ಪಾಲಿಕೆಗೆ ಬೇಟಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್.
ಕೌನ್ಸಿಲ್ ಹಾಲ್ ಕಂಡು ಖುಷಿಪಟ್ಟ ಜಿಲ್ಲಾಧಿಕಾರಿಗಳು..
ಬೆಳಗಾವಿ : ಶುಕ್ರವಾರ ಸಂಜೆ ಬೆಳಗಾವಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೆ ಬೇಟಿ ನೀಡಿ, ಕೆಲ ಮುಖ್ಯ ವಿಭಾಗಗಳು, ಗ್ರಂಥಾಲಯ ಹಾಗೂ ಪರಿಷತ್ (ಕೌನ್ಸಿಲ್) ಹಾಲ್ ವೀಕ್ಷಿಸಿ ಪಾಲಿಕೆಯ ಮುಖ್ಯ ಕಚೇರಿಯಲ್ಲಿಯ ವ್ಯವಸ್ಥೆಯನ್ನು ನೋಡಿ ಖುಷಿ ಪಟ್ಟ ಜಿಲ್ಲಾಧಿಕಾರಿಗಳು, ಪಾಲಿಕೆ ಅಧಿಕಾರಿಗಳಿಗೆ ಕೆಲ ಆತ್ಮೀಯ, ಸೌಜನ್ಯದ ಸೂಚನೆಗಳನ್ನು ನೀಡಿದ್ದಾರೆ.
ಇದಕ್ಕೂ ಮೊದಲು ಪಾಲಿಕೆಯ ಎದುರಿನ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬೆಳಗಾವಿ ನಗರದ (ಉತ್ತರ ಹಾಗೂ ದಕ್ಷಿಣ) ಎಸ್ಐಆರ್ ಕಾರ್ಯದಲ್ಲಿ ಭಾಗಿಯಾದ ಬಿಎಲ್ಒ, ಮೇಲ್ವಿಚಾರಕರು, ಚುನಾವಣಾ ವಿಭಾಗದ ಸಿಬ್ಬಂದಿಗಳು, ಹಾಗೂ ಉತ್ತರ ಹಾಗೂ ದಕ್ಷಿಣ ಭಾಗದ ಮತದಾರರ ನೊಂದಣಾಧಿಕಾರಿಗಳು, ಸಹ ನೊಂದಣಾಧಿಕಾರಿಗಳಿಗೆ ಮಹತ್ವದ ಸಭೆಯನ್ನು ತಗೆದುಕೊಂಡ ಜಿಲ್ಲಾಧಿಕಾರಿಗಳು, ಈಗಾಗಲೇ ತಾವು ಉತ್ತಮ ಕಾರ್ಯ ಮಾಡುತ್ತಿದ್ದೀರಾ, ಮುಂದೆಯೂ ಕೂಡಾ ನಿಗದಿತ ಅವಧಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿಸಿ, ಜಿಲ್ಲೆಗೆ ಉತ್ತಮ ಸ್ಥಾನ ತರಬೇಕೆಂದು ಸ್ಫೂರ್ತಿದಾಯಕ ಪ್ರೇರಣೆ ನೀಡಿದ್ದರು.

ಸಭೆಯ ನಂತರ ಹಾಗೇ ಸೌಜನ್ಯದ ಭೇಟಿಗೆ ಪಾಲಿಕೆಗೆ ಆಗಮಿಸಿ ಎಂದು ಪಾಲಿಕೆಯ ಉಪ ಆಯುಕ್ತರುಗಳು (ಆಡಳಿತ ಮತ್ತು ಕಂದಾಯ) ಮನವಿ ಮಾಡಿಕೊಂಡಾಗ ಜಿಲ್ಲಾಧಿಕಾರಿಗಳನ್ನು ಪಾಲಿಕೆಗೆ ಆಗಮಿಸಿ, ಮುಖ್ಯ ಸ್ಥಳಗಳನ್ನು ಅವಲೋಕಿಸಿ ಸಂತಸಗೊಂಡಿದ್ದಾರೆ.
ಈ ಸೌಜನ್ಯದ ಬೇಟಿ ವೇಳೆ ಪ್ರೊಬೆಷನರಿ ಐಎಎಸ್ ಅಧಿಕಾರಿ ರೋಹಿತ ಸಿಂಗ್, ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ನಾಯಕ, ಪಾಲಿಕೆ ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ತಳವಾರ, ಡಾ ಸಿದ್ದು ಹುಲ್ಲೋಳ್ಳಿ ಉಪ ಆಯುಕ್ತರು (ಕಂದಾಯ) ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕೆ..