ದಿವಂಗತ ಡಿ, ದೇವರಾಜ ಅರಸುರವರ 111ನೇ ಜಯಂತಿ ಆಚರಣೆ..
ಎಲ್ಲಾ ಸಮುದಾಯದವರು ಇಂದು ಒಳ್ಳೆ ಸ್ಥಾನದಲ್ಲಿ ಇರುವುದೇ ಅರಸುರವರ ಕೊಡುಗೆ..
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್..
ಬೆಳಗಾವಿ : ಸಮಾಜದಲ್ಲಿ ಇಂದು ನಾವೆಲ್ಲಾ ಬೇರೆ ಬೇರೆ ಸಮುದಾಯದವರು ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು ಒಂದು ಒಳ್ಳೆಯ ಸ್ಥಾನದಲ್ಲಿ ಇದ್ದು, ಕೆಲಸ ಮಾಡುತ್ತೀದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದಿವಂಗತ ದೇವರಾಜ ಅರಸು ಅವರ ಕೊಡುಗೆಗಳು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ ಅವರು ಹೇಳಿದ್ದಾರೆ.

ಗುರುವಾರ ದಿನಾಂಕ 20/08/2026ರಂದು ಜಿಲ್ಲಾಧಿಕಾರಿ ಕಚೇರಿಯ ಆವರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅರಸುರವರ 111ನೆಯ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ದೇವರಾಜ ಅರಸು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅತೀ ಅಮೂಲ್ಯವಾಗಿದ್ದು ಇಂದಿಗೂ ಕೂಡಾ ಅವರು ನೀಡಿದ ಯೋಜನೆಗಳು ಹಿಂದೂಳಿದವರ, ಬಡವರ ಬಾಳಿನ ಆಶಾ ಕಿರಣಗಳಾಗಿವೆ ಎಂದಿದ್ದಾರೆ..
ಅರಸು ಅವರ ಜಯಂತಿಯನ್ನು ಇಂದು ನಾವೆಲ್ಲಾ ಇಡೀ ಜಿಲ್ಲೆಯಲ್ಲಿ ಅತೀ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ನಮ್ಮ ಕಚೇರಿಯಿಂದ ಮೆರವಣಿಗೆ ಸಾಗುವದು, ನಮ್ಮ ಎಲ್ಲಾ ಕಾನೂನುಗಳನ್ನು ಬಡವರ ಶೋಷಿತರ ಪರವಾಗಿ ಮಾಡಿರುವ ಮಹಾನ ನಾಯಕರಾದ ಅರಸು ಅವರನ್ನು ಇಂದು ನೆನಪಿಸಿಕೊಳ್ಳುವ ದಿನ. ಸಮಾಜದಲ್ಲಿ ಸಮಾನತೆ ಬರಬೇಕು ಎಂಬ ಅವರ ಮೂಲ ಉದ್ದೇಶದ ಈಡೇರಿಕೆಗಾಗಿ ಇಂದು ನಾವೆಲ್ಲ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂಬ ಕಿವಿಮಾತು ಹೇಳಿದ್ದಾರೆ.

ಬೆಳಗಾವಿ ನಮ್ಮ ರಾಜ್ಯದ ಎರಡನೇ ರಾಜಧಾನಿ, ಇದಕ್ಕೆ ಆಡಳಿತಾತ್ಮಕ ಶಕ್ತಿ ತಂದವರು ದೇವರಾಜ ಅರಸರು, ವಿಭಾಗೀಯ ಕಚೇರಿಗಳನ್ನು ಇಲ್ಲಿಗೆ ತಂದಂತಹ ಶ್ರೇಯ ಅವರಿಗೆ ಸಲ್ಲುತ್ತದೆ ಜೊತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿಯ ರುಪುರೆಷೇಗಳನ್ನು ಆವಾಗಲೇ ಅವರು ರೂಪಿಸಿದ್ದರು, ರಾಜ್ಯದ ಎಲ್ಲಾ ಸಮುದಾಯಗಳ ವತಿಯಿಂದ ಇಂದು ಅವರ ಜಯಂತಿಯ ಶುಭಾಶಯ ತಿಳಿಸುತ್ತಾ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇಂದು ಬಡ ಸಮುದಾಯದ ವ್ಯಕ್ತಿಗಳು ಅಧಿಕಾರಿಗಳಾಗಿ ಉತ್ತಮ ಸ್ಥಾನದಲ್ಲಿ ಇದ್ದಾರೆ, ಬಡ ಮಕ್ಕಳಿಗೆ ಉಚಿತ ಊಟ, ವಸತಿ ಶಿಕ್ಷಣ ಸಿಗುತ್ತಿದೆ, ಹಿಂದುಳಿದ ಶೋಷಿತರಿಗೆ “ಉಳುವವನೆ ಒಡೆಯ” ಯೋಜನೆಯಲ್ಲಿ ಭೂಮಿ ಭಾಗ್ಯ ದೊರಕಿಸಿ ಕೊಟ್ಟಿದ್ದಾರೆ ಅದಕ್ಕೆ ಸಾರ್ಥಕತೆ ಸಿಕ್ಕಿದೆ, ಇಂದು ಬಡ ಜನರು ಬಂದು ನಮಗೆ ಒಂದು ಎಕರೆ, ಎರಡು ಎಕರೆ ಜಮೀನು ಇದೆ ಎಂದಾಗ ಆಗ ನಮಗೆ ಅರಸು ಅವರ ಕೊಡುಗೆ ನೆನಪಾಗುತ್ತದೆ, ಭೂಸುಧಾರಣೆಯ ಹರಿಕಾರ ಅವರು ಎಂದಿದ್ದಾರೆ..

ಈ ಜನ್ಮ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ಕುರಿಹುಲಿ, ನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ್ ಗುಲಾಭರಾವ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಂಗಾರಪ್ಪನವರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಾಂತಾ ಮರೀಗೌಡರ, ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ಪಾಲಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಿ ಕೆ..