ಕರವೇ ಜಿಲ್ಲಾ ಘಟಕದಿಂದ ಪಾಲಿಕೆಯ ಉಪ ಆಯುಕ್ತರಿಗೆ ಜನ್ಮ ದಿನದ ಶುಭಾಶಯ..

ಕರವೇ ಜಿಲ್ಲಾ ಘಟಕದಿಂದ ಪಾಲಿಕೆಯ ಉಪ ಆಯುಕ್ತರಿಗೆ ಜನ್ಮ ದಿನದ ಶುಭಾಶಯ..

ತಮ್ಮ ರಾಜ್ಯಾಧ್ಯಕ್ಷರ ಜನ್ಮದಿನದ ಸಂಭ್ರಮದ ಜೊತೆ ಆತ್ಮೀಯ ಅಧಿಕಾರಿಗೂ ಶುಭಕೋರಿದ ಕರವೇ ಕಲಿಗಳು..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಉಪ ಆಯುಕ್ತರಾಗಿ (ಆಡಳಿತ) ತಮ್ಮ ಸಮರ್ಥ ಹಾಗೂ ಜನಪರ ಆಡಳಿತದ ಮೂಲಕ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು, ಬಂದ ಸಮಸ್ಯೆಗಳನ್ನು ನಗುನಗುತ್ತಲೇ ಪರಿಹರಿಸುವ ಸ್ನೇಹಜೀವಿ ಅಧಿಕಾರಿಯಾದ ಉದಯಕುಮಾರ ತಳವಾರ ಅವರಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪರವಾಗಿ ಜನ್ಮ ದಿನದ ಶುಭಾಶಯ ತಿಳಿಸಿದ್ದೇವೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ..

ಜೂನ್ ಹತ್ತು ಅಂದರೆ ನಮಗೆ ತುಂಬಾ ಸಂತಸದ ದಿನವಾಗಿದ್ದು, ಕನ್ನಡವನ್ನು ಕಾಯುವ ಕೆಲಸಕ್ಕೆ ಕಂಕಣ ತೊಟ್ಟು ನಿಂತಂತ, ನಮ್ಮ ನೆಚ್ಚಿನ ಕರವೇ ರಾಜ್ಯಾಧ್ಯಕ್ಷರಾದ ಸಮರಸಿಂಹ ನಾರಾಯಣ ಗೌಡರ ಜನ್ಮದಿನದ ಸಂಭ್ರಮದ ಜೊತೆ ನಮ್ಮ ಅಚ್ಚುಮೆಚ್ಚಿನ ಪಾಲಿಕೆಯ ಅಧಿಕಾರಿಯವರ ಜನ್ಮದಿನವನ್ನು ಕೂಡಾ ಆಚರಿಸುವದು ನಮಗೆ ತುಂಬಾ ಸಂತಸ ವಿಷಯ ಎಂದಿದ್ದಾರೆ.

ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಒಬ್ಬ ಉತ್ತಮ ಅಧಿಕಾರಿಯಾಗಿ, ಬರುವ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ, ಗಣಪತಿ ಹಬ್ಬ, ರಾಜ್ಯೋತ್ಸವ, ಮಹಾಪುರುಷರ ಜಯಂತಿಗಳು, ಪ್ರತಿಭಟನೆಗಳ ಸಂದರ್ಭಗಳು, ಇತರ ಸಭೆ ಸಮಾರಂಭಗಳು, ನಮ್ಮ ಕನ್ನಡಪರ ಸಂಘಟನೆಗಳ ಕಾರ್ಯಗಳು ಇಂತಹ ಅನೇಕ ಸೂಕ್ಷ್ಮ ವಿಷಯಗಳಲ್ಲಿ ತಮ್ಮ ಆಡಳಿತ ಸೂಕ್ಷ್ಮತೆ ಹಾಗೂ ಕೌಶಲ್ಯಗಳಿಂದ ಸಮಾಜಕ್ಕೆ ಹಾಗೂ ಜನಸ್ನೇಹಿ ಆಡಳಿತವನ್ನು ನೀಡಿದ ಇಂತಹ ಅಧಿಕಾರಿಗೆ ಜನ್ಮ ದಿನದ ಶುಭಾಶಯ ತಿಳಿಸುವದಕ್ಕೆ ಸಂತಸ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ಉಪ ಆಯುಕ್ತರ 48ನೇ ವರ್ಷದ ಶುಭಾಶಯ ತಿಳಿಸುವ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ಅವರ ಜೊತೆಗೆ ಸಂಘಟನೆಯ ಪಧಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *