ಉಷಾತಾಯಿ ಗೊಗಟೆ ಕನ್ಯಾ ವಿದ್ಯಾಲಯದಲ್ಲಿ ಇಂಟರ್ಯಾಕ್ಟ್ ಕ್ಲಬ್ ಪುನರ್‌ರಚನೆ..

ಉಷಾತಾಯಿ ಗೊಗಟೆ ಕನ್ಯಾ ವಿದ್ಯಾಲಯದಲ್ಲಿ ಇಂಟರ್ಯಾಕ್ಟ್ ಕ್ಲಬ್ ಪುನರ್‌ರಚನೆ..

ಬೆಳಗಾವಿ : ಬೆಳಗಾವಿ ಎಜುಕೇಶನ್ ಸೊಸೈಟಿಯ ಶ್ರೀಮತಿ ಉಷಾತಾಯಿ ಗೊಗಟೆ ಕನ್ಯಾ ವಿದ್ಯಾಲಯದಲ್ಲಿ 2026–27ನೇ ಶೈಕ್ಷಣಿಕ ವರ್ಷದ ಇಂಟರ್ಯಾಕ್ಟ್ ಕ್ಲಬ್‌ನ ಪುನರ್‌ರಚನೆ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಮುಕುಂದ ಉಡಚಣಕರ ಹಾಗೂ ಗೌರವ ಅತಿಥಿಗಳಾಗಿ ಅಮಿತ್ ಸಾಠೆ, ಶೈಲೇಶ್ ಮಾಂಗಲೆ, ಸುದರ್ಶನ ಹುನಶ್ಯವಾಡಕರ ಮತ್ತು ಶರಣರಾಜ ಛಪ್ಪರಬಂಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯ ಚಿಂತಾಮಣಿ ಗ್ರಾಮೋಪಾಧ್ಯೆ ವಹಿಸಿದ್ದರು.

ಮುಖ್ಯ ಅತಿಥಿಗಳಿಂದ ಕಾಲರ್ ಹಾಗೂ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡುವ ಮೂಲಕ ಇಂಟರ್ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ನೀಡಲಾಯಿತು. ಹರ್ಷಿತಾ ನಂದಿ ಅಧ್ಯಕ್ಷೆಯಾಗಿ, ಆರ್ಯಾ ಲೋಹಾರ ಉಪಾಧ್ಯಕ್ಷೆಯಾಗಿ, ಕ್ಷಮಾ ಉಪಾಸೆ ಕಾರ್ಯದರ್ಶಿಯಾಗಿ, ಶ್ರಾವಣ್ತಿ ಇಟಗಿ ಸಹ ಕಾರ್ಯದರ್ಶಿಯಾಗಿ, ಶ್ರೇಯಾ ಅನಗೋಳ ಖಜಾಂಚಿಯಾಗಿ ಹಾಗೂ ಸಮೃದ್ಧಿ ರಣಸುಭೆ, ಸೃಷ್ಟಿ ಮೇದಾರ, ಸಾಕ್ಷಿ ಬಡಮಾಂಜಿ, ನಿವೇದಿತಾ ಬಾಂಡಗಿ ಮತ್ತು ನಿಸರ್ಗಾ ದೊಡ್ಡಕಲ್ಲನವರ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ಮುಕುಂದ ಉಡಚಣಕರ ಮಾತನಾಡಿ, ರೋಟರಿ ಕ್ಲಬ್ ಹಾಗೂ ಇಂಟರ್ಯಾಕ್ಟ್ ಕ್ಲಬ್‌ನಲ್ಲಿ ಭಾಗವಹಿಸುವುದರಿಂದ ಸಮಾಜಸೇವೆ, ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಪರೋಪಕಾರದಂತಹ ಉತ್ತಮ ಗುಣಗಳು ಬೆಳೆಯುತ್ತವೆ. ಆದ್ದರಿಂದ ವಿದ್ಯಾರ್ಥಿನಿಯರು ಇಂಟರ್ಯಾಕ್ಟ್ ಕ್ಲಬ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಪರೋಪಕಾರಿ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಶ್ರೇಯಾ ಅಂಗೋಳ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರಾವಂತಿ ಇಟಗಿ ಸ್ವಾಗತ ಹಾಗೂ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸಹನಾ ದೇಗಲೋಳಿ ವಂದನಾರ್ಪಣೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಎಂ. ಕೆ. ಮದಾರ್, ಶಿಕ್ಷಕರಾದ ವೈ. ಎಚ್. ಕಾಂಬಳೆ ಹಾಗೂ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.