ರಾಮನಗರಕ್ಕೆ ಶಾಸಕ ಆಸಿಫ್ (ರಾಜು) ಸೇಠ್ ಭೇಟಿ..
ಸ್ಥಳೀಯರ ಸಮಸ್ಯೆ ಆಲಿಸಿದ ಶಾಸಕರು..
ಬೆಳಗಾವಿ : ಶಾಸಕ ಆಶಿಫ್ (ರಾಜು) ಸೇಠ್ ಅವರು ಇಂದು ರಾಮನಗರ ಸ್ಥಳೀಯ ನಾಗರಿಕ ಸಮಸ್ಯೆಗಳು ಆಲಿಸಿ, ಅಲ್ಲಿಯ ಅಭಿವೃದ್ಧಿ ಕಾರ್ಯಗಳ ಕುರಿತು ನಿವಾಸಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿಯ ಸಮಯದಲ್ಲಿ, ಶಾಸಕರು ಆ ಪ್ರದೇಶದಲ್ಲಿ ಸಂಚರಿಸಿ , ಮೂಲಸೌಕರ್ಯಗಳನ್ನು ಪರಿಶೀಲಿಸಿದರು ಮತ್ತು ನಿವಾಸಿಗಳೊಂದಿಗೆ ಮಾತನಾಡಿದರು, ಅವರ ಸಮಸ್ಯೆ ಮತ್ತು ಅವಶ್ಯಕತೆಗಳನ್ನು ಅರ್ಥಮಾಡಿಕೊಂಡರು. ಸಮಸ್ಯೆಗಳನ್ನು ಪರಿಹರಿಸಲಾಗುವುದು ಮತ್ತು ಈ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

ಶಾಸಕರ ನೇರವಾಗಿ ತಮ್ಮ ನಗರಕ್ಕೆ ಆಗಮಿಸಿದ ಖುಷಿ ಸ್ಥಳೀಯರ ಮುಖದಲ್ಲಿ ಕಾಣುತ್ತಿತ್ತು, ಶಾಸಕರ ಈ ಕಾರ್ಯವನ್ನು ಮುಕ್ತ ಕಂಠದಿಂದ ಸ್ಥಳೀಯರು ಶ್ಲಾಘಿಸಿದ್ದಾರೆ.