ಪೋಲಿಸ್ ಸ್ನೇಹಜೀವಿಗಳ ತಂಡದಿ೦ದ ಸಮಾಜಮುಖಿ ಕಾರ್ಯ..

ಬೆಳಗಾವಿ :- ಪೋಲಿಸ್ ಇಲಾಖೆಗೆ ಸೇರಿ ೧೮ ವರ್ಷಗಳ ಸೇವಾ ಪಯಣವನ್ನು ಸಾರ್ಥಕವಾಗಿ ಆಚರಿಸಿದ ೨೦೦೮ ನೇ ಸಾಲಿನ ಪೋಲಿಸ್ ಸ್ನೇಹಜೀವಿಗಳ ತಂಡವು ಬೆಳಗಾವಿ ನಗರದ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟಿನ ಶ್ರೀಮತಿ ಚಿನ್ನಮ್ಮಾ ಬಸವಂತಯ್ಯಾ ಹಿರೇಮಠ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿತು.

ಈ ಸಂದರ್ಭದಲ್ಲಿ ವೃದ್ಧಾಶ್ರಮದ ನಿವಾಸಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದ ತಂಡದ ಸದಸ್ಯರು ಹಿರಿಯ ನಾಗರಿಕರ ಯೋಗಕ್ಷೇಮ ವಿಚಾರಿಸಿ ಅವರಿಗೆ ಅಗತ್ಯವಾದ ಧವಸ ಧಾನ್ಯಗಳನ್ನು ದೇಣಿಗೆಯಾಗಿ ನೀಡಿದರು.
ವೃದ್ಧಾಶ್ರಮದ ಸಂಯೋಜಕರಾದ ಎಂ ಎಸ್ ಚೌಗಲಾ ಮಾತನಾಡಿ ಸಮಾಜದ ಹಿರಿಯ ನಾಗರಿಕರ ಸೇವೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಇಂತಹ ಸೇವಾ ಕಾರ್ಯಗಳು ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಪೊಲೀಸ್ ಸ್ನೇಹ ಜೀವಿಗಳ ತಂಡದ ಸಮಾಜಸೇವಾ ಕಾರ್ಯವನ್ನು ಶ್ಲಾಘಿಸಿ ವೃದ್ಧಾಶ್ರಮದ ಪರವಾಗಿ ತಂಡದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಇಂತಹ ಸಮಾಜಮುಖಿ ಕಾರ್ಯಗಳು ಮುಂದೆಯೂ ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಪೋಲಿಸ್ ಸ್ನೇಹ ಜೀವಿಗಳ ತಂಡದ ಸದಸ್ಯರಾದ ರಮೇಶ ಮಡಿವಾಳರ, ಸತೀಶ ನಾಯಿಕ, ಸೋಮಶೇಖರ ಹಕಾರಿ, ರುದ್ರಪ್ಪಾ ಕೋರಿಕೊಪ್ಪ, ಫಕೀರಪ್ಪಾ ಕುರಿ, ದುಂಡಪ್ಪಾ ಮಲಕಾಪುರೆ, ಈರಣ್ಣಾ ಬೆಳಗಲಿ, ಎಸ್ ಜಿ ಸಿದ್ನಾಳ, ಬಿ ಎಮ್ ಫರೀಟ, ಆರ್ ಎಂ ಯರಜರಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವೈಜಯಂತಿ ಚೌಗಲಾ ಉಪಸ್ಥಿತರಿದ್ದರು.