ಡಿಐಜಿ ರಾಮಚಂದ್ರರಾವ್ ಅವರನ್ನು ವಜಾ ಮಾಡಬೇಕು, ಶಿಡ್ಲಘಟ್ಟದ ರಾಜೀವ್ ಗೌಡರನ್ನು ಕೂಡಲೇ ಬಂಧಿಸಿ..
ನಯನಾ ಭಸ್ಮೆ, ಜಿಲ್ಲಾಧ್ಯಕ್ಷರು ಬಿಜೆಪಿ ಮಹಿಳಾ ಘಟಕ ಬೆಳಗಾವಿ..
ಬೆಳಗಾವಿ : ಬಿಜೆಪಿ ಮಹಿಳಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.ನಯನಾ ಭಸ್ಮೆ ಅವರು ಮಾತನಾಡಿ ನೊಂದ ಅಮಾಯಕ ಮಹಿಳೆಯರು ದೂರು ನೀಡಲು ಕಚೇರಿಗೆ ಬಂದರೆ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಡಿಐಜಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತ್ತು ಮಾಡಿದೆ.

ಆದರೆ ರಾಮಚಂದ್ರ ರಾವ್ ರವರನ್ನು ಕೆಲಸದಿಂದ ಕೂಡಲೇ ವಜಾಗೊಳಿಸಬೇಕು, ಹಾಗೆಯೇ ಶಿಡ್ಲಘಟ್ಟ ನಗರಸಭೆಯ ಆಯುಕ್ತರಾದ ಅಮೃತಾಗೌಡರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಗರಸಭೆ ಕಚೇರಿಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ ರಾಜೀವಗೌಡರವರ ಮೇಲೆ ಎಫ್ಐಆರ್ ಆಗಿ 6 ದಿನಗಳಾಗಿದ್ದರೂ ಇನ್ನೂ ಬಂಧಿಸಿಲ್ಲ. ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ
ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ಶೀಲಾ ಗಡ್ಕರಿ, ಉಜ್ವಲ ಬಡನಾಚೆ, ಶ್ವೇತಾ ಜಗದಾಳೆ, ಶಾಲಿನಿ ಇಳಿಗೇರ್ ಪ್ರಮುಖ ಪದಾಧಿಕಾರಿಗಳು ಮತ್ತು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.