ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ..

ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ..

ವಿಶ್ವ ಕಲ್ಯಾಣದ ಸಂದೇಶ ಹೊತ್ತ ಬ್ರಹತ್ ಬೈಕ್ ರ್ಯಾಲಿ..

ಬೆಳಗಾವಿ : ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಬೆಳಗಾವಿಯ ಸುಮಾರು 15 ಲಿಂಗಾಯತ ಸಂಘಟನೆಗಳ ಸಹಭಾಗಿತ್ವದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಬಸವ ಜಯಂತಿಯ ಉತ್ಸವ ಸಮಿತಿ ಬೆಳಗಾವಿ 2025ರ ಪ್ರಮುಖರು ಹೇಳಿದ್ದಾರೆ.

ಶುಕ್ರವಾರ ದಿನಾಂಕ 25/04/2025 ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಯಂತಿ ಉತ್ಸವ ಸಮಿತಿಯ ಪ್ರಮುಖರು, ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಅತೀ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ನಗರದ ವಿವಿಧ ಲಿಂಗಾಯತ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬಸವತತ್ವ ಪರಿಪಾಲಕರು ಭಾಗಿಯಾಗುವ ಜಯಂತಿಯ ಉದ್ಘಾಟನೆಯು ಮಠಾಧೀಶರ ಅಮೃತ ಹಸ್ತದಿಂದ ಚಾಲನೆಗೊಳ್ಳುವದು ಎಂಬ ಮಾಹಿತಿ ನೀಡಿದ್ದಾರೆ.

ಬಸವತತ್ವದ ಬೆಳಕನ್ನು ಮನೆಮನೆಗೂ, ಮನ ಮನಸ್ಸಿಗೂ ಕೊಂಡೊಯ್ಯುವ ನಿಟ್ಟಿನಲ್ಲಿ ಈ ವರ್ಷದ ಬಸವ ಜಯಂತಿಯನ್ನು ವಿಜೃಂಭಣೆ, ಭಕ್ತಿ ಭಾವದಿಂದ ಆಚರಣೆ ಮಾಡುತ್ತಿದ್ದು, ಮೊದಲಿಗೆ ದಿನಾಂಕ 27/04/2025ರ ಭಾನುವಾರದಂದು ಬ್ರಹತ್ ಬೈಕ್ ರ್ಯಾಲಿಯನ್ನು ಆಯೋಜನೆ ಮಾಡಿದ್ದು, ವಿಶ್ವ ಕಲ್ಯಾಣದ ಸಂದೇಶದ ಮೂಲಕ ಈ ಬೈಕ್ ರ್ಯಾಲಿ ಬಸವೇಶ್ವರ ವೃತ್ತದಿಂದ ರಾಮತೀರ್ಥ ನಗರದವರೆಗೆ ಜರುಗುವುದು ಎಂದಿದ್ದಾರೆ.

ದಿನಾಂಕ 30/04/2025ರ ಬುಧವಾರದಂದು ನಗರದ ಎಲ್ಲಾ ಸಂಘಟನೆಗಳಲ್ಲಿ ಮತ್ತು ತಮ್ಮ ಮನೆ ಮನಗಳಲ್ಲಿ ಗುರು ಬಸವ ಜಯಂತಿಯನ್ನು ಆಚರಣೆ ಮಾಡುತ್ತಾರೆ, ದಿನಾಂಕ 04/05/2025ರ ಭಾನುವಾರದಂದು ಸಂಜೆ 4 ಗಂಟೆಗೆ ಜಯಂತಿಯ ಬ್ರಹತ್ ಮೆರವಣಿಗೆಗೆ ಚಾಲನೆ ದೊರೆಯುತ್ತಿದ್ದು, ವಿಶ್ವಗುರು ಬಸವಣ್ಣನವರ ಪ್ರತಿಮೆಯೊಂದಿಗೆ ನಗರದ ರಾಣಿ ಚೆನ್ನಮ್ಮ ವೃತ್ತದಿಂದ, ಕಲಾತಿವೆಸ್, ಗಣಪತಿ ಗಲ್ಲಿ, ಮಾರುತಿಗಲ್ಲಿ ಮುಖಾಂತರ ಲಿಂಗರಾಜ್ ಕಾಲೇಜ್ ವರೆಗೆ ಮೆರವಣಿಗೆ ಜರುಗುವದು ಎಂದಿದ್ದಾರೆ.

ಈ ಎಲ್ಲಾ ವಿಶೇಷ ಕಾರ್ಯಕ್ರಮಗಳಲ್ಲಿ ನಾಡಿನ ಪೂಜ್ಯರು, ಸಮಾಜದ ಮುಖಂಡರು, ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಗಣ್ಯರು ಭಾಗಿಯಾಗುವರುದ್ದು, ಬಸವತತ್ವ ಬೆಳಕಿನಲ್ಲಿ ಎಲ್ಲರೂ ಭಾಗಿಯಾಗಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯ ಅರಳುವಂತೆ ಎಲ್ಲರೂ ಏಕತೆಯಿಂದ ಮುಂದೆ ಸಾಗೋಣ ಎಂಬ ಸಂದೇಶ ನೀಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..