ಬುಡಾ ಅಧ್ಯಕ್ಷರಾಗಿ ಶಾಸಕ ಆಸೀಫ್ ಸೇಠ್ ಅಧಿಕಾರ ಸ್ವೀಕಾರ..
ಶುಭ ಕೋರಿದ ಪಾಲಿಕೆ ಆಯುಕ್ತ ಹಾಗೂ ಅಧಿಕಾರಿಗಳು..
ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಶಿಫ್ (ರಾಜು) ಸೇಠ್ ಅವರಿಗೆ ಪಾಲಿಕೆಯ ಆಯುಕ್ತರು, ನಗರ ಸೇವಕರು ಹಾಗೂ ಅಧಿಕಾರಿಗಳು ಶುಭಾಶಯ ತಿಳಿಸಿದ್ದಾರೆ.
ನಗರದ ಬುಡಾ ಕಛೇರಿಯಲ್ಲಿ ನೂತನ ಅಧ್ಯಕ್ಷರಿಗೆ ಪಾಲಿಕೆಯ ಆಯುಕ್ತರಾದ ಕಾರ್ತೀಕ ಎಂ, ಉಪ ಆಯುಕ್ತರುಗಳಾದ ಡಾ ಸಿದ್ದು ಹುಲ್ಲೋಳ್ಳಿ, (ಕಂದಾಯ) ಲಕ್ಷ್ಮಿ ನಿಪ್ಪಾಣಿಕರ (ಅಭಿವೃದ್ಧಿ), ಉತ್ತರದ ವಲಯ ಆಯುಕ್ತರಾದ ಅನಿಲ ಬೋರಗಾವಿ, ಸುಶಾಂತ ಕಾಂಬ್ಳೆ, ಅಭಿಯಂತರ ಅಂಕಿತ, ಸರ್ಕಾರದ ನಾಮನಿರ್ದೇಷಿತ ಪಾಲಿಕೆ ಸದಸ್ಯರಾದ ರಮೇಶ್ ಸೊಂಟಕ್ಕಿ, ದಿನೇಶ ನಾಶಿಪುಡಿ, ಎಂಈಎಸ್ ನಗರ ಸೇವಕ ರವಿ ಸಾಲುಂಕೆ, ನಗರ ಸೇವಕ ಮುಜಾಮಿಲ್ ದೋಣಿ, ರಿಯಾಜ ಕಿಲ್ಲೆದಾರ ಮತ್ತಿತರರು ಹೂಗುಚ್ಚ ನೀಡಿ ಶುಭಾಶಯ ತಿಳಿಸಿದ್ದಾರೆ.

ಈ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡ ಆಶಿಫ್ (ರಾಜು) ಸೇಠ್ ಅವರು ನಗರದ ಅಭಿವೃದ್ಧಿಗೆ ಎಲ್ಲರೂ ಸೇರಿಕೊಂಡು ಕೆಲಸ ಮಾಡೋಣ ಎಂದರು. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬುಡಾದ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಫಿರೋಜ್ ಸೇಠ್, ಬುಡಾ ಆಯುಕ್ತರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.