ಪಾಲಿಕೆಯ ಉಪ ಆಯುಕ್ತರ ಪರ ನಿಂತ ನಗರ ಸೇವಕ ರವಿ ದೋತ್ರೆ..
ಮಂಗಳವಾರ : ಮಹಾನಗರ ಪಾಲಿಕೆಯ ಆಸ್ತಿಗಳನ್ನು ಉಳಿಸುವ ಹಾಗೂ ತಮ್ಮ ಜವಾಬ್ದಾರಿಯ ಕರ್ತವ್ಯವನ್ನು ನಿರ್ವಹಿಸಿದ ಪಾಲಿಕೆಯ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ಅವರು (ಪುಟ್ ಪಾತ ಅತಿಕ್ರಮಣ ತೆರವು ಕಾರ್ಯಾಚರಣೆ) ಅನೇಕ ಜನರ ಕೋಪಕ್ಕೆ ಗುರಿಯಾಗಿ, ಕೆಲ ಜನರಿಂದ ಅನೇಕ ಮಾತುಗಳು ಕೇಳಿ ಬಂದವು, ಆಗ ಪಾಲಿಕೆಯ ಆಯುಕ್ತರಾದಿಯಾಗಿ ಪಾಲಿಕೆಯ ಹಿರಿಯ ಅಧಿಕಾರಿಗಳು ಅವರಿಗೆ ಬೆಂಬಲವಾಗಿ ನಿಲ್ಲಬೇಕಿತ್ತು, ಅವರು ಪಾಲಿಕೆ ಕೆಲಸವನ್ನೇ ಮಾಡಿದ್ದಾರೆ, ಒಳ್ಳೆಯ ಕೆಲಸ ಮಾಡಿದ ಅಭಿಕಾರಿಗಳಿಗೆ ನೈತಿಕ ಬೆಂಬಲ ನೀಡುವದು ಎಲ್ಲಾ ಅಧಿಕಾರಿಗಳ ಜವಾಬ್ದಾರಿ ಎಂದು ಲಕ್ಷ್ಮಿ ನಿಪ್ಪಾಣಿಕರ ಪರ ನಗರ ಸೇವಕ ರವಿ ದೋತ್ರೆ ಬ್ಯಾಟ್ ಬಿಸಿದ್ದಾರೆ..
ದಿನಾಂಕ 14/07/2026 ರಂದು ಮಹಾನಗರ ಪಾಲಿಕೆಯಲ್ಲಿ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬ್ರಹ್ಮಾನಂದ ಮಿರಜಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಲೆಕ್ಕ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರಾದ ರವಿ ದೋತ್ರೆ ಅವರು ಪಾಲಿಕೆಯ ಉಪ ಆಯುಕ್ತರ ಪರವಾಗಿ ಮಾತನಾಡಿದ್ದು ವಿಶೇಷವಾಗಿತ್ತು..

ನಂತರ ಸಭೆಯಲ್ಲಿ ನಡಾವಳಿಯಂತೆ ವಿವಿಧ ವಿಷಯಗಳು ಚರ್ಚಿಸಲ್ಪಟ್ಟವು. ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಮೇಯರ್ ಪ್ರೀತಿ ಕಾಮಕರ, ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೆಕರ, ಸಮಿತಿ ಸದಸ್ಯರಾದ ರವಿ ಧೋತ್ರೆ, ರವಿರಾಜ್ ಸಾಂಬ್ರೆಕರ್, ನೇತ್ರಾವತಿ ಭಾಗವತ, ವೀಣಾ ಬಿಜಾಪುರೆ, ಶಿವಾಜಿ ಮಂಡೋಳಕರ, ಅಸ್ಮಿಥಾ ಪಾಟೀಲ ಹಾಗೂ ನಗರಸೇವಕರು, ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ, ಪರಿಷತ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಬೀಳಗಿಕರ, ಪರಿಸರ ಅಭಿಯಂತರ ಹಣಮಂತ ಕಲಾದಗಿ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.