ರಜೆ ಮೇಲೆ ತೆರಳಿದ್ದ RI ಮೇಲೆ ಜರುಗಿಸಿದ ಕ್ರಮ, ಕೆಲಸದ ಮೇಲಿದ್ದ RI, ARO, ಮೇಲೆ ಯಾಕಿಲ್ಲ ??

ಪಾಲಿಕೆಯ ಕಳುವಾದ ಕಡತದ ಪ್ರಕರಣದಲ್ಲಿ ದ್ವಂದ್ವನೀತಿ..

ರಜೆ ಮೇಲೆ ತೆರಳಿದ್ದ RI ಮೇಲೆ ಜರುಗಿಸಿದ ಕ್ರಮ, ಕೆಲಸದ ಮೇಲಿದ್ದ RI, ARO, ಮೇಲೆ ಯಾಕಿಲ್ಲ ??

ಬೇರೆ ನಗರ ಸೇವಕರೂ ಕೂಡಾ ಜಿರಗ್ಯಾಳರಂತೆ ವೃತ್ತಿಪರತೆ ಮೆರೆದು, ಪಾಲಿಕೆ ಆಸ್ತಿ ಉಳಿಸಬೇಕು..

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ತನ್ನ ರಾಜಕೀಯ ವೈಪರಿತ್ಯ ಹಾಗೂ ಬ್ರಹತ್ತತೆಗೆ ಎಷ್ಟು ಹೆಸರುವಾಸಿಯಾಗಿದೆಯೋ, ಅಷ್ಟೇ ಹೆಸರುವಾಸಿ ತನ್ನ ಆಡಳಿತದ ವೈಪಲ್ಯದಲ್ಲಿಯೂ ಆಗಿದೆ ಎಂಬ ಸಂಶಯ ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ..

ಕಳೆದ ಏಳೆಂಟು ತಿಂಗಳಿನಿಂದ ವಾರ್ಡ ಸಂಖ್ಯೆ 43ರ ಅಡ್ರೆಸ್ ಅಪಾರ್ಟ್ಮೆಂಟಿಗೆ ಸಂಭಂದಿಸಿದ ಕಡತ (ಫೈಲ್) ಕಳುವಾಗಿದೆ ಎಂದು, ಆ ವಾರ್ಡಿನ ನಗರಸೇವಕರಾದ ಸಂದೀಪ ಜಿರಗ್ಯಾಳ ಅವರು ಪಾಲಿಕೆಯ ಸ್ಥಾಯಿ ಸಮಿತಿ ಸಭೆಯಲ್ಲಿ ಹಾಗೂ ಪರಿಷತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಹಲವಾರು ಭಾರಿ ಗಂಭೀರ ಚರ್ಚೆಗಳು ನಡೆದಿವೆ, ಆದರೆ ಇನ್ನುವರೆಗೂ ಆ ಫೈಲ್ ಲಭ್ಯವಾಗಿಲ್ಲ..

ಆ ಕಳುವಾದ ಕಡತದ ವಿಷಯದಲ್ಲಿ ಆ ಸ್ಥಾನದಲ್ಲಿ ಮೊದಲು ಕಾರ್ಯನಿರ್ವಹಿಸುತ್ತಿದ್ದ ಹಾಗೂ ವೈದ್ಯಕೀಯ ರಜೆಯಲ್ಲಿದ್ದ ಶೃತಿ ಛಲವಾದಿ ಎಂಬ ಕಂದಾಯ ನಿರಿಕ್ಷಕಿಯನ್ನು ಅವರ ಸ್ಥಾನದಿಂದ ವರ್ಗಾವಣೆ ಮಾಡುವ ಮೂಲಕ ಅವರ ಮೇಲೆ ಕ್ರಮ ಜರುಗಿಸಲಾಗಿದ್ದು, ಖಾಲಿಯಾದ RI ಸ್ಥಾನಕ್ಕೆ ಮೌಖಿಕ ಆದೇಶದ ಮೂಲಕ ಚಾರ್ಜ್ ತಗೆದುಕೊಂಡು ಕೆಲಸ ಮಾಡುತ್ತಿದ್ದ ಪವನ ದೇವರವಾಡಿ ಮೇಲೆ ಇನ್ನು ಯಾವ ಕ್ರಮ ಆಗಿಲ್ಲ..

ಪವನ ದೇವಾರವಾಡಿ ಬಂದ ಮೇಲೂ ಕಡತ ಮಾಯವಾಗಿರಬಹುದಲ್ಲ?? ಆಮೇಲೆ ಸಂತೋಷ ಒಸಿ ಆ ಸ್ಥಾನ ನೋಡಿಕೊಂಡರು, ಜೊತೆಗೆ ಎಆರ್ಒ ರವಿ ಮಾಸ್ತಿಹೊಳಿ ಉಸ್ತುವಾರಿಯಲ್ಲಿ ಕೂಡಾ ಈ ಕಡತಕ್ಕೆ ಸಹಿ ಆಗಿದ್ದು, ಶೃತಿ ಛಲವಾದಿ ಅವರು ವೈದ್ಯಕೀಯ ರಜೆಯ ಮೇಲೆ ಹೋದ ನಂತರ, ಇವರೇ ಆ ಸ್ಥಾನಕ್ಕೆ ಸಂಬಂದಿಸಿದ ದಾಖಲೆಗಳ, ಕಡತಗಳ ಜವಾಬ್ದಾರಿ ಹೊಂದಿದವರಾಗಿದ್ದು, ಇವರ ಮೇಲೆ ಇನ್ನು ಯಾಕೆ ಕ್ರಮ ಆಗಿಲ್ಲ ???

ಯಾರ ಪ್ರಭಾವದಿಂದ ಇವರು ನಿಶ್ಚಿಂತೆಯಿಂದ ಅಲೆದಾಡುತ್ತಿದ್ದಾರೆ ?? ಮೇಲಾಧಿಕಾರಿಗಳು ಇವರ ಮೇಲೆ ಇನ್ನು ಯಾಕೆ ಕ್ರಮ ತೆಗೆದುಕೊಂಡಿಲ್ಲ?? ಈ ವಿಷಯ ಶಾಸಕರ, ಸಚಿವರ ಗಮನಕ್ಕೆ ಬಂದಿರುವ ಬಗ್ಗೆ ಮಾಹಿತಿಯಿಲ್ಲ..

ಇನ್ನಾದರೂ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತು, ಕಡತ ಕಳುವಿನ ವಿಷಯದಲ್ಲಿ ಜವಾಬ್ದಾರರಾದ ಉಳಿದ ಕಂದಾಯ ವಿಭಾಗದ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಿ, ಅವರನ್ನು ಕೂಡಾ ವಿಚಾರಣೆ ಮಾಡಬೇಕು, ಇಲ್ಲವಾದರೆ ಈ ಕಡತ ಕಳುವಿನ ಕಗ್ಗಂಟು ಪಾಲಿಕೆಯ ಉನ್ನತಾಧಿಕಾರಿಗಳನ್ನು ಕಂಗೆಡಿಸಬಹುದು..

ಇನ್ನು ಪಾಲಿಕೆಯ 58 ನಗರ ಸೇವಕರು ಕೂಡಾ, 43 ವಾರ್ಡಿನ ನಗರ ಸೇವಕರಾದ ಸಂದೀಪ್ ಜಿರಗ್ಯಾಳ ಅವರಂತೆ ವೃತ್ತಿಪರತೆಯಿಂದ ತಮ್ಮ ತಮ್ಮ ವಾರ್ಡಿನಲ್ಲಿರುವ ಅನಧಿಕೃತ, ಕಡಿಮೆ ತೆರಿಗೆ ನೀಡುವ, ಪಾಲಿಕೆ ಆಸ್ತಿ ಕಬಳಿಸಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು, ಪಾಲಿಕೆಗೆ ಹಾಗೂ ಸರ್ಕಾರಕ್ಕೆ ಆದಾಯ ತರುವ ನ್ಯಾಯಬದ್ಧವಾದ ಕಾರ್ಯ ಮಾಡಿದರೆ ಸಾರ್ಥಕತೆ, ಅಧಿಕಾರ ಒದಗಿ ಬಂದಾಗ ಆ ಸ್ಥಾನಕ್ಕೆ ನ್ಯಾಯ ನೀಡಬೇಕು, ಸಂದೀಪರಂತೆ ಬೇರೆ ನಗರ ಸೇವಕರು ಇಂತಹ ಪ್ರಕರಣಗಳನ್ನು ಹೊರತರಬೇಕು..

ವರದಿ ಪ್ರಕಾಶ ಕುರಗುಂದ..