉತ್ತರ ಮಂಡಲದ ಪಧಧಿಕಾರಿಯಾದ ಡಾಕ್ಟರ್ ರವಿ ಪಾಟೀಲ ಅವರು ಮಾತನಾಡಿ, ನಾವು ಭಾರತ ದೇಶದಂತ ಪುಣ್ಯ ಭೂಮಿಯಲ್ಲಿ ಇರುವುದೇ ಭಾಗ್ಯ, ತಿರಂಗಾ ಇದು ಎಲ್ಲಾ ಭಾರತೀಯರ ಹೆಮ್ಮೆ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ, ಈ ತ್ರಿವರ್ಣ ಧ್ವಜವನ್ನು ಹಿಡಿದರೆ ಸಾಕು ಜನ್ಮ ಸಾರ್ಥಕ ಎನಿಸುತ್ತದೆ, ದೇಶಾಭಿಮಾನ ಇಮ್ಮಡಿಯಾಗುತ್ತದೆ, ಭಾರತೀಯರಾದ ನಾವೆಲ್ಲರೂ ಇಂತಹ ಪವಿತ್ರ ಕಾರ್ಯದಲ್ಲಿ ಭಾಗಿಯಾಗುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದಿದ್ದಾರೆ.

ಈ ತಿರಂಗಾ ರ್ಯಾಲಿಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದ ಸೈನಿಕರು, ವಿದ್ಯಾರ್ಥಿಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಯುವಕರು, ಮಹಿಳೆಯರು, ಹಿರಿಯರು ಹಾಗೂ ಸಮಸ್ತ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *