ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದಿಂದ ಭವ್ಯ ತಿರಂಗಾ ಯಾತ್ರೆ..

ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದಿಂದ ಭವ್ಯ ತಿರಂಗಾ ಯಾತ್ರೆ..

ಭಾರತದಂತ ಪುಣ್ಯಭೂಮಿಯಲ್ಲಿ ಇರುವುದೇ ನಮ್ಮ ಭಾಗ್ಯ..

ಯುವರಾಜ ಜಾಧವ, ಅಧ್ಯಕ್ಷರು, ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ..

ಬೆಳಗಾವಿ : ಭಾರತೀಯ ಜನತಾ ಪಕ್ಷದ ಬೆಳಗಾವಿ ಗ್ರಾಮೀಣ ಮಂಡಲದ ವತಿಯಿಂದ ಆಯೋಜಿಸಲಾದ ಭವ್ಯ ತಿರಂಗಾ ಯಾತ್ರೆಯ ಅಂಗವಾಗಿ ಹಿಂಡಲಗಾ ಗ್ರಾಮದಲ್ಲಿ ಅತ್ಯಂತ ಉತ್ಸಾಹದಿಂದ ತಿರಂಗಾ ರ‍್ಯಾಲಿಯನ್ನು ನಡೆಸಲಾಯಿತು.

ಈ ತಿರಂಗಾ ಯಾತ್ರೆಯಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಕೈಯಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಿಡಿದು “ಭಾರತ್ ಮಾತಾ ಕೀ ಜೈ” ಹಾಗೂ “ವಂದೇ ಮಾತರಂ” ಘೋಷಣೆಗಳೊಂದಿಗೆ ಇಡೀ ಪರಿಸರ ದೇಶಭಕ್ತಿಯ ವಾತಾವರಣದಿಂದ ಕಂಗೊಳಿಸಿತು.

ಈ ಸಂದರ್ಭದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಯುವರಾಜ ಜಾಧವ ಅವರು, ನಾವು ಭಾರತ ದೇಶದಂತ ಪುಣ್ಯ ಭೂಮಿಯಲ್ಲಿ ಇರುವುದೇ ಭಾಗ್ಯ, ತಿರಂಗಾ ಇದು ಎಲ್ಲಾ ಭಾರತೀಯರ ಹೆಮ್ಮೆ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ, ಈ ತ್ರಿವರ್ಣ ಧ್ವಜವನ್ನು ಹಿಡಿದರೆ ಸಾಕು ಜನ್ಮ ಸಾರ್ಥಕ ಎನಿಸುತ್ತದೆ, ದೇಶಾಭಿಮಾನ ಇಮ್ಮಡಿಯಾಗುತ್ತದೆ, ಭಾರತೀಯರಾದ ನಾವೆಲ್ಲರೂ ಇಂತಹ ಪವಿತ್ರ ಕಾರ್ಯದಲ್ಲಿ ಭಾಗಿಯಾಗುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದಿದ್ದಾರೆ.

ಈ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ, ದೇಶಪ್ರೇಮ ತೋರಿ, ರ್ಯಾಲಿಯನ್ನು ಯಶಸ್ವಿಗೊಳಿಸಿದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಹಾಗೂ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *