ಪಾಲಿಕೆ ಮೇಯರ್ ಹಾಗೂ ಉಪ ಮೇಯರಗೆ ಸರ್ಕಾರಿ ಸೌಲಭ್ಯ ನಿಲ್ಲಬೇಕು..

ಪಾಲಿಕೆ ಮೇಯರ್ ಹಾಗೂ ಉಪ ಮೇಯರಗೆ ಸರ್ಕಾರಿ ಸೌಲಭ್ಯ ನಿಲ್ಲಬೇಕು..

ಪಾಲಿಕೆಯ ಉಪ ಆಯುಕ್ತರಿಗೆ ಮನವಿ..

ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ
ಪರವಾದ ಗೊತ್ತುವಳಿ ಅಂಗೀಕರಿಸಲು ಹಿಂದೇಟು
ಹಾಕುತ್ತಿರುವ ಪಾಲಿಕೆಯ ಮಹಾಪೌರರು ಮತ್ತು
ಉಪಮಹಾಪೌರರು ಬಳಸುತ್ತಿರುವ ಪಾಲಿಕೆಯ
ಕಾರುಗಳನ್ನು ಜಪ್ತಿ ಮಾಡಬೇಕಲ್ಲದೆ ಅವರಿಬ್ಬರ
ಕೊಠಡಿಗಳಿಗೆ ಬೀಗ ಜಡಿದು ಅವರು ಒಳಗೆ
ಪ್ರವೇಶಿಸದಂತೆ ತಡೆಯಬೇಕೆಂದು ಗಡಿನಾಡು ಕನ್ನಡಿಗರ ಸೇನೆಯು ಪಾಲಿಕೆಯ ಆಯುಕ್ತರನ್ನು ಆಗ್ರಹಿಸಿದೆ.

ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಅವರ ನೇತೃತ್ವದ ನಿಯೋಗವು ಪಾಲಿಕೆಯ ಉಪ ಆಯುಕ್ತ ಸಿದ್ದು ಹುಲ್ಲೋಳಿ ಅವರಿಗೆ ಬುಧವಾರ ಸಂಜೆ ಮನವಿ ಸಲ್ಲಿಸಿದೆ.
ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಹಿಂದೇಟು ಹಾಕುವವರು ಸರಕಾರಿ ಕಾರುಗಳನ್ನು ಬಳಸುತ್ತಿರುವುದು ಅವರಿಬ್ಬರ ಭಂಡತನಕ್ಕೆ ಸಾಕ್ಷಿಯಾಗಿದೆ. ಅವರ ಕಾರುಗಳನ್ನು ಜಪ್ತಿ ಮಾಡದಿದ್ದರೆ ಪಾಲಿಕೆಯ ಆಯುಕ್ತರ ವಿರುದ್ಧವೇ ಹೋರಾಟ
ಮಾಡಬೇಕಾಗುತ್ತದೆ. ಅವರ ಕಾರುಗಳು ನಗರದಲ್ಲಿ ಸಂಚರಿಸಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು
ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಪಾಲಿಕೆಯ ನಾಮನಿರ್ದೇಶಿತ ಸದಸ್ಯ ದಿನೇಶ ನಾಶಿಪುಡಿ, ಸಂತೋಷ ಮಾಸೇನಟ್ಟಿ, ಎಸ್.ಎಸ್.ಮೂಕನವರ, ರಾಹುಲ್ ಭೋಸ್ಲೆ, ಸಂತೋಷ ತಳ್ಳಿಮನಿ , ಗಜಾನನ, ಆನಂದ
ಬಿಲಾವರ, ಶಿವಾಜಿ ಗೊರವ ನಿಯೋಗದಲ್ಲಿದ್ದರು.

Leave a Reply

Your email address will not be published. Required fields are marked *