ತೀವ್ರ ಕ್ರಿಯಾಶೀಲವಾದ ಪಾಲಿಕೆ ಕಂದಾಯ ನೌಕರರ ಕ್ಷೇಮಾಭಿವೃದ್ಧಿ ಸಂಘ..

ತೀವ್ರ ಕ್ರಿಯಾಶೀಲವಾದ ಪಾಲಿಕೆ ಕಂದಾಯ ನೌಕರರ ಕ್ಷೇಮಾಭಿವೃದ್ಧಿ ಸಂಘ..

ಪಾಲಿಕೆ ನೌಕರರಿಗೆ ಹೊಸ ಚೈತನ್ಯ ನೀಡಿದ ಕಂದಾಯ ನೌಕರರ ಸಂಘಟನೆ..

ಒಗ್ಗಟ್ಟಿನ ಮಂತ್ರ ಜಪಿಸಿ ಜೈಘೋಷ ಹಾಕಿದ ಸದಸ್ಯರು..

ಒಬ್ಬರಿಗಾಗಿ ಮತ್ತೊಬ್ಬರು ಎಂಬ ಕೌಟುಂಬಿಕ ಬಂಧ ಬೆಸೆದುಕೊಂಡ ಸಂಘಟನೆ..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತೀ ಸಂಭ್ರಮದಿಂದ ಆಚರಣೆ ಮಾಡಿದ್ದು ಒಂದೆಡೆ ಆದರೆ, ಮತ್ತೊಂದೆಡೆ, ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲಿಕೆಯ ನೌಕರರ ಕ್ಷೇಮಾಭಿವೃದ್ಧಿಯ ಸಲುವಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ, “ಪಾಲಿಕೆಯ ಕಂದಾಯ ನೌಕರರ ಕ್ಷೇಮಾಭಿವೃದ್ಧಿ ಸಂಘ” ಮಾಡುತ್ತಿರುವ ಕ್ರಿಯಾಶೀಲ ಕಾರ್ಯಗಳು ಪಾಲಿಕೆಯ ನೌಕರರಲ್ಲಿ ನೆಮ್ಮದಿಯ ಹೊಸ ಚೈತನ್ಯ ಮೂಡಿಸುವಂತಿದೆ.

ಸ್ವಾತಂತ್ರ್ಯ ದಿನಾಚರಣೆಗೆಂದೇ ಕಂದಾಯ ವಿಭಾಗದ ಸಿಬ್ಬಂದಿಗಳು ಒಂದೇ ಬಗೆಯ ವಿಶೇಷವಾದ ಸಮವಸ್ತ್ರಗಳನ್ನು ಧರಿಸಿಕೊಂಡು ಬಂದಿದ್ದು, ಕೆಲ ದಿನಗಳ ಹಿಂದೆಯಷ್ಟೇ ತಮ್ಮದೇ ಆದ “ಕಂದಾಯ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು” ಪ್ರಾರಂಭ ಮಾಡಿದ್ದರು. ಈಗಾಗಲೇ ಪಾಲಿಕೆಯ ನೌಕರರ ಕ್ಷೇಮಾಭಿವೃದ್ಧಿ ಸಂಘ ಇದೆ, ಕಂದಾಯ ವಿಭಾಗದ ನೌಕರರ ಸಮಸ್ಯೆಗಳಿಗೆ, ಒತ್ತಡಗಳಿಗೆ ಪರಿಹಾರ ನೀಡಲು ಹಾಗೂ ಸಿಬ್ಬಂದಿಗಳ ನಡುವಿನ ಆತ್ಮೀಯತೆಯನ್ನು ಬೆಳೆಸುವ ಸಲುವಾಗಿ ಈ ಸಂಘಟನೆ ಪ್ರಾರಂಭ ಮಾಡಿದ್ದು, ಎಲ್ಲಾ ಸಿಬ್ಬಂದಿಗಳು ಇಂದು ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿ ಪಾಲಿಕೆಗೆ ಜೈಘೋಷ ಹಾಕಿದ್ದಾರೆ.

ಈ ಬಗ್ಗೆ “ಕಂದಾಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪಧಾಧಿಕಾರಿ ಒಬ್ಬರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ನಾವು ಕೆಲಸ ಮಾಡಲು ಉತ್ತಮ ವಾತಾವರಣ ಸೃಷ್ಟಿ ಮಾಡಿಕೊಳ್ಳಲು ಹಾಗೂ ನಾವೆಲ್ಲಾ ಒಂದೇ ಮನೆಯವರು ಎಂಬ ಭಾವನೆಯಿಂದ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ನಿಲ್ಲಲು, ನಾವು ನಮಗಾಗಿ ಎನ್ನುವ ಉದ್ದೇಶದಿಂದ ಈ ಸಂಘಟನೆ ಮಾಡಿಕೊಂಡಿದ್ದೇವೆ, ಪಾಲಿಕೆಯ ಕರ್ತವ್ಯವನ್ನು ಶೃದ್ದೆ ಹಾಗೂ ಸಾಮರ್ಥ್ಯದಿಂದ ಮಾಡಲು, ಜೊತೆಗೆ ನಮ್ಮ ನಮ್ಮ ಭದ್ರತೆ ನೆಮ್ಮದಿಗೂ ಇಂತಹ ಸಂಫದ ಅವಶ್ಯಕತೆ ಇತ್ತು, ಅದಕ್ಕಾಗಿ ಸಂಘ ಮಾಡಿ, ಅದನ್ನು ಯೋಗ್ಯ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.

ಮುಂದೆ, ನಮ್ಮ ಕಂದಾಯ ವಿಭಾಗದ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ನಮ್ಮ ವಿಭಾಗಕ್ಕೆ, ಪಾಲಿಕೆಗೆ, ಜನತೆಗೆ ಜೊತೆಗೆ ನಮ್ಮೆಲ್ಲಾ ಸಿಬ್ಬಂದಿಗಳಿಗೂ ಒಳ್ಳೆಯದು ಆಗುವ ನಿಟ್ಟಿನಲ್ಲಿ ನಮ್ಮ ಸಂಘ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತ ಮುನ್ನಡೆಯುತ್ತದೆ ಎಂದರು..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *