ಶಿಂದೊಳ್ಳಿ ಗ್ರಾಮದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ..

ಶಿಂದೊಳ್ಳಿ ಗ್ರಾಮದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ..

ದೇಶದ ಸ್ವಾತಂತ್ರ್ಯ ತ್ಯಾಗ ಬಲಿದಾನಗಳ ಪ್ರತೀಕವಾಗಿದೆ..

ವೀರಭದ್ರಯ್ಯ ಪೂಜಾರ..

ಬೆಳಗಾವಿ : ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸರಕಾರಿ ಶಾಲೆ ಆವರಣದಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳ ಕಛೇರಿಗಳ ಮುಂದೆ ಧ್ವಜಾರೋಹಣ ನೆರವೇರಿಸಲಾಯಿತು.

ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ “ತಮ್ಮ ಸೇವಕರ ತಂಡ” ಮತ್ತು “ಸ್ನೇಹಿತರ ಬಳಗದಿಂದ” ಶಾಲಾ ಉಪಕರಣ ಹಾಗೂ ಧನಂಜಯ ಜಾಧವ ಇವರಿಂದ ಸಿಹಿ ಹಂಚಿಕೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವೀರಭದ್ರಯ್ಯ ಬಾಬು ಪೂಜಾರ ಇವರು ಸ್ವಾತಂತ್ರ್ಯ ದಿನವು ತ್ಯಾಗ ಹಾಗೂ ಬಲಿದಾನಗಳ ಪ್ರತೀಕವಾಗಿದೆ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ, ಭಾರತದೇಶ ಸ್ವಾತಂತ್ರ್ಯ ಪಡೆಯಬೇಕಾದರೆ ಹಲವಾರು ರೀತಿಯ ಜನಾಂದೋಲನ ಹಾಗೂ ಸತ್ಯಾಗ್ರಹ ಮಾಡಬೇಕಾಯಿತು, ವಿವಿಧ ರೀತಿಯ ಹೋರಾಟಗಳ ಮೂಲಕ ಭಾರತ ಸ್ವತಂತ್ರ ದೇಶವಾಯಿತು. ಸ್ವಾತಂತ್ರ್ಯದ ನಂತರ ಭಾರತವು ಹಿಂದುಳಿದ ದೇಶಗಳ ಪಟ್ಟಿಯಿಂದ ಹೊರಬಂದು ಈಗ ಭಾರತವು ಜಗತ್ತಿನಲ್ಲಿ ಬಲಿಷ್ಠ ದೇಶಗಳ ಸಾಲಿನಲ್ಲಿದೆ ನಾವೆಲ್ಲರೂ “ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟೆವು” ಎನ್ನುವುದು ಅರಿತು ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸುವ ಮನೋಭಾವ ನಮ್ಮಲ್ಲಿರಬೇಕು ಎಂದರು.

ಧನಂಜಯ ಜಾಧವ ಮಾತನಾಡಿ ನಮ್ಮಭಾರತ ದೇಶದ ಮೇಲೆ ಪರಕೀಯರು ದಾಳಿಮಾಡಿ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ನಾಶಮಾಡಿದರು, ಮೊಘಲರು, ಆದಿಲ್ ಶಾಹಿಗಳು, ನಿಜಾಮರು , ಸುಲ್ತಾನರು, ಬ್ರಿಟಿಷರು ನಮ್ಮ ದೇಶದ ಪ್ರಜೆಗಳ ಮೇಲೆ ಅನ್ಯಾಯ, ಅತ್ಯಾಚಾರವೆಸಗಿ ಈ ದೇಶವನ್ನು ದೋಚಿದ್ದಾರೆ. ಹಲವಾರು ದೇಶಭಕ್ತರ ಹೋರಾಟ, ಅವರ ತ್ಯಾಗ, ಬಲಿದಾನವು ವ್ಯರ್ಥವಾಗದಿರಲಿ ಮತ್ತು ಇಂದಿನ ಪಠ್ಯ ಪುಸ್ತಕಗಳಲ್ಲಿ ಪರಕೀಯರ ವೈಭವಿಕರಣ ಮಾಡದೇ ನಮ್ಮ ದೇಶದ ಅನೇಕ ವೀರರ ಶೌರ್ಯ-ಪರಾಕ್ರಮಗಳ ಬಗ್ಗೆ, ಇಲ್ಲಿಯ ಸಾಂಸ್ಕೃತಿಕ ಇತಿಹಾಸದ ಬಗ್ಗೆ, ನಮ್ಮವರ ಶಿಲಾಶಾಸನಗಳ ಬಗ್ಗೆ, ವೀರ ವನಿತೆಯರ ಬಗ್ಗೆ, ದೇಶಭಕ್ತರ ಬಗ್ಗೆ ವಿಷಯ ಇದ್ದರೆ ನಮ್ಮವರ ಇತಿಹಾಸ ಮಕ್ಕಳು ತಿಳಿಯಬಹುದು ಭಾರತದ ಇತಿಹಾಸ ಪ್ರಸಿದ್ಧ ತಾಣಗಳ ಕುರಿತಾದ ವಿಷಯಗಳು ಪಠ್ಯ ಪುಸ್ತಕಗಳಲ್ಲಿ ಇರಬೇಕೆಂದು ಹೇಳಿ, ಶಿಕ್ಷಣ ಪ್ರೀಮಿಗಳಾದ ಉಮೇಶ ಪುರಿ ಅವರು “ತಮ್ಮ ಸೇವಕರ ತಂಡದಿಂದ” ಹಾಗೂ ವೀರಭದ್ರಯ್ಯ ಇವರು “ಸ್ನೇಹಿತರ ಬಳಗದಿಂದ” ಮಾಡುವ ಸಮಾಜ ಸೇವೆಯನ್ನು ಮೆಚ್ಚಿ ಇವರ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಸಮಾಜ ಸೇವಕರಿಗೂ, ವಿದ್ಯಾರ್ಥಿಗಳಿಗೂ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉಮೇಶ ಪುರಿ, ಮೋನೇಶ ಮಾತಾರಿ, ಲಕ್ಷ್ಮಣ ಹಲಗೇಕರ, ಬಸವರಾಜ ತಳವಾರ, ಕೃಷ್ಣಾ ಪಾಟೀಲ, ಭರಮಾ ಗೊಮನಾಚೆ, ಮಹಾವೀರ ಗುಡಾಜ, ದೀಪಕ ಪುರಿ, ನಿಂಗಣ್ಣ ಮೇಕಲಮರ್ಡಿ, ಕಿರಣ ಅಂಚಿ, ಸುನೀಲ ಪಾಟೀಲ, ಪಿರಾಜಿ ಕಣಬರ್ಗಿ, ಶಾಲಾ ಸುಧಾರಣಾ ಕಮೀಟಿ ಅಧ್ಯಕ್ಷರಾದ ಮಾಳಿಗರಾಯ ಶಾಹಾಪೂರಕರ, ಸದಸ್ಯರಾದ ಭಾಗಪ್ಪ ನಾಗೂನ್ನವರ, ಶಾಲೆಯ ಪ್ರಧಾನ ಗುರುಗಳಾದ ಅಶೋಕ ಹಂಚಿನಮನಿ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *